ಗುರುವಾರ, ಆಗಸ್ಟ್ 29, 2024

ಎರಡನೇ ದಿನಕ್ಕೆ ಕಾಲಿಟ್ಟ ಪ್ರತಿಭಟನೆ



ಸುದ್ದಿಲೈವ್/ಶಿವಮೊಗ್ಗ


ಇಲ್ಲಿನ ವಿನೋಬನಗರದ ಸೂಡ ಕಚೇರಿಯ ಮುಂಭಾಗದಲ್ಲಿ ಸಾರ್ವಜನಿಕ ಓಡಾಡುವ ರಸ್ತೆಯನ್ನೇ ಬಂದ್ ಮಾಡಲಗಿದ್ದು ಇದನ್ನ ಒಂದು ವಾರದ ವರೆಗೆ ಗಡುವು ನೀಡಿದರೂ ಪ್ರಯೋಜನೆಯಾಗದ ಹಿನ್ನಲೆಯಲ್ಲಿ ಶಿವಮೊಗ್ಗದ ನಾಗರೀಕ ಹಿತರಕ್ಷಣೆಯ ವೇದಿಕೆ ನಿನ್ನೆಯಿಂದ ಪಾಲಿಕೆ ಎದುರು ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದೆ. 


ಇಂದು ಅದು ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಪಾಲಿಕೆ ಅಥವಾ ಜಿಲ್ಲಾಡಳಿತ ನಿರ್ಲಕ್ಷದಿಂದಾಗಿ ಆಹೋರಾತ್ರಿ ಧರಣಿಗೆ ಕಾರಣವಾಗಿದೆ.  ಇಬ್ಬರೂ ಅಧಿಕಾರಿಗಳಿಗೆ 3 ತಿಂಗಳ ಹಿಂದೆಯೇ ದೂರು ನೀಡಿದರೂ ಕಡೆಗಾಣಿಸಲಾಗಿದೆ, ಇಷ್ಟೇಲ್ಲಾ ಹೋರಾಟ  ಮಾಡಿದರೂ ತಾವು ಒಂದೇ ಒಂದು ಮೀಟಿಂಗ್ ಮಾಡಿಲ್ಲ ಅಥವಾ ಪರಿಹಾರ ಕೊಡಿಸಿಲ್ಲ. ನಾವು ತಮ್ಮನ್ನು ಈ ವಿಚಾರವಾಗಿ ಬೇಟಿ ಆದಾಗ ಸೌಜನ್ಯ ವರ್ತಿಸಿಲ್ಲ ಎಂಬ ನೊವು ನಮ್ಮಲ್ಲಿ ಇದೆ ಎಂದು ಪ್ರತಿಭಟನಾಕಾರರು ನೋವು ತೋಡಿಕೊಂಡಿದ್ದಾರೆ. 



ಇದೇ ವೇಳೆ ಶಾಸಕ ಚೆನ್ನಬಸಪ್ಪ ಶಿವಮೊಗ್ಗ ನಾಗರೀಕ‌ಹಿರತಕ್ಷಣಾ ವೇದಿಕೆಯ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಸ್ಥಳದಲ್ಲಿಯೇ ಸೂಡ ಆಯುಕ್ತ ವಿಶ್ವನಾಥ್ ಮಜ್ಜಿಗಿಗೆ ಕರೆವಮಾಡಿ ನಾನು ಹುಟ್ಟಿ ಬೆಳೆದ ಊರಿದು. ಸಾರ್ವಜನಿಕರ ಓಡಾಟಕ್ಕೆ ಇರುವ ಜಾಗದಲ್ಲಿ ಶೆಡ್ ನಿರ್ಮಿಸಿರುವುದನ್ನ ಕೂಡಲೇ ತೆಗೆಯಿರಿ ಎಂದು ನಿರ್ದೇಶಿಸಿದ್ದಾರೆ. ಎರಡು ದಿನಗಳಲ್ಲಿ ಸಭೆ ನಡೇಯಲಿದ್ದು ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಆಯಕ್ತರು ಭರವಸೆ ನೀಡಿದ್ದಾರೆ. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ