ಸುದ್ದಿಲೈವ್/ಶಿವಮೊಗ್ಗ
ಚಂದನಕೆರೆ ಎಂಪಿಎಂ ಭೂಮಿಯನ್ನ ಸಾಗುವಳಿ ರೈತರಿಗೆ ಬಿಟ್ಟುಕೊಡಿ ಎಂದು ನಡೆಯುತ್ತಿರುವ ಡಿಎಸ್ಎಸ್ ಅಂಬೇಡ್ಕರ್ ವಾದದ ಪ್ರತಿಭಟನೆ 83 ನೇ ದಿನಕ್ಕೆ ಕಾಲಿಟ್ಟಿದೆ. 82 ದಿನ ಚಂದನಕೆರೆಯಲ್ಲೇ ನಡೆಯುತ್ತಿದ್ದ ಪ್ರತಿಭಟನೆಯನ್ನ ಜಿಲ್ಲಡಳಿತ ನಿನ್ನೆ ಒಕ್ಕಲೆಬ್ಬಿಸಿದೆ.
ಒಕ್ಕಲೆಬ್ಬಿಸಿದ ಪರಿಣಾಮ ಚಂದನಕೆರೆಯ ಅಂಗಳದಿಂದ ಜಿಲ್ಲಾಧಿಕಾರಿಗಳ ಕಚೇರಿಯ ಅಂಗಳಕ್ಕೆ ಡಿಎಸ್ ಎಸ್ ಪ್ರತಿಭಟನೆಯನ್ನ ಶಿಫ್ಟ್ ಮಾಡಿದೆ. ಜಿಲ್ಲಾಧಿಕಾರಿಗಳ ಅಂಗಳದಲ್ಲಿ ಅಹೋರಾತ್ರಿ ಧರಣಿಗೆ ಡಿಎಸ್ ಎಸ್ ಅಂಬೇಡ್ಕರ್ ವಾದ ಜಿಲ್ಲಾ ಘಟಕ ಮುಂದಾಗಿದೆ.
ದಲಿತ ವಿರೋಧಿ ಜಿಲ್ಲಾಡಳಿತಕ್ಕೆ, ಉಸ್ತುವಾರಿ ಸಚಿವರಿಗೆ ದಿಕ್ಕಾರ ಕೂಗಲಾಗುತ್ತಿದೆ. ಚಂದನಕೆರೆಯ ಸರ್ವೆ ನಂಬರ್ 12 ರಲ್ಲಿ 413 ಎಕರೆ ದನಗಳ ಮುಫತ್ತು ಜಾಗವಿದ್ದು ಇದರಲ್ಲಿ ಖರಾಬು ಭೂಮಿ 60 ಎಕರೆ, 90 ಎಕರೆ ಸಾಗುವಳಿ ಭೂಮಿಯಾಗಿದೆ. ಇದರಲ್ಲಿ 28 ಎಕರೆ ದಲಿತರ ಭೂಮಿಗೆ ಸೇರಿದೆ. ಇದರಲ್ಲಿ 263 ಎಕರೆ
ಯಲ್ಲಿ ಕಿರು ಅರಣ್ಯಕ್ಕೆ 140 ಎಕರೆ ನೀಡಲಾಗಿದೆ. ಉಳಿದ 123 ಎಕರೆಗಳನ್ನ ಗೋಮಾಳಕ್ಕೆ ಬಿಡಲಾಗಿದೆ.
ಅರಣ್ಯದವರು 140 ಎಕರೆ ಕಿರು ಅರಣ್ಯ ಭೂಮಿ ಸೇರಿ ದಲಿತರ 28 ಎಕರೆ ಸಾಗುವಳಿ ಭೂಮಿಯನ್ನ ಅರಣ್ಯ ಭೂಮಿ ಎಂದು ಹೇಳಲಾಗುತ್ತಿದ್ದಾರೆ. ನಿನ್ನೆ ಸಾರ್ವಜನಿಕ ಆಸ್ತಿಗಳಿಗೆ ಚಂದನಕೆರೆಯಲ್ಲಿ ಬಂಧಿಸಲಾಗಿ ನ್ಯಾಯಾಲಕ್ಕೆ ಹಾಜರು ಪಡಿಸಲಾಗಿತ್ತು. ಇಂದು ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿಗೆ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದಜಿಲ್ಲಾ ಸಂಐ ಟನೆ ಶಿಫ್ಟ್ ಮಾಡಿದೆ.
ಸುಳ್ಳಕೇಸು ವಜಾಗೊಳಿಸಬೇಕು. ಬಗುರ್ ಹುಕುಂ ಸಾಗುವಳಿದಾರರಿಗೆಹಕ್ಕುಪತ್ರ ನೀಡಬೇಕು. ದೌರ್ಜನ್ಯ ನಡೆಸಿದ ಅರಣ್ಯ ಅಧಿಕಾರಿಗಳಿಗೆ ಕಾನೂನು ಕ್ರಮ ಜರುಗಿಸಬೇಕು ಎಂದು ಸಂಘಟನಾಕಾರರು ಆಗ್ರಹಿಸಿದ್ದಾರೆ.
ಪ್ರತಿಭಟನೆಯಲ್ಲಿ ಡಿಎಸ್ ಎಸ್ ಅಂಬೇಡ್ಕರ್ ವಾದದ ಟಿ.ಹೆಚ್ ಹಾಲೇಶಪ್ಪ, ಶಿವಕುಮಾರ್ ಅಸ್ತಿ ಎಂಆರ್, ಎಡಿ ಆನಂದ್, ವಕೀಲರಾದ ಎಸ್ ಹೆಚ್ ಧನಂಜಯ್, ಅರದೋಟ್ಲು ನವೀನ್, ಕಲ್ಯಾಣ್, ಹನುಮಂತಪ್ಪ ಮೊದಲಾದವರು ಉಪಸ್ಥಿತರಿದ್ದರು.
ಇದನ್ನೂ ಓದಿ-https://www.suddilive.in/2024/08/blog-post_31.html