ಆರೋಪಿ ಭವಿತ್ |
ಸುದ್ದಿಲೈವ್/ಶಿವಮೊಗ್ಗ
ಜಯನಗರ ಪೊಲೀಸ್ ಠಾಣೆಯಲ್ಲಿ ವಿವಿಧ ಕೇಸ್ ಗಳಲ್ಲಿ ಭಾಗಿಯಾಗಿದ್ದ ಆರೋಪಿ ಕಾಲಿಗೆ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ. ಆರೋಪಿ ಪತ್ತೆ ಮಾಡಿ ವಶಕ್ಕೆ ಪಡೆಯುವ ವೇಳೆಗೆ ಆರೋಪಿ ತಪ್ಪಿಸಿಕೊಳ್ಳಲು ಯತ್ನಿಸಲು ಹೋಗಿ ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದವನ ಕಾಲಿಗೆ ಗುಂಡು ಹಾರಿಸಲಾಗಿದೆ.
ಭವಿತ್ ಎಂಬ 26 ವರ್ಷದ ವ್ಯಕ್ತಿಯನ್ನ ಬಂಧಿಸಲು ಹೋದಾಗ ಪೊಲೀಸ್ ಸಿಬ್ಬಂದಿ ಮತ್ತು ಜಯನಗರ ಪಿಎಸ್ಐ ಸುನೀಲ್ ನ ಮೇಲೆ ದಾಳಿ ನಡೆಸಿದ್ದಾನೆ. ಬಸವನ ಗಂಗೂರು ಚಾನಲ್ ಬಳಿ ಕಾಲಿಗೆ ಗುಂಡು ಹೊಡೆದಿರುವುದಾಗಿ ತಿಳಿದು ಬಂದಿದೆ.
ಗಾಯಾಳು ಭವಿತ್ |
ರೈಲ್ವೇ ಕ್ವಾಟರ್ಸ್ ಏರಿಯಾದ ಭವಿತ್ ಮೇಲೆ ಸುಮಾರು 7 ವಿವಿಧ ಆರೋಪಗಳಿವೆ ಕೊಲೆ, ಕೊಲೆಗೆ ಯತ್ನ, ದರೋಡೆ ಪ್ರಕರಣದಲ್ಲಿ ಭಾಗಿಯಾಗಿದ್ದು ಆತನ ವಿರುದ್ಧ ಜಯನಗರ ಪೊಲೀಸ್ ಠಾಣೆಯಲ್ಲಿ ರೌಡಿ ಶೀಟರ್ ತೆಗೆಯಲಾಗಿತ್ತು, ನ್ಯಾಯಾಲಯದ ಕಲಾಪಗಳಿಗೂ ತಪ್ಪಿಸಿಕೊಂಡು ಓಡಾಡುತ್ತಿದ್ದ.
ಗಾಯಾಳು ಪೊಲೀಸ್ ಸಹ ಮೆಗ್ಗಾನ್ ಗೆ ದಾಖಲು |
ಇಂದು ಆತನನ್ನಬಂಧಿಸಲು ಹೋದಾಗ ಪೊಲೀಸರ ಮೇಲೆ ಹಲ್ಲೆ ನಡೆಸಲು ಮುಂದಾದ ಕಾರಣ ಆತನ ಕಾಲಿಗೆ ಗುಂಡೇಟು ಹೊಡೆದು ವಶಕ್ಕೆ ಪಡೆಯಲಾಗಿದೆ.