ಸುದ್ದಿಲೈವ್/ಶಿವಮೊಗ್ಗ
ಶಿಮೂಲ್ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಯಾರೆಲ್ಲಾ ಮತಪಡೆದರು ಎಂಬುದನ್ನ ನೋಡೋಣ,
ಸಾಗರ ವಿಭಾಗ
ಸಾಗರ ವಿಭಾಗದಲ್ಲಿ 255 ಮತಗಳಲ್ಲಿ ಸೊರಬದ ಗಂಗಾಧರಪ್ಪನವರಿಗೆ 109, ದಯಾನಂದ ಗೌಡ್ರು ಟಿಎಸ್ ಗೆ 124, ಶಿಕಾರಿಪುರದ ಭೂಕಾಂತ್ ಟಿ ಅವರಿಗೆ 111 ಶಿವಶಂಕರಪ್ಪ ಟಿ ಅವರಿಗೆ 162 ಮತಗಳನ್ನ ಪಡೆದಿದ್ದಾರೆ. ಶಿವಶಂಕರಪ್ಪ.ಟಿ ಗೆದ್ದುಬೀಗಿದ್ದಾರೆ. ಯಾವುದೇ ತಿರಸ್ಕೃತ ಮತಗಳಿಲ್ಲವಾಗಿದೆ.
ಶಿವಶಂಕರಪ್ಪ ಟಿ ಅವರು ಇದು ನಾಲ್ಕನೇ ಬಾರಿ ಆಯ್ಕೆಯಾಗಿದ್ದು,, ಇವರೂ ಸಹ ಶಿಮೂಲ್ ಅಧ್ಯಕ್ಷರಾಗಿದ್ದರು. ಈ ಬಾರಿಯೂ ಆಯ್ಕೆಯಾಗಲಿದ್ದಾರ ಎಂಬ ಕುತೂಹಲ ಹೆಚ್ಚಿಸಿದೆ.
ಶಿವಮೊಗ್ಗ ವಿಭಾಗ
ಕುತೂಹಲ ಮೂಡಿಸಿದ್ದೇ ಶಿವಮೊಗ್ಗ ವಿಭಾಗದ ಭದ್ರಾವತಿಯ ಹಾಲು ಉತ್ಪಾದಕರ ಸಂಘದ ಮತದಾನ. ಕಾರಣ ಈ ವಿಭಾಗದಿಂದ ಆನಂದ್ ಡಿ ಮತ್ತು ಕೆಂಚೇನಹಳ್ಳಿ ಕುಮಾರ್ ನಡುವಿನ ತೀವ್ರ ಹಣಾಹಣಿ. 264 ಮತಗಳಿರುವ ಈ ವಿಭಾಗದಲ್ಲಿ ಆನಂದ್ ಡಿ 131 ಮತಗಳನ್ನ ಪಡೆದು ಗೆದ್ದು ಬೀಗಿದ್ದಾರೆ.
ಶಿಮೂಲ್ ಚುನಾವಣೆ ಗೆದ್ದು ಬೀಗಿದ ಆನಂದ್ ಡಿ(ಎಡಭಾಗ) |
ಎಸ್ ಕುಮಾರ್ 115ಮತಗಳು, ಟಿ.ಬಿ.ಜಗದೀಶ್ ತ್ಯಾಜುವಳ್ಳಿಗೆ 47 ಮತಗಳು, ಕೆಎಲ್ ಜಗದೀಶ್ವರ್ 105, ದಿನೇಶ್ ಹೆಚ್ ಬಿ 115 ಮತಗಳನ್ನ ಪಡೆದರೆ ತಿರಸ್ಕೃತ ಮತಗಳು 2 ಇವೆ.
ದಾವಣಗೆರೆ ವಿಭಾಗ
ದಾವಣಗೆರೆ ವಿಭಾಗದಲ್ಲಿ 362 ಮತಗಳಿದ್ದು ದಾವಣಗೆರೆಯ ಚೇತನ್ ಸೋಮಣ್ಣ 211 ಮತಗಳನ್ನ ಪಡೆದು ಗೆದ್ದು ಬೀಗಿದ್ದಾರೆ. ಅನಿಲ್ ಕುಮಾರ್ ವೈ.ಎಂ 133, ಜಗದೀಶಪ್ಪ ಬಣಕಾರ್ ಗೆ 182, ಚನ್ನಗಿರಿಯ ನಾಗರಾಜ್ ಕತ್ತಲಗೆರೆಗೆ 114, ದಾವಣಗೆರೆಯ ಪಾಲಾಕ್ಷಪ್ಪ ಹೆಚ್ ಕೆಗೆ 143
ಚನ್ನಗಿರಿಯ ಬಸಪ್ಪ ಹೆಚ್ ಕೆ 176 ಮತಗಳು, ಹೊನ್ನಾಳಿಯ ಬಸವರಾಜಪ್ಪ ಬಿಎಂಗೆ 164, 166 ಮತಗಳು ಹನುಮನಳ್ಳಿ ಗೌಡ್ರ ಬಸವರಾಜಪ್ಪ ಬಿ.ಜಿ. ಪಡೆದಿದ್ದಾರೆ. ಹರಿಹರದ ಶಾಂತವೀರಪ್ಪ ಡಿ.ಸಿ. 92 ಮತಗಳು, ನ್ಯಾಮತಿಯ ಸುರೇಶ್ ಕೆಜಿ 38 ಮತಗಳನ್ನ ಪಡೆದರೆ ಮೂರು ಮತಗಳು ತಿರಸ್ಕೃತ ಗೊಂಡಿವೆ.
ಚಿತ್ರದುರ್ಗ ವಿಭಾಗ
289 ಮತಗಳಿರುವ ಚಿತ್ರದುರ್ಗ ವಿಭಾಗದಿಂದ ಹೊಸದುರ್ಗದ ರವಿಕುಮಾರ್ ಬಿ.ಆರ್. 163 ಮತಗಳಿಂದ ಗೆದ್ದು ಬೀಗಿದ್ದಾರೆ. ಹೊಸದುರ್ಗದ ಕಾಂತರಾಜು ವಿ 57 ಮತಗಳು, ಚಿತ್ರದುರ್ಗದ ತಿಪ್ಪೇಸ್ವಾಮಿ ಪಿ (ಟಿಪಿಎಂ) 99 ಮತಗಳು,
ಹಿರಿಯೂರಿನ ಯಶವಂತ್ ರಾಜು ಜಿಪಿ, 79 ಮತಗಳು, ಹೊಸದುರ್ಗದ ರಮೇಶಪ್ಪ ಟ್ಯಾಂಕರ್ 56 ಮತಗಳು, ಚಿತ್ರದುರ್ಗದ ರೇವಣಸಿದ್ದಪ್ಪ ಜಿಪಿ 109 ಮತಗಳು, ಚಳ್ಳಕೆರೆಯ ಸಿ ವೀರಭದ್ರ ಬಾಬು 106, ಹೊಸದುರ್ಗದ ಶಿವಶಂಕರಪ್ಪ ಎಸ್ ಗೆ 42 ಮತಗಳು,
ಹಿರಿಯೂರು ಶಿವಣ್ಣ ಪಿಎಲ್ ಗೆ 100 ಮತಗಳು, ಹೊಳಲ್ಕೆರೆಯ ಶಿವಾನಂದ ಎ.ಎಂಗೆ 33 ಮತಗಳು, ಹೊಳಲ್ಕೆರೆಯ ಜಿ.ಬಿ.ಶೇಖರಪ್ಪ(ಕಾಮಧೇನು)ಗೆ 106 ಮತಗಳು, ಚಳ್ಳಕೆರೆಯ ಸಂಜೀವಮೂರ್ತಿ ಬಿಸಿಎಸ್ 134 ಮತಗಳನ್ನ ಪಡೆದಿದ್ದಾರೆ.