ಸುದ್ದಿಲೈವ್/ಶಿವಮೊಗ್ಗ
ಗ್ಯಾರೆಂಟಿ ಯೋಜನೆಗಳ ಜಾರಿಯನ್ನ ಸಮಗ್ರವಾಗಿ ಜಾರಿಗೆ ತರಲು ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಪ್ರಾಧಿಕಾರಗಳ ರಚಿಸಲಾಗಿತ್ತು. ಈ ನಿಟ್ಟಿಲ್ಲಿ ಇಂದು ಗ್ಯಾರೆಂಟಿ ಯೋಜನೆಗಳ ಪ್ರಾಧಿಕಾರದ ಜಿಲ್ಲಾ ಮಟ್ಟದ ಸಭೆ ನಡೆದಿದೆ. ಜಿಲ್ಲಾ ಅಧ್ಯಕ್ಷ ಚಂದ್ರಭೂಪಾಲ್ ನೇತೃತ್ವದಲ್ಲಿ ಇಂದು ಜಿಪಂ ಸಭಾಂಗಣದಲ್ಲಿ ಸಭೆ ನಡೆದಿದೆ.
ಸಭೆಯಲ್ಲಿ ಗೃಹಲಕ್ಷ್ಮಿ, ಅನ್ನಭಾಗ್ಯ, ಶಕ್ತಿಯೋಜನೆ, ಗೃಹಜ್ಯೋತಿ, ಯುವನಿಧಿಗಳ ಬಗ್ಗೆ ಸಭೆಯಲ್ಲಿ ಸಮಗ್ರ ಚರ್ಚೆ ನಡೆಸಲಾಗಿದೆ. ಮಹಿಳಾ ಮತ್ತು ಮಕ್ಕಳ ಇಲಾಖೆಯ ಸಂತೋಷ್ ಕುಮಾರ್, ಜಿಲ್ಲೆಯಲ್ಲಿ ಗೃಹಲಕ್ಷ್ಮಿ 385996 ಫಲಾನುಭವಿಗಳಿದ್ದು 10 ತಿಂಗಳಲ್ಲಿ ಜುಲೈ ಮತ್ತು ಆಗಸ್ಟ್ ತಿಂಗಳ ಹಣ ಬಂದಿಲ್ಲ. ಜುಲೈ ಕೆಲವರಿಗೆ ಹಣ ಬಂದಿದೆ. ಕೆಲವರಿಗೆ ಬಂದಿಲ್ಲ. 10 ತಿಂಗಳಲ್ಲಿ 800 ಕೋಟಿ ಹಣ ಜನರಿಗೆ ಸಂದಾಯವಾಗಿದೆ ಎಂದರು.
428 ಜನ ಭದ್ರಾವತಿಯಲ್ಲಿ ರಿಜೆಕ್ಟ್ ಆಗಿದೆ. 428 ಜನರಿಗೆ ಹಣ ಯಾಕೆ ತಲುಪಿಲ್ಲ ಎಂಬ ಷರ ಬರೆದು ಕೊಡಲು ಸೂಚನೆ ಕೆಳಲಾಗಿತ್ತು ಎಂದು ಜಿಲ್ಲಾ ಅಧ್ಯಕ್ಷ ಚಂದ್ರಭೂಪಾಲ್ ಸಭೆಗೆ ತಿಳಿಸಿದರು. ಆದರೆ ಇದುವರೆಗೂ ನೀಡಿಲ್ಲವೇಕೆ ಎಂದು ಅಧಿಕಾರಿಗಳಿಗೆ ಕೇಳಿದರು.
ಜಿಲ್ಲೆಯಲ್ಲಿ 835 ಅಕೌಂಟ್ ಗಳಿಗೆ ಐಟಿಜಿಎಸ್ಟಿ ಪೇಯಿ ಅಂತ ಬರ್ತಾ ಇದೆ. 845 ಡೆತ್ ಕೇಸಸ್ ಇದೆ. ಡೆತ್ ಕೇಸಸ್ ಇದ್ದರೆ ರೇಷನ್ ಕಾರ್ಡ್ ನಲ್ಲಿ ಹೆಸರು ಸರಿಪಡಿಸಬೇಕು. ಸರಿ ಮಾಡಿಸಿಕೊಟ್ಟರೂ 6-7 ತಿಂಗಳು ಪೆಂಡಿಂಗ್ ಇದೆ. ಭದ್ರಾವತಿಯ ಅಧಿಕಾರಿಗಳು ಸಭೆಗೆ ಬಂದಿಲ್ಲ ಅವರಿಗೆ ನೋಟೀಸ್ ಕೊಡಿಸಲು ಸಭೆ ತೀರ್ಮಾನಿಸಿತು.
4985 ಪ್ರಕರಣಗಳಿಗೆ ಹಣ ಬರ್ತಾ ಇಲ್ಲ. ಇನ್ ಕಮ್ ಟ್ಯಾಕ್ಸ್ ಅಧಿಕಾರಿಗಳನ್ನ ಮುಂದಿನ ಸಭೆಗೆ ಕರೆಯಿಸಲು ತೀರ್ಮಾನವಾಗಿದೆ. ಡೆತ್ ಆದವರನ್ನ ಬ್ಯಾಂಕ್ ನವರಿಗೆ ಇನ್ಫಾರ್ಮ್ ಮಾಡಲು ಸೂಚಿಸಲಾಗಿದೆ. ಗ್ಯಾರೆಂಟಿ ಯೋಜನೆಗಳ ಪ್ರಾಧಿಕಾರದ ಅದಾಲತ್ ನಡೆಸಲು ರಾಜ್ಯ ಸಮಿತಿಗೆ ನಡಾವಳಿ ಕಳುಹಿಸಲು ತೀರ್ಮಾನಿಸಲಾಯಿತು.
ಪ್ರತಿ ತಾಲೂಕಿನ ಹೆಲ್ಪ್ ಲೈನ್ ಆರಂಭಿಸಲು ಮತ್ತು ತಾಲೂಕಿನಲ್ಲಿ ಪ್ರಾಧಿಕಾರದ ಕಚೇರಿಗೆ ಜಾಗಕೊಡಲಾಗಿದೆ ಫರ್ನಿಚರ್ ಮತ್ತು ಕಂಪ್ಯೂಟರ್ ಕೊಡಲು ಪ್ರಾಧಿಕಾರದ ಸದಸ್ಯ ಮಣಿಯವರು ಸಭೆಗೆ ತಿಳಿಸಿದರು. ಮಧುಸೂಧನ್ ಮಾತನಾಡಿ ಹೆಲ್ಪ್ ಲೈನ್ ಗೆ ವೈಫೈ ಸಂಪರ್ಕ ಒದಗಿಸಲು ಒತ್ತಾಯಿಸಿದರು.
3.89 ಲಕ್ಷ ಬಿಪಿಎಲ್ ಕಾರ್ಡ್ ಇದೆ.20492 ಅನ್ನ ಭಾಗ್ಯದಿಂದ ಹೊರಗಡೆ ಇದ್ದಾರೆ. 8066 ಕಾರ್ಡ್ ವಂಚಿತರಾಗಿದ್ದಾರೆ. ಬಯೋಮೆಟ್ರಿಕ್ ಫೈಲ್ಯೂರು ಸತತವಾಗಿ 3 ತಿಂಗಳಿಂದ ಅಕ್ಕಿ ಪಡೆದಿಲ್ಲ. ಅಂತಹವರನ್ನ ಈ ಯೋಜನೆಯಿಂದ ಹೊರಗಿಡಲಾಗಿದೆ. ಇವರಿಗೆ ಹಣ ಹಾಕಲಾಗುತ್ತಿಲ್ಲ. ಎಂದು ಆಹಾರ ಇಲಾಖೆ ಅಧಿಕಾರಿ ತಿಳಿಸಿದರು.
ಜಿಲ್ಲೆಯಲ್ಲಿ 600 ನ್ಯಾಯಬೆಲೆವ ಅಂಗಡಿ ಇದೆ. ತಿಂಗಳು ಇಡಿ ನ್ಯಾಬೆಲೆ ಅಂಗಡಿ ತೆರೆಯಲು ಸಿಇಒ ಸೂಚಿಸಿದರು. ಆಗುಂಬೆಯಲ್ಲಿ ತಿಂಗಳಿಗೆ ಮೂರು ದಿನಮಾತ್ರ ತೆಗೆದಿಡುವುದು ಪ್ರಾಧಿಕಾರದ ಸದಸ್ಯರು ಸಭೆಗೆ ತಿಳಿಸಿದರು. ಹಾಗಾಗಿ ರಜಾ ದಿನಗಳನ್ನ ಹೊರತುಪಡಿಸಿ ಎಲ್ಲಾ ದಿನಗಳಲ್ಲಿ ತೆರೆದಿಡಲು ಸಭೆ ಸೂಚಿಸಲಾಯಿತು.
ಸ್ಟಾಕ್ ಇನ್ಫರ್ಮೇಷನ್, ಫಲಾನುಭವಿಗಳಿಗೆ ಎಷ್ಟು ನೀಡಲಾಗಿದೆ ಎಂಬುದನ್ನ ಜಿಲ್ಲೆಯ ಪ್ರತಿ ನ್ಯಾಯ ಬೆಲೆ ಅಂಗಡಿಯಲ್ಲಿ ಫಲಕ ಹಾಕಲು ಸೂಚನೆ ನೀಡಲಾಯಿತು. ಇದನ್ನ ಸುತ್ತೋಲೆ ಹೊರಡಿಸಲು ನಾಗರೀಕ ಮತ್ತು ಆಹಾರ ಸರಬರಾಜು ಇಲಾಖೆಗೆ ಸೂಚಿಸಲಾಯಿತು.
ಕೆಎಸ್ ಆರ್ ಟಿಸಿ ವಿಭಾಗೀಯ ಸಂಚಲನ ಅಧಿಕಾರಿ ದಿನೇಶ್ ಕುಮಾರ್ ಮಾತನಾಡಿ, ಶಕ್ತಿಯೋಜನೆಗೆ ಒಂದು ವರ್ಷ ಕಳೆದಿದೆ. 3.38 ಕೋಟಿ ಮಹಿಳೆಯರು ಜಿಲ್ಲೆಯಲ್ಲಿ ಪ್ರಯಣ ಮಾಡಿದ್ದಾರೆ 116.79 ಕೋಟಿ ಆದಾಯ ಬಂದಿದೆ ಎಂದರು.
ಹೆಣ್ಣು ಮಕ್ಕಳು ಹೆಚ್ಚಗೆ ಇರುವ ಕಡೆ ಸ್ಟಾಪ್ ಇಲ್ಲ ಎಂದು ಸದಸ್ಯರು ಹೇಳಿದರು. ಶಕ್ತಿ ಯೋಜನೆ ಬಂದ ಮೇಲೆ ಬೇಡಿಕೆ ಹೆಚ್ಚಾಗಿದೆ. ಹರಿಹರ ಶಿವಮೊಗ್ಗ, ಭದ್ರಾವತಿ-ಶಿವಮೊಗ್ಗ ಕಡೆ ಹೆಚ್ಚಿನ ಬಸ್ ಹಾಕಲಾಗಿದೆ. ಆದಾಯ ಹೆಚ್ಚಾಗಿದೆ. ಶಿಕಾರಿಪುರದ ಘಕದಲ್ಲಿ 35 ಬಸ್ ಗಳಿವೆ. ರೂಟ್ ಹೆಚ್ಚಿಸಬೇಕಿದೆ ಎಂದಿ ಡಿಟಿಒ ತಿಳಿಸಿದರು.
ರೂಟ್ ಮ್ಯಾಪ್ ನ್ನ ಏರಿಯಾ ಸ್ಕೀಮ್ ನಲ್ಲಿ 41 ಪರ್ಮಿಟ್ ಹೆಚ್ಚಿಗೆ ಪಡೆಯಲಾಗಿದೆ. ಆದರೆ ಇದರ ವಿರುದ್ಧ ಖಾಸಗಿಯವರು ಹೈಕೋರ್ಟ್ ಸ್ಟೇ ತಂದಿದ್ದಾರೆ. ಅದು ವೆಕೇಟ್ ಆಗುತ್ತಿದ್ದಂತೆ ಓಡಾಡಿಸಲಾಗುವುದು ಎಂದರು. ಪ್ರಾಧಿಕಾರದ ತಾಲೂಕು ಅಧ್ಯಕ್ಷ ನಾಗರಾಜ್ ಗೌಡ ಮಾತನಾಡಿ ಶಿಕಾರಿಪುರದಲ್ಲಿ ಖಾಸಗಿಯವರ ಲಾಭಿಗೆ ಕೆಎಸ್ಆರ್ ಟಿಸಿ ಮಣಿಯುವ ಹಾಗೆ ಕಾಣುತ್ತಿದೆ. ಕೇವಲ 35 ಬಸ್ ಗಳು ಶಿಕಾರಿಪುರದಲ್ಲಿ ಓಡಾಡುತ್ತಿವೆ. ಇವುಗಳೆಲ್ಲವೂ ಗುಜರಿಗೆ ಹಾಕುವ ಬಸ್ ಗಳಾಗಿವೆ ಎಂದು ದೂರಿದರು.
ಸ್ಥಳೀಯ ಶಾಸಕರು ನತ್ತು ಸಂಸದರ ವಿರುದ್ಧ ಗರಂ ಆದ ನಾಗರಾಜ್ ಗೌಡ, ಅವರಿಗೆ ಜಿಲ್ಲೆಗೆ ವಿಮಾನ ತರಲು ಸಾಧ್ಯವಾಗುತ್ತದೆ. ಆದರೆ ಅವರ ತವರು ಕ್ಷೇತ್ರಕ್ಕೆ ಸರಿಯಾದ ಬಸ್ ಕೊಡಲು ಸಾಧ್ಯವಾಗಿಲ್ಲ. ಎಂದು ಆರೋಪಿಸಿದರು. ಡಿಟಿಒ ಮಾತನಾಡಿ ಚಾಲಕ ಮತ್ತು ನಿರ್ವಾಹಕರು ಕಡಿಮೆ ಇದ್ದಾರೆ. ಒಂದು ಡಿಪೋ ಎಂದರೆ 70-100 ಬಸ್ ಗಳಿರಬೇಕು. ಒಂದು ವರ್ಷ ಆದ ಮೇಲೆ ಹಂತ ಹಂತವಾಗಿ ಡಿಪೋವನ್ನ ಹಂತ ಹಂತ ವಾಗಿ ಅಭಿವೃಧ್ಧಿ ಪಡಿಸಲಾಗುವುದು ಎಂದರು.