ಸುದ್ದಿಲೈವ್/ಶಿವಮೊಗ್ಗ
ಸಾಗರ ರಸ್ತೆಯಲ್ಲಿ ಬರುವ ಶಿವಮೊಗ್ಗದ ಎಪಿಎಂಎಸಿ ಬಸ್ ನಿಲ್ದಾಣದ ಪಕ್ಕದಲ್ಲಿ ಗೋಮಾಂಸದ ಖಾದ್ಯ ಮಾರಾಟ ಮಾಡುತ್ತಿರುವ ತಳ್ಳುವ ಗಾಡಿ ಅಂಗಡಿಯ ಮೇಲೆ ವಿನೋಬ ನಗರ ಪೊಲೀಸರು ದಾಳಿ ನಡೆಸಿದ್ದಾರೆ.
ಎಪಿಎಂಸಿ ಬಸ್ ಸ್ಟ್ಯಾಂಡ್ ಪಕ್ಕದಲ್ಲಿ ಕಪ್ಪು ಬಣ್ಣದ ಟಾರ್ಪಲ್ ಮೇಲ್ಬಾಗಕ್ಕೆ ಕಟ್ಟಿಕೊಂಡು ಅದರ ಒಳಗೆ ಯಾವುದೇ ಪರವಾನಗಿ ಇಲ್ಲದೆ ಪುಟ್ ಪಾತ್ ಮೇಲೆ ಅನಾಧಿಕೃತವಾಗಿ ತಳ್ಳುವ ಗಾಡಿಯಲ್ಲಿ ಗೋಮಾಂಸ ಖಾದ್ಯಗಳನ್ನು ಅಡುಗೆ ಮಾಡಿ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಲಭಿಸಿದೆ.
ಮಾಹಿತಿ ಆಧಾರದ ಮೇರೆಗೆ ವಿನೋಬ ನಗರ ಪೊಲೀಸರು ಗೋಹತ್ಯೆ ನಿಷೇಧ ಪ್ರಕರಣ 2020 ರ ಅಡಿ ದಾಳಿ ನಡೆಸಲಾಗಿದೆ. ಮತ್ತು ಶಿವಮೊಗ್ಗ ಜಿಲ್ಲೆಯಲ್ಲಿ ಯಾವುದೇ ಅಧಿಕೃತ ಗೋಮಾಂಸದ ಕಸಾಯಿ ಖಾನೆಗಳು ಇಲ್ಲದೆ ಇದ್ದರೂ ಈ ಗೋಮಾಂಸದ ಹೋಟೆಲ್ ಗೋಮಾಂಸ ನೀಡಿರುವ ಮೇಲೆ ಮತ್ತು ಗೋ ಹತ್ಯೆ ಮಾಡಿರುವವರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ದಾಳಿ ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಸಂಯೋಜಕ್ ದೇವರಾಜ್ ಅರಳಿಹಳ್ಳಿ ರವರು ನೀಡಿದ ದೂರಿನ ಅನ್ವಯ ನಡೆದಿದೆ ಎಂದು ತಿಳಿದು ಬಂದಿದೆ.