ಹೊಳೆಹೊನ್ನೂರಿನಲ್ಲಿ ಕರಡಿ ಹಾವಳಿ-ಅರಣ್ಯ ಇಲಾಖೆ ವಿರುದ್ಧ ಆಕ್ರೋಶದ ಸುರಿಮಳೆ



ಸುದ್ದಿಲೈವ್/ಹೊಳೆಹೊನ್ನೂರು 


ಹೊಳೆಹೊನ್ನೂರು ಭಾಗದಲ್ಲಿ ಕರಡಿಗಳ ಹಾವಳಿ ಹೆಚ್ಚಾಗಿದೆ. ನಿರ್ಲಕ್ಷ್ಯ ಮಾಡುತ್ತಿರುವ ಅರಣ್ಯ ಇಲಾಖೆಯ ವಿರುದ್ಧ ಸ್ಥಳೀಯರ ಆಕ್ರೋಶ ವ್ಯಕ್ತಪಡಿಸಿದ್ದಾರೆ. 


ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಭಾಗದಲ್ಲಿ ರಾತ್ರಿ ವಾಹನ ಸಂಚಾರದ ವೇಳೆ ಮತ್ತು ಬಾಳೆ ತೋಟದಲ್ಲಿ ಕಂಡು ಬಂದ ವಿಡಿಯೋ ವೈರಲ್ ಆಗಿದೆ. ವೈರಲ್ ವಿಡಿಯೋ ಬೆನ್ನಲ್ಲೆ ಅರಣ್ಯ ಇಲಾಖೆ ಕ್ರಮ ಕೈಗೊಳ್ಳದಿರುವ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿದೆ. 



ಕಳೆದ ಒಂದು ವಾರದಿಂದ ಕರಡಿಗಳು ಪ್ರತ್ಯಕ್ಷವಾಗುತ್ತಿದೆ.‌ ಎಮ್ಮೆಹಟ್ಟಿಯಲ್ಲಿ ಅನಂದಪ್ಪ ಎಂಬುವರ ಮೇಲೆ ದಾಳಿ ನಡೆಸಿದೆ. ಸುತ್ತಮುತ್ತಲಿನ ಗ್ರಾಮಗಳಲ್ಲಿ ಕರಡಿ ಓಡಾಡುತ್ತಿರುವ ಬಗ್ಗೆ ಸ್ಥಳೀಯರು ದೂರಿದ್ದಾರೆ.‌


ಮೂಲಗಳ ಪ್ರಕಾರ ಮೂರು ಕರಡಿಗಳಿಂದ ಹಾವಳಿ. ಕರಡಿಯ ಚಲನವಲನಗಳು ಸ್ಥಳೀಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನಿನ್ನೆ ಸಂಜೆ ವೇಳೆ ತೊಟಗಳಿಗೆ ನುಗ್ಗಿರುವ ಬಗ್ಗೆ  ದೂರಲಾಗಿದ್ದು, ತೋಟದಲ್ಲಿ ಓಡಾಡುವ ದೃಶ್ಯ ಸ್ಥಳೀಯರ ಮೊಬೈಲ್ ನಲ್ಲಿ ಸೆರೆಯಾಗಿದೆ. 


ದೇವಸ್ಥಾನ ಹಾಗೂ ಮನೆಗಳ ಮುಂದೆ ಓಡಾಡುತ್ತಿರುವ ಕರಡಿಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.  ಸುತ್ತಮುತ್ತಲಿನ ಗ್ರಾಮಸ್ಥರು ಅಕ್ಷಶಃ ಭಯಭೀತರಾಗಿದ್ದು, ಇಷ್ಟಾದರೂ  ಅರಣ್ಯ ಇಲಾಖೆಯು ಎಚ್ಚೆತ್ತುಕೊಂಡಿಲ್ಲ ಎಂದು ದೂರಲಾಗಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close