ಸೋಮವಾರ, ಆಗಸ್ಟ್ 19, 2024

ಅತ್ಯಾಚಾರ ಮತ್ತು ಹತ್ಯೆಯನ್ನ ಖಂಡಿಸಿ ಎಐಎಂಐಎಂ ಮನವಿ



ಸುದ್ದಿಲೈವ್/ಶಿವಮೊಗ್ಗ


ಉತ್ತರಖಂಡ್ ಮತ್ತು ಕೊಲ್ಕತ್ತಾದಲ್ಲಿ ವೈದ್ಯಕೀಯ ಕ್ಷೇತ್ರದ ನರ್ಸ್ ಮತ್ತು ವೈದ್ಯೆಯ ಮೇಲೆ ನಡೆದ ಅತ್ಯಾಚಾರ ಮತ್ತು ಹತ್ಯೆಯನ್ನ‌ ಖಂಡಿಸಿ ಎಐಎಂಐಎಂ ಶಿವಮೊಗ್ಗ ಘಟಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ.‌


ಇತ್ತೀಚಿನ ದಿನಗಳಲ್ಲಿ ನಮ್ಮ ಆರೋಗ್ಯ ವೃತ್ತಿಪರರ ಮೇಲೆ ನಡೆದ ಭಯಾನಕ ಹಿಂಸಾಚಾರಗಳು  ತೀವ್ರವಾಗಿ ದುಃಖಿತರನ್ನಾಗಿಸಿವೆ. ಕೋಲ್ಕತ್ತಾದ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯೆಯ ಮೇಲೆ ಅಮಾನುಷ ಅತ್ಯಾಚಾರ ಮತ್ತು ಹತ್ಯೆ, ಉತ್ತರಾಖಂಡದಲ್ಲಿ ನರ್ಸ್‌ನ ಮೇಲೆ ನಡೆದ ಅತ್ಯಾಚಾರ ಮತ್ತು ಹತ್ಯೆ ಎರಡು ಹೀನಕೃತ್ಯಗಳನ್ನು ತಕ್ಷಣವೇ ತಡೆಯಲು ಸರ್ಕಾರಗಳು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. 


ಜನಸೇವೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಡುವವರಿಗೆ ತುರ್ತು ನ್ಯಾಯ ಮತ್ತು ಬಲವಾದ ರಕ್ಷಣೆ ಸಿಗಬೇಕಿದೆ, ನಮ್ಮ ಆರೋಗ್ಯ ಕಾರ್ಯಕರ್ತರ ಪರವಾಗಿ ತ್ವರಿತ ಕ್ರಮ ಮತ್ತು ಸೂಕ್ತ ರಕ್ಷಣೆಗಳನ್ನು ತಕ್ಷಣ ಕೈಗೊಳ್ಳಬೇಕೆಂದು ಮನವಿಯಲ್ಲಿ ಸಂಘಟನೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದೆ.  


ಶಿವಮೊಗ್ಗ ಜಿಲ್ಲಾಧಿಕಾರಿಗಳ ಕಚೇರಿ ಎದುರು ನಡೆದ ಈ ಪ್ರತಿಭಟನೆಯಲ್ಲಿ ಯುವ ಘಟಕದ ಜಿಲ್ಲಾಧ್ಯಕ್ಷರು ಮೊಹಮ್ಮದ್ ರಫೀ, ನಗರಾಧ್ಯಕ್ಷರು ಮೊಹಮ್ಮದ್ ವಸೀಕ್,  ತೌಸೀಫ್ ಅಹಮದ್, ಮೊಹಮ್ಮದ್ ಖಮರುಜ್ಜಮಾ, ಜುನೇದ್ ಅಖ್ತರ್, ಶಾಬಾಜ್, ಮುನಾವರ್ ಪಾಷಾ ಮತ್ತು ಪಕ್ಷದ ಹಲವು ಕಾರ್ಯಕರ್ತರು ಉಪಸ್ಥಿತರಿದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ