ಸುದ್ದಿಲೈವ್/ಶಿವಮೊಗ್ಗ
ಫೀನಿಕ್ಸ್ (Phoenix) ಎಂಬ ಹೆಸರೇ ಒಂದು ವಿಭಿನ್ನ, Phoenix ಎಂದರೆ ತನ್ನ ಬೂದಿಯಿಂದಲೇ ಎದ್ದುಬರುವ ಕಾಲ್ಪನಿಕ ಪಕ್ಷಿ ಹಾಗೂ ಅಮರತ್ವವನ್ನು ಬಿಂಬಿಸುವ ಹೆಸರು. ಈ ಒಂದು ವಿಭಿನ್ನ ಶೀರ್ಷಿಕೆಯನ್ನು ಇಟ್ಟುಕೊಂಡು , ದೊಡ್ಡದಾದ ಪ್ರಯತ್ನವನ್ನ ಶಿವಮೊಗ್ಗದ ಪ್ರತಿಭೆಗಳು ಮಾಡಿದ್ದಾರೆ.
ಈಗಾಗಲೇ ಥಗ್ಸ್ ಅಫ್ ರಗಡ ಕಿರು ಚಿತ್ರದಿಂದ ಸದ್ದುಗೊಂಡ ಸಿನಿಮಾಟೋಗ್ರಾಫರ್ ಅನುಷ್ ಗೌಡ ರವರು ಫೀನಿಕ್ಸ್ ಕಿರುಚಿತ್ರವನ್ನು ನಿರ್ದೇಶನ ಮಾಡಿದ್ದು, ಅಶ್ವಿನ್ ರವರು ಸಿನಿಮ್ಯಾಟೋಗ್ರಾಫಿ ಮಾಡಿದ್ದಾರೆ.
ಈ ಕಿರುಚಿತ್ರಕ್ಕೆ Minus X Minus ತಂಡ ಹಣ ಹೂಡಿದ್ದು KSS CREATIONS ಅಸೋಸಿಯೇಷನ್ ಮಾಡಿದ್ದಾರೆ. ಗಗನ್, ಪೂರ್ಣಚಂದ್ರ, ನಿಖಿಲ್ ಕುಮಾರ್, ರೋಹನ್, ಸೂರಜ್, ಕಿರಣ್ ರವರು ಈ ಕಿರು ಚಿತ್ರದಲ್ಲಿ ಅಭಿನಯಿಸಿದ್ದಾರೆ.
Phoenix ಇದೊಂದು ದೊಡ್ಡ ಮಟ್ಟದ Action ಕಿರು ಚಿತ್ರ. ಅನುಷ್ ಗೌಡ ರವರ ದೊಡ್ಡ ಮಟ್ಟದ ಆಲೋಚನೆ ಹಾಗೂ ಮೇಕಿಂಗ್ ಸ್ಟೈಲ್ ಈ ಕಿರು ಚಿತ್ರದಲ್ಲಿ ನೀವು ಕಾಣಬಹುದು ಹಾಗೂ ಕಿರು ಚಿತ್ರದಲ್ಲೇ ಇದೊಂದು ಹೊಸದಾದ ಪ್ರಯತ್ನ ,
ದೊಡ್ಡ ದೊಡ್ಡ ಸಿನಿಮಾಗಳು ಬಳಸುವಂತಹ VFX ಟೆಕ್ನಾಲಜಿ ಕೂಡ ಈ ಕಿರು ಚಿತ್ರದಲ್ಲಿ ಬಳಸಲಾಗಿದೆ. ಈಗಾಗಲೇ ಟೀಸರ್ Minus X Minus ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದ್ದು ಪ್ರೇಕ್ಷಕರಿಂದ ಉತ್ತಮವಾದ ಪ್ರತಿಕ್ರಿಯೆ ಬಂದಿದೆ.
ಆಗಸ್ಟ್ 10 ಕ್ಕೆ Phoenix ಕಿರುಚಿತ್ರ Minus X Minus ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಲಿದ್ದು , ಈ ಹೊಸದಾದ ಪ್ರಯತ್ನಕ್ಕೆ ನಿಮ್ಮೆಲ್ಲರ ಬೆಂಬಲ ಇರಲಿ ಹಾಗೂ Phoenix ಕಿರುಚಿತ್ರ ಯಾವ ಮೂವಿಗೂ ಕಮ್ಮಿ ಇಲ್ಲ , ಎಂದು Phoenix ಕಿರು ಚಿತ್ರದ Marketing Head ಕಿಶನ್ ರವರು ತಿಳಿಸಿದ್ದಾರೆ. ಟೀಸರ್ ಲಿಂಕ್ https://youtu.be/7UMV6Ps_iUo?si=CiX_firpMxAXPE0g
ಇದನ್ನೂ ಓದಿ-https://www.suddilive.in/2024/08/blog-post_5.html