ಚಂದ್ರಗುತ್ತಿ ಶ್ರೀ ರೇಣುಕಾಂಬ ದೇವಸ್ಥಾನದಲ್ಲಿ ವಿಜೃಂಭಣೆಯಿಂದ ವರಮಹಾಲಕ್ಷ್ಮಿ ಹಬ್ಬ



ಸುದ್ದಿಲೈವ್/ಸೊರಬ


ಚಂದ್ರಗುತ್ತಿಯ ಶ್ರೀ ರೇಣುಕಾಂಬ ದೇವಸ್ಥಾನದಲ್ಲಿ ವರಮಹಾಲಕ್ಷ್ಮಿ ಹಬ್ಬವನ್ನು ಅತೀ ವಿಜೃಂಭಣೆಯಿಂದ ಆಚರಿಸಲಾಯಿತು. ಧಾರ್ಮಿಕ ದತ್ತಿ ಇಲಾಖೆಯ ನಿಯಮಾವಳಿಗಳನ್ವಯ ದೇವಸ್ಥಾನದ ಕಾರ್ಯನಿರ್ವಾಹಣಾಧಿಕಾರಿ ಪ್ರಮೀಳಾ ಕುಮಾರಿ ಅವರು ಮುತ್ತೈದೆಯರಿಗೆ ಪ್ರಸಾದ ರೂಪದಲ್ಲಿ ಅರಶಿಣ, ಕುಂಕುಮ, ಹಾಗೂ ಬಳೆಗಳನ್ನು ಬಾಗಿನವಾಗಿ ನೀಡುವ ಕಾರ್ಯಕ್ರಮವನ್ನು ಸಕಲ ಶ್ರದ್ಧಾಭಕ್ತಿಯಿಂದ ನೆರವೇರಿಸಿದರು.


ಮುತ್ತೈದೆಯರು ದೇವಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿ, ತಮಗೆ ಮತ್ತು ಕುಟುಂಬಕ್ಕೆ ಧಾರ್ಮಿಕ ನೆಮ್ಮದಿ, ಆರೋಗ್ಯ, ಸಮೃದ್ಧಿ ಸಿಗುವಂತೆ ಬಂದು ದೇವಿಯ ಹತ್ತಿರ ಪೂಜಾ ಸಲ್ಲಿಸಿದರು


ದೇವಸ್ಥಾನದ ಅರ್ಚಕರಾದ ಅರವಿಂದ್ ಭಟ್ ಅವರು ವಿಶೇಷ ಪೂಜಾ ವಿಧಿಗಳನ್ನು ನೆರವೇರಿಸಿದರು. ಈ ವಿಶೇಷ ಪೂಜೆಯಲ್ಲಿ ದೇವಸ್ಥಾನದ ಸಿಬ್ಬಂದಿಗಳಾದ ಶಶಿಕಲಾ, ಸಮಿತಿಯ ಮಾಜಿ ಸದಸ್ಯರು ಲಲಿತ ಎಂ, ಪ್ರತಿಮಾ ಶೇಟ್, ರೇಣುಕಮ್ಮ್, ಶೋಭಾ, ಪದ್ಮಾವತಿ, ರತ್ನ, ತಾರ ಮುಂತಾದವರು ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close