ನಾಳೆ ಬಾಂಗ್ಲಾ ಹಿಂದೂಗಳ ರಕ್ಷಣೆಗಾಗಿ ಹಾಗೂ ಆತ್ಮಸ್ಥೈರ್ಯ ಹೆಚ್ವಿಸುವ ಸಲುವಾಗಿ ನಗರದಲ್ಲಿ ಮೂರು ಕಡೆ ಮಾನವ ಸರಪಳಿ



ಸುದ್ದಿಲೈವ್/ಶಿವಮೊಗ್ಗ


ಹಿಂದೂ ಹಿತ ರಕ್ಷಣಾ ಸಮಿತಿವತಿಯಿಂದ ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನ ಖಂಡಿಸಿ  ನಾಳೆ ಪ್ರತಿಭಟನೆ ನಡೆಯುತ್ತಿದೆ. ಮೂರು ಕಡೆ ಮಾನವ ಸರಪಳಿ ನಿರ್ಮಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಿದೆ.


ಬಾಂಗ್ಲಾದೇಶದಲ್ಲಿ ನೇಮಕ ಸರ್ಕಾರವನ್ನು ಗುರಿ ಇಟ್ಟುಕೊಂಡು ಹಿಂದುಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ,  ಅತ್ಯಾಚಾರ,  ಹಿಂದೂ ದೇವಸ್ತಾನಗಳ ಧ್ವಂಸ ಮಾಡಿರುವುದನ್ನು ಖಂಡಿಸಿ,  ಮತ್ತು ಬಾಂಗ್ಲಾದೇಶದಲ್ಲಿರುವಂತಹ ಸಹೋದರ ಸಹೋದರಿಯಾದ  ಹಿಂದುಗಳನ್ನು ರಕ್ಷಿಸಿ ಹಾಗೂ ಬಾಂಗ್ಲಾದಲ್ಲಿರುವ ಹಿಂದುಗಳು ನೀವು ಹೆದರಬೇಡಿ ನಿಮ್ಮೊಟ್ಟಿಗೆ ಭಾರತದಲ್ಲಿರುವಂತಹ ಹಿಂದೂ ಸಮಾಜ ರಕ್ಷಣೆಗೆ ನಿಲ್ಲುತ್ತದೆ ಎಂದು ಶಿವಮೊಗ್ಗದ ಮೂರು ವೃತ್ತದಲ್ಲಿ ವಿನೂತನ ಪ್ರತಿಭಟನೆ ನಡೆಯಲಿದೆ. 


ಮಹಾನಗರದಲ್ಲಿ ಮೂರು ಕಡೆ ಮೌನ ಪ್ರದರ್ಶನ ಮಾನವ ಸರಪಳಿ ನಿರ್ಮಾಣ, ಬಾಂಗ್ಲಾದಲ್ಲಿರುವ ಹಿಂದುಗಳಿಗೆ ಬೆಂಬಲವಾಗಿ ನಿಲ್ಲುವಂತೆ ಇಂದು ಸಮಾಜ ಕೋರುತ್ತದೆ ಹಾಗಾಗಿ ಶಿಮೊಗ್ಗ ಮಹಾನಗರದಲ್ಲಿರುವಂತಹ ಎಲ್ಲಾ ಹಿಂದೂಗಳು ಒಟ್ಟಾಗಿ ಸೇರಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಂಘಟನೆ ಕರೆ ಕೊಟ್ಟಿದೆ. 


1 ಗೋಪಿ ವೃತ್ತ 2 ಶಿವಪ್ಪ ನಾಯಕ ವೃತ್ತ 3 ಅಶೋಕ ವೃತ್ತ ಮೇನ್ ಬಸ್ಟಾಂಡ್ ನಲ್ಲಿ ನಾಳೆ ಸೋಮವಾರ ಸಂಜೆ 4 ಗಂಟೆಗೆ ಏರ್ಪಡಿಸಲಾಗಿದೆ ಎಲ್ಲ ಹಿಂದೂ ಬಾಂಧವರು ಸಹಕರಿಸಬೇಕಾಗಿ ಬಜರಂಗದಳದ ರಾಜೇಶ್ ಗೌಡ ವಿನಂತಿಸಿದ್ದಾರೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close