ರಸ್ತೆ ಬಿಟ್ಟು ಚರಂಡಿಗೆ ಇಳಿದ ಖಾಸಗಿ ಬಸ್



ಸುದ್ದಿಲೈವ್/ರಿಪ್ಪನ್ ಪೇಟೆ


ಚಾಲಕನ ನಿಯಂತ್ರಣ ತಪ್ಪಿ 30 ಮಂದಿ ಪ್ರಯಾಣಿಕರನ್ನು ಹೊತ್ತೊಯುತ್ತಿದ್ದ ಖಾಸಗಿ ಬಸ್ ಅಪಘಾತವಾಗಿರುವ ಘಟನೆ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನ ರಿಪ್ಪನ್‌ಪೇಟೆ ಬಳಿಯಲ್ಲಿ ನಡೆದಿದೆ.


ಸಾಗರದಿಂದ - ಉಡುಪಿ ಕಡೆಗೆ ತೆರಳುತಿದ್ದ ಕೃಷ್ಣಸ್ವಾಮಿ ಎಂಬ ಖಾಸಗಿ  ಬಸ್‌ವೊಂದು ಚಾಲಕನ(driver) ನಿಯಂತ್ರಣ ತಪ್ಪಿ ರಸ್ತೆಯಿಂದ ಕೆಳಗೆ ಇಳಿದ ಘಟನೆಯೊಂದು ನಡೆದಿದೆ. 


ಬಾಳೂರು ಬಳಿಯಲ್ಲಿರುವ ಸೇತುವೆ ಬಳಿಯಲ್ಲಿ ಬರುತ್ತಿದ್ದ ಬಸ್‌ ಇದ್ದಕ್ಕಿದ್ದ ಹಾಗೆ ಚರಂಡಿಗೆ ಇಳಿದಿದೆ. ಬಸ್‌ನಲ್ಲಿ 30 ಕ್ಕೂ ಹೆಚ್ಚು ಪ್ರಯಾಣಿಕರಿದ್ದರು. ಘಟನೆ ನಡೆದ ತಕ್ಷಣ ಸ್ಥಳೀಯರು ತಕ್ಷಣವೇ ಸ್ಥಳಕ್ಕೆ ಧಾವಿಸಿ ಪ್ರಯಾಣಿಕರಿಗೆ ನೆರವು ನೀಡಿ ಸಮಯ ಪ್ರಜ್ಞೆ ಮೆರೆದಿದ್ದಾರೆ. ಕೆಲವು ಪ್ರಯಾಣಿಕರಿಗೆ ಗಾಯಗಳಾಗಿದ್ದು ಶಿವಮೊಗ್ಗದ ಆಸ್ಪತ್ರೆಗೆ ರವಾನಿಸಲಾಗಿದೆ ಎಂಬ ಮಾಹಿತಿ ತಿಳಿದುಬಂದಿದೆ. ರಿಪ್ಪನ್‌ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close