ಸುದ್ದಿಲೈವ್/ಶಿವಮೊಗ್ಗ
ಮೂಡಾ ಹಗರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಪಾದಯಾತ್ರೆ ನಡೆಸುತ್ತಿರುವುದನ್ನ ಖಂಡಿಸಿ ಇಂದು ಜಿಲ್ಲಾ ಕಾಂಗ್ರೆಸ್ ಹಿಂದುಳಿ ವರ್ಗ ನಗರದಲ್ಲಿ ಕತ್ತೆ ಹಿಡಿದು ಪ್ರತಿಭಟನೆ ನಡೆಸಿದೆ.
ನಗರ ಗೋಪಿ ವೃತ್ತದಲ್ಲಿ ಕತ್ತೆ ಮತ್ತು ಮರಿಯ ಜೊತೆ ಬಂದ ಪ್ರತಿಭಟನಾಕಾರರು ಬಿಜೆಪಿ ಮತ್ತು ಜೆಡಿಎಸ್ ಪಕ್ಷವನ್ನ ಕತ್ತೆಗೆ ಹೋಲಿಸಿ ಪ್ರತಿಭಟನೆ ನಡೆಸಲಾಯಿತು. ಎರಡೂ ಪಕ್ಷಕ್ಕೆ ಸಿಎಂ ಮೂಡಾ ಹಗರಣದ ಬಗ್ಗೆ ಯಾವುದೇ ಹಸ್ತಕ್ಷೇಪ ಮಾಡಿಲ್ಲವೆಂದು ಸ್ಪಷ್ಟಪಡಿಸಿದರೂ ಇಲ್ಲ ಅವರೇ ತಪ್ಪಿತಸ್ತರು ಎಂದು ಸುಳ್ಳನ್ನ ಹೇಳುತ್ತಿದೆ. ಹಾಗಾಗಿ ಪಕ್ಷವನ್ನ ಕತ್ತೆಗೆ ಹೋಲಿಸಿ ಪ್ರತಿಭಟಿಸಲಾಯಿತು.
ಸಿಎಂ ಎಂದು ಯಾವುದೇ ಸೈಟ್ ನೀಡಿ ಎಂದು ಅರ್ಜಿ ಸಲ್ಲಿಸಿರಲ್ಲ. ಅವರಿಗೆ ಕಪ್ಪು ಮಸಿ ಬಳಿಯಲು ಪಾದಯಾತ್ರೆ ಮೊದಲಾದ ಪ್ರತಿಭಟನೆಯನ್ನ ಜೆಡಿಎಸ್ ಮತ್ತು ಬಿಜೆಪಿ ಪ್ರತಿಭಟನೆ ನಡೆಸಿದೆ ಎಂದು ಆರೋಪಿಸಿ ಇಂದು ಕಾಂಗ್ರೆಸ್ ಹಿಂದುಳಿದ ವರ್ಗ ಪ್ರತಿಭಟನೆ ನಡೆಸಿದೆ.
ಸಿದ್ದರಾಮಯ್ಯನವರ ವಿರುದ್ಧ ಕಪ್ಪುಚುಕ್ಕಿ ಬರುವಂತೆ ಮಾಡುದ್ರೆ, 30 ಜಿಲ್ಲೆಯಲ್ಲಿ ರಕ್ತದ ಹೋಕುಳಿ ಹರಿಸುತ್ತೇವೆ ಎಂದು ಪಿ ಶೇಷಾದ್ರಿ ಎಚ್ಚರಿಕೆ ನೀಡಿದ್ದಾರೆ. ಪ್ರತಿಭಟನೆಯಲ್ಲಿ ರಮೇಶ್ ಇಕ್ಕೇರಿ, ಎಸ್ ಕುಮಾರ್ ಇತರರು ತಮ್ಮ ಭಾಗಿಯಾಗಿದ್ದರು.
ಇದನ್ನೂ ಓದಿ-https://www.suddilive.in/2024/08/blog-post_54.html