ಸುದ್ದಿಲೈವ್/ಶಿವಮೊಗ್ಗ
ನೂತನ ಡಿಡಿಪಿಐ ಆಗಿ ಮಂಜುನಾಥ್ ಶಿವಮೊಗ್ಗಕ್ಕೆ ಆಗಮಿಸಿದ್ದಾರೆ. ನಿನ್ನೆ ಡಿಡಿಪಿಐ ಕಚೇರಿಯಲ್ಲಿ ಅಧಿಕಾರ ವಹಿಸಿಕೊಂಡಿರುವ ಮಂಜುನಾಥ್ ಮೊದಲು ಚಿಕ್ಕಮಗಳೂರಿನಲ್ಲಿ ಇಒಆಗಿದ್ದರು.
ಚಿಕ್ಕಮಂಗಳೂರು ಡಿಡಿಪಿಐ ಕಚೇರಿಯಲ್ಲಿ ಶಿಕ್ಷಣ ಅಧಿಕಾರಿಯಾಗಿದ್ದ ಮಂಜುನಾಥ್ ಶಿವಮೊಗ್ಗ ಡಿಡಿಪಿಐ ಆಗಿ ವರ್ಗಾವಣೆಯಾಗಿದ್ದಾರೆ. ಚಿಕ್ಕಮಗಳೂರಿನ ಇಒ ಆಗಿ ಶಿವಮೊಗ್ಗದ ಬಿಇಒ ನಾಗರಾಜ್ ವರ್ಗವಾಗಿದ್ದಾರೆ.
ಬಿಇಒ ನಾಗರಾಜ್ ಅವ ಜಾಗಕ್ಕೆ ರಮೇಶ್ ನಾಯ್ಕ್ ವರ್ಗವಾಗಿದ್ದಾರೆ. ಶಿವಮೊಗ್ಗ ಡಿಡಿಪಿಐ ಕಚೇರಿಯಲ್ಲಿ ಶಿಕ್ಷಣ ಅಧಿಕಾರಿಯಾಗಿದ್ದ ಲೋಕೇಶ್ ಶಿಕಾರಿಪುರ ಬಿಇಒ ಆಗಿ ವರ್ಗಾವಣೆಯಾಗಿದ್ದಾರೆ. ಶಿವಮೊಗ್ಗದ ಶಿಕ್ಷಣಾಧಿಕಾರಿ ಪೋಸ್ಟ್ ಸಧ್ಯಕ್ಕೆ ಖಾಲಿ ಇದೆ.
ಶಿವಮೊಗ್ಗದ ಡಿಡಿಪಿಐ ಆಗಿದ್ದ ಪರಮೇಶ್ವರ್ ಬೆಂಗಳೂರು ಸಮಗ್ರ ಶಿಕ್ಷಣ ಕರ್ನಾಟಕದ ಕಾರ್ಯಕ್ರಮ ಅಧಿಕಾರಿಯಾಗಿ ವರ್ಗವಾಗಿದ್ದಾರೆ. ಕಳೆದ ಎರಡು ವರ್ಷದಿಂದ ಡಿಡಿಪಿಐ ಆಗಿದ್ದ ಪರಮೇಶ್ವರ್ ಶಿವಮೊಗ್ಗದಲ್ಲಿ ಉತ್ತಮ ಸೇವೆ ಸಲ್ಲಿಸಿದ್ದರು.