ಆಯನೂರು ಪ್ರಶ್ನೆಗೆ ಉತ್ತರಿಸುತ್ತಾರಾ ಸಂಸದರು ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರು?



ಸುದ್ದಿಲೈವ್/ಶಿವಮೊಗ್ಗ


ಶಿವಮೊಗ್ಗದ ಸಂಸದರ ವಿರುದ್ಧ ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ನಾಲ್ಕೈದು ವಿಷಯಗಳನ್ನ ಪ್ರಸ್ತಾಪಿಸಿ ಇದರಲ್ಲಿ ಆಗಿರುವ ಹಗರಣದ ಬಗ್ಗೆ ಅವರು ಬಾಯಿ ಬಿಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ನಾವೇ ದಾಖಲಾತಿ ಹಿಡಿದು ಜನರ ಮುಂದೆ ಬರುವುದಾಗಿ ಎಚ್ಚರಿಸಿದ್ದು ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ.‌


ಸುದ್ದಿಗೋಷ್ಠಿ ನಡೆಸಿದ‌ ಅವರು,  ಶಿವಮೊಗ್ಗದಲ್ಲಿ ಟೋಲ್ ಗೇಟ್ ನ್ನ ಆರಂಭಿಸಿದ್ದಾರೆ. ಟೋಲ್ ಆರಂಭವಾಗಿದ್ದೇ ಬಿಜೆಪಿ ಸಮಯದಲ್ಲಿ. 17/03/2023 ರಲ್ಲಿ ಕುಟ್ರಹಳ್ಳಿ ಮತ್ತು ಕಲ್ಲಾಪುರದ ಟೋಲ್ ಆರಂಭಿಸಿದ ವಿನಯ್ ಲ್ಯಾಡ್ ಎಂಟರ್ ಪ್ರೈಸಸ್ ನ್ನ ಕರೆದುಕೊಂಡು ಬಂದವರು ಯಾರು ಎಂಬುದನ್ನ ಸಂಸದರೇ ಹೇಳಬೇಕು. ಕರ್ನಾಟಕ ರಸ್ತೆ ಅಭಿವೃದ್ಧಿ ಕಾರ್ಪರೇಷನ್ ಮೂಲಕ ಟೆಂಡರ್ ಕರೆಯಿಸಿ ಈಗ ಟೋಲ್  ಬೇಡ ಎಂಬ ಬಿಜೆಪಿ ಹೋರಾಟ ನಾಟಕೀಯವಾಗಿದೆ ಎಂದು ಗುಟರ್ ಹಾಕಿದರು.‌


ಸರ್ಕಾರದ ಒಪ್ಪಂದ ಒಂದಾದರೆ ಒಳ ಒಪ್ಪಂದ ನಡೆದಿದೆ. ಇದನ್ನ ದಾಖಲೆ ಮೇಲೆ ಹೋರಾಟ ನಡೆಸುವುದು ಕಷ್ಟ ಆದರೆ ಒಳ ಒಪ್ಪಂದದ ಬಗ್ಗೆ ಸಂಸದರೇ ಬಾಯಿ ಬಿಡಬೇಕು.  ಮೂಡಾನೂ ಹಾಗೆ ಆಗಿದೆ. ಶಿವಮೊಗ್ಗದಲ್ಲಿ ನಡೆದ ಹಗರಣದ ಬಗ್ಗೆ ಬಿಜೆಪಿಯಾವಾಗ ಪಾದಯಾತ್ರೆ ನಡೆಸುತ್ತದೆ ಎಂದು ಪ್ರಶ್ನಿಸಿದರು. ಶಿವಮೊಗ್ಗದಲ್ಲಿ ಪತ್ರಕರ್ತರಲ್ಲದ ಬೇರೆಯವರಿಗೆ, ಬೇನಾಮಿಗಳಿಗೆ ಸೈಟ್ ಕೊಡಲಾಯಿತು. ಸಂಸದರ ಮನೆಯ ಅಡಿಗೆ ಕೆಲಸದವರಿಗೆ, ಪತ್ರಕರ್ತರಲ್ಲದವರಿಗೆ ಬೇನಾಮಿಗೆ ವರ್ಗಾವಣೆ ಆದ ಖಾತೆಗಳು ಬೇರೆಯವರಿಗೆ ಹೇಗೆ ಹೋಯಿತು ಎಂದು ಸಂಸದರ ಭ್ರಷ್ಠಾಚಾರದ ಕುರಿತು ಅನುಮಾನ ವ್ಯಕ್ತಪಡಿಸಿದರು. 


ಎಂಪಿ ಮತ್ತು ಬಿಜೆಪಿ ರಾಜ್ಯಾಧ್ಯಕ್ಷರು ಬೇನಾಮಿಗಳಿಂದ ಬೇರೆ ಖಾತೆಗಳಿಗೆ ಹೋದ ಬಗ್ಗೆ ಹೆಸರನ್ನ ಹೆಸರಿಸುವಿರಾ ಎಂದು ಕುಟುಕಿರುವ ಆಯನೂರು, ಮನೆ ಮತ್ತು ಕಾರ್ಮಿಕರ ಹೆಸರಿನಲ್ಲಿ ಆಸ್ತಿ ಮಾಡಲಾಗಿದೆ. ಇದು ಶಿವಮೊಗ್ಗದ ಇನ್ನೊಂದು ಮೂಡಾ ಹಗರಣವಾಗಿದೆ. ಪತ್ರಕರ್ತರಲ್ಲದ  ಬೇನಾಮಿಗಳು ಯಾರು ಎಂಬುದನ್ನ ಸಂಸದರು ಹೇಳಬೇಕು ಎಂದು ಅವರು ಒತ್ತಾಯಿಸಿದರು.


ನೈತಿಕತೆಯ ಮೇಲೆ ರಾಜೀನಾಮೆ ನೀಡಬೇಕು ಎನ್ನುವ ಸಂಸದರು ಪತ್ರಕರ್ತರ ಹೆಸರಿನ ಸೈಟ್ ನ್ನ   ಬೇನಾಮಿಯವರಿಗೆ ವರ್ಗಾಯಿಸಿದ ಬಗ್ಗೆ ಹೆಸರನ್ನ ಹೇಳಬೇಕು. ನಕಲಿ ಹೋರಾಟಗಾರರ ಹೆಸರು ಹೊರಗೆ ಬರಬೇಕಲ್ಲ. ಚಾಲಕರು, ಮನೆ  ಕಾರ್ಮಿಕರ ಹೆಸರಿನಲ್ಲಿ ಆಸ್ತಿ ಮಾಡುವ ದರ್ದು ಸಂಸದರಿಗೆ ಏನಾಗಿತ್ತು ಎಂದು ಕುಟುಕಿದರು. 


ಖರ್ಗೆಯವರಿಗೆ ಶಿವಮೊಗ್ಗದಲ್ಲಿ ಜಾಗ ನೀಡಲಾಗಿದೆ ಎಂದು ಬಿಜೆಪಿಯ ನಾರಾಯಣ ಸ್ವಾಮಿ ಅವರು ರಾಜ್ಯಪಾಲರಿಗೆ ಹೋಗಿ ಪತ್ರಕೊಟ್ಟುಬಂದಿದ್ದಾರೆ. ಹಾಗಾದರೆ ಶಿವಮೊಗ್ಗದ ಹಗರಣಕ್ಕೆ ಯಾರು ಪತ್ರಕೊಡಬೇಕು. ಸಹ್ಯಾದ್ರಿ ನಾರಾಯಣ ಹೃದಯಾಲಯದ ಬಳಿ ಯಥೇಚ್ಚವಾಗಿ ಇದ್ದ ಆಸ್ತಿಯನ್ನ ಬಳಸಿಕೊಳ್ಳದೆ ಕೆಐಡಿಬಿ ಮೂಲಕ ನಾಲ್ಕು ಎಕರೆ ಜಾಗವನ್ನ ಆಸ್ಪತ್ರೆಗೆ ನೀಡಲಾಯಿತು. 


ನೂರಾರು ಎಕರೆಯಲ್ಲಿ ಕೈಗಾರಿಕೆ ವಸಹತುಗಳನ್ನ ಮಾಡಿ ಹಂಚುವ ಕೆಐಡಿಬಿ ಕೇವಲ ನಾಲ್ಕು ಎಕರೆಯನ್ನ ಬಡ ರೈತರಿಂದ ಬಿಡಿಸಿಕೊಂಡು ಆಸ್ಪತ್ರೆಗೆ ನೀಡಲಾಯಿತು. ಅಧಿಕಾರ ದುರುಪಯೋಗ ಹೇಗೆ ಆಯಿತು ಎಂಬುದನ್ನ ಸಙಸದರು ಬಾಯಿಬಿಡಬೇಕು ಎಂದು ಪ್ರಶ್ನಿಸಿದರು. 


ಕೈಗಾರಿಕ ವಸಹತು ನಿರ್ಮಿಸುವ ಕೆಐಡಿಬಿಯನ್ನೂ ಬಿಡದ ಸಂಸದರು ಮತ್ತು ರಾಜ್ಯಾಧ್ಯಕ್ಷರು ಮೈಸೂರು ಪಾದಯಾತ್ರೆ ನಡೆಸದಂತೆ ಶಿವಮೊಗ್ಗಕ್ಕೆ ಯಾವಾಗ ಪಾದಯಾತ್ರೆ ನಡೆಸುತ್ತೀರಿ? ಅಧಿಕಾರ ಇದೆ ಎಂದು ಸರ್ಕಾರವನ್ನ ದುರುಪಯೋಗ ಪಡಿಸಿಕೊಂಡಿದ್ದು ಹೇಗೆ? ಇದನ್ನ ಸಂಸದರು ಹೇಳಬೇಕು. ಹೇಳದಿದ್ದರೆ ದಾಖಲೆ ಸಮೇತ ಮುಂದಿನ ದಿನಗಳಲ್ಲಿ ನಾವು ಮಾಹಿತಿ ನೀಡುತ್ತೇವೆ ಎಂದು ಎಚ್ಚರಿಸಿದರು. 


ಯಡಿಯೂರಪ್ಪ ಹೋರಾಟಗಾರರು ಅವರ ಮಕ್ಕಳು ಹುಟ್ಟು ಹೋರಾಟಗಾರರು ಎಂದು ವ್ಯಂಗ್ಯವಾಡಿದ ಆಯನೂರು, ಕೆಐಡಿಬಿಯನ್ನ ದುರುಪಯೋಗ ಪಡಿಸಿಕೊಂಡವರ ಬಗ್ಗೆ ಹೆಸರು ಬಹಿರಂಗ ಪಡಿಸಬೇಕು. 


ಕಾರ್ಕಳದ ಯುವತಿಯ ಬಗ್ಗೆ ಹೋರಾಟ ನಡೆಸಿದ ಶಿವಮೊಗ್ಗ ಬಿಜೆಪಿ ಮಹಿಳ ಮೋರ್ಚಾ ಹಾಸನದ ಮಹಿಳೆಯರ ಬಗ್ಗೆ ಕನಿಕರವಿಲ್ಲ ಏಕೆ ಎಂದು ಆಕ್ಷೇಪಿಸಿದರು. ಕಾರ್ಕಳದಲ್ಲಿ ನಡೆದ ಅತ್ಯಾಚಾರವನ್ನ ಖಂಡಿಸಿದ ಬಿಜೆಪಿಗೆ ಹಾಸನದಲ್ಲಿ ನಡೆದ ಅತ್ಯಾಚಾರಗಳ ಬಗ್ಗೆ ಕನಿಕರವಿದೆಯಾ ಎಂದು ಪ್ರಶ್ನಿಸಿದರು.


ಶಿವಮೊಗ್ಗ, ಶಿಕಾರಿಪುರ, ಹಾನಗಲ್ ರಸ್ತೆಯಲ್ಲಿರುವ ಕುಟ್ರಹಳ್ಳಿ ಮತ್ತು ಕಲ್ಲಾಪುರದ ಟೋಲ್ ವಿನಯ್ ಲಾಡ್ ಎಂಬುವರಿಗೆ 1593.66 ಲಕ್ಷದಲ್ಲಿ ಟೆಂಡರ್ ಆಗಿದೆ. ಆತನಿಗೆ 40 ತಿಂಗಳಲ್ಲಿ 12,46,26,262 ಹಣ ಸಂಗ್ರಹಿಸಲು ಅನುವು ಮಾಡಿಕೊಡಲಾಗಿದೆ. ಈ  ಬಗ್ಗೆ ಡಿಸಿಎಂ ಗಮನಕ್ಕೆ ತಂದು ರದ್ದುಪಡಿಸುವ ಕ್ರಮಕೈಗೊಳ್ಳಲಾಗುತ್ತಿದೆ ಎಂದು ಆಯನೂರು ತಿಳಿಸಿದರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು