ಸುದ್ದಿಲೈವ್/ಶಿವಮೊಗ್ಗ,ಆ 11
ಬಾಂಗ್ಲಾ ದೇಶದ ಅಮಾಯಕ ಹಿಂದೂಗಳ ಮೇಲೆ ಕೊಲೆ, ಅತ್ಯಾಚಾರ ಹಾಗೂ ಮಂದಿರಗಳನ್ನು ಹಾಳು ಮಾಡುವುದನ್ನು ಕೂಡಲೇ ನಿಲ್ಲಿಸಬೇಕು ಎಂದು ಹಿಂದೂ ಹಿತರಕ್ಷಣಾ ಸಮಿತಿಯ ಜಿಲ್ಲಾಧ್ಯಕ್ಷ ವಾಸುದೇವ್ ಜೆ.ಆರ್. ಆಗ್ರಹಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಾಂಗ್ಲಾದೇಶದಲ್ಲಿ ಹಿಂದೂ ಬಾಂಧವರ ಮನೆಗಳು, ಮಠಗಳು, ಅಂಗಡಿಗಳು, ಕಚೇರಿಗಳ ಮೇಲೆ ದಾಳಿಯಾಗುತ್ತಿದೆ. ಮಂದಿರಗಳನ್ನು ಕೆಡುವುತ್ತಿದ್ದಾರೆ. ಹೆಣ್ಣುಮಕ್ಕಳ ಅತ್ಯಾಚಾರಗಳು ನಡೆಯುತ್ತಿವೆ. ಹಿಂದೂಗಳು ಉಸಿರಾಡುವುದೇ ಕಷ್ಟವಾಗುತ್ತಿದೆ.
ಇಂತಹ ಸಂದರ್ಭದಲ್ಲಿ ಕೇಂದ್ರ ಸರ್ಕಾರ ತಕ್ಷಣವೇ ರಕ್ಷಣೆಗೆ ಮುಂದಾಗಬೇಕು ಎಂದರು.
ಗೃಹ ಸಚಿವ ಅಮಿತ್‌ಷಾ ಅವರನ್ನು ವಿಶ್ವಹಿಂದೂ ಪರಿಷತ್‌ನ ಕೇಂದ್ರಿಯ ಮುಖಂಡರು ಈಗಾಗಲೇ ಭೇಟಿ ಮಾಡಿ ಹಿಂದೂಗಳ ಭದ್ರತೆಗೆ ಮನವಿ ಮಾಡಿದ್ದಾರೆ. ಭಾರತ ಸರ್ಕಾರ ಕೂಡ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದೆ ಈ ನಿಟ್ಟಿನಲ್ಲಿ ವಿಶ್ವಹಿಂದೂಪರಿಷತ್ ಕೂಡ ತುರ್ತು ಸಹಾಯವಾಣಿ ಸ್ಥಾಪಿಸಲು ನಿರ್ಧರಿಸಿದೆ. ಅದಕ್ಕೆ ಸಂಬAಧಪಟ್ಟ ಮೊಬೈಲ್ ನಂ.ನ್ನು ಶೀಘ್ರವೇ ಬಿಡುಗಡೆ ಮಾಡಲಾಗುವುದು ಎಂದರು.
ಬಾಂಗ್ಲಾದೇಶದಲ್ಲಿ ಶೇ.೩೦ರಷ್ಟಿದ್ದ ಹಿಂದೂಗಳು ಈಗ ಶೇ.೮ಕ್ಕೆ ಬಂದಿದ್ದಾರೆ. ಅವರ ನಿರಂತರ ಜಿಹಾದಿ ಕಿರುಕುಳಕ್ಕೆ ಬಲಿಯಾಗುತ್ತಿದ್ದಾರೆ. ಬಾಂಗ್ಲಾ ದೇಶದಲ್ಲಿ ಹೊಸ ಸರ್ಕಾರಬಂದಿದೆ. ತಕ್ಷಣವೇ ಹಿಂದೂ ಅಲ್ಪಸಂಖ್ಯಾತ ಸಮುದಾಯಕ್ಕೆ ರಕ್ಷಣೆ ಕೊಡಬೇಕು. ಆಸ್ತಿಪಾಸ್ತಿ ಕಳೆದುಕೊಂಡವರಿಗೆ ನೆರವು ನೀಡಬೇಕು. ನಾಶಗೊಂಡಿರುವ ದೇವಸ್ಥಾನಗಳನ್ನು ಪುನರ್ ಸ್ಥಾಪಿಸಬೇಕು ಎಂದು ಆಗ್ರಹಿಸಿದರು.
ಬಾಂಗ್ಲಾದಲ್ಲಿ ಹಿಂದೂಗಳ ರಕ್ಷಣೆಗಾಗಿ ಒತ್ತಾಯಿಸಿ ಹಿಂದೂ ಸಂಜೆ ಶಿವಮೊಗ್ಗ ನಗರದ ಬಸ್‌ಸ್ಟಾö್ಯಂಡ್, ಶಿವಪ್ಪನಾಯಕ ವೃತ್ತ, ಗೋಪಿವೃತ್ತ ದಲ್ಲಿ ಮಾನವ ಸರಪಳಿಯನ್ನು ನಿರ್ಮಿಸಿ ಶಾಂತ ರೀತಿಯಿಂದ ಪ್ರತಿಭಟನೆ ನಡೆಸಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ದೇವರಾಜ್ ಅರಳಿಹಳ್ಳಿ, ಹರಿಕೃಷ್ಣ ಎಂ.ಬಿ., ಪ್ರವೀಣ್, ಡಾ.ಸುಧೀಂದ್ರ, ಮಂಜುನಾಥ್ ಕಸಟ್ಟಿ, ಮಧುಕರ್ ಉಪಸ್ಥಿತರಿದ್ದರು.