ಸುದ್ದಿಲೈವ್/ಶಿವಮೊಗ್ಗ
ವಾಣಿಜ್ಯ ಸಂಕೀರ್ಣದ ಸಿಬ್ಬಂದಿಯ ಮೇಲೆ ವ್ಯಕ್ತಿಯೋರ್ವ ಮಚ್ಚು ಹಿಡಿದುಕೊಂಡು ಬಂದು ಬೀಸಿದ ವಿಡಿಯೋವೊಂದು ವೈರಲ್ ಆಗಿದ್ದು, ಮಚ್ಚು ಬೀಸಿದಾತನನ್ನ ರೌಡಿ ಶೀಟರ್ ಎಂದು ಹೇಳಲಾಗುತ್ತಿದೆ. ಪ್ರಕರಣ ವಿನೋಬ ನಗರ ಠಾಣೆಯಲ್ಲಿ ನಡೆದಿದ್ದು ಘಟನೆ ಬಗ್ಗೆ ಸ್ಥಳೀಯರು ಆತಂಕ ವ್ಯಕ್ತವಾಗುತ್ತಿದೆ.
ನಗರದ ಸವಳಂಗ ರಸ್ತೆಯ ಎಲ್‌ಬಿಎಸ್ ನಗರದಲ್ಲಿರುವ ಪೋಲಾರ್ ಬೇರ್. ಮತ್ತು ಮೆಟ್ಲೆಸ್ ಬಳಿ ಆಗಸ್ಟ್ 16 ರ ರಾತ್ರಿ ಸುಮಾರು 12ರಿಂದ ಒಂದು ಗಂಟೆಯ ವೇಳೆಗೆ ತನಕ ಗಲಾಟೆ ನಡೆದಿದೆ ಎನ್ನಲಾಗಿದೆ. 12:30 ಕ್ಕೆ ದ್ವಿಚಕ್ರ ವಾಹನದಲ್ಲಿ ಮೂರು ಜನ ಬಂದಿದ್ದು, ಇದರಲ್ಲಿ ಓರ್ವ ಮಚ್ಚು ಹಿಡಿದುಕೊಂಡು ಬಂದು ಪೊಲಾರ್ ಬೇರ್ ಸಿಬ್ಬಂದಿ ಮೇಲೆ ಏಕಾಏಕಿ ಅಟ್ಯಾಕ್ ಗೆ ಮುಂದಾಗುತ್ತಾನೆ.
ಇದಲ್ಲಿ ಓರ್ವ ಯುವತಿ ಸಹ ದ್ವಿಚಕ್ರವಾಹನದಲ್ಲಿ ಬರುತ್ತಾಳೆ. ಯುವತಿಯ ಹಾಜರಾತಿ ಕುತೂಹಲ ಮೂಡಿಸಿದೆ.
ಕ್ಷಣಾರ್ಧದಲ್ಲಿ ಸಿಬ್ಬಂದಿ ಆತನಿಂದ ಎಸ್ಕೇಪ್ ಆಗುತ್ತಾನೆ. ಕೈಯಲ್ಲಿ ಲಾಂಗು ಹಿಡಿದು ಅಟಾಕ್ ಮಾಡಲು ಯತ್ನಿಸಿದ ವಿಡಿಯೋ ಸಿಸಿಟಿವಿನಲ್ಲಿ ರೆಕಾರ್ಡ್ ಆಗಿದೆ.. ಅದೃಷ್ಟ ವಶಾತ್ ಸಿಬ್ಬಂದಿ ಶೆಟ್ಟರ್ ಎತ್ತು ಒಳಗಡೆ ಓಡಿ ಹೋಗುತ್ತಾನೆ.
ನಂತರ ಮಚ್ಚು ಹಿಡಿದ ವ್ಯಕ್ತಿ ಶೆಟ್ಟರ್ ಮತ್ತು ಡೋರ್ ಕೆಳಗೆ ಲಾಂಗು ನಿಂದ ಬೀಸುತ್ತಾನೆ. ಪ್ರಕರಣ ವಿನೋಬನಗರ ನಗರ ಠಾಣ ವ್ಯಾಪ್ತಿಯಲ್ಲಿ ನಡೆದಿದೆ. ಮಚ್ಚುಬೀಸಿದಾತ ಓರ್ವ ರೌಡಿ ಎಂದು ಸ್ಥಳೀಯರು ಹೇಳುತ್ತಿದ್ದಾರೆ.