ಸುದ್ದಿಲೈವ್/ಚಂದ್ರಗುತ್ತಿ
ಐತಿಹಾಸಿಕ ದೇವಸ್ಥಾನ ಚಂದ್ರಗುತ್ತಿ ರೇಣುಕಮ್ಮ ದೇವಾಲಯಕ್ಕೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಭೇಟಿ ನೀಡಿದರು.
ದೇವಸ್ಥಾನದ ಸರ್ವಾಂಗಿಣ ಅಭಿವೃದ್ಧಿಗಾಗಿ ಇಂದು ಅಧಿಕಾರಿಗಳ ಸಭೆ ನಡೆಯುವ ಮುನ್ನಾ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಯಾಶೀರ್ವಾದ ಪಡೆದರು.
ಈ ವೇಳೆ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ದೇವಿಗೆ ಸಚಿವರಿಂದ ಹುಡಿತುಂಬಿಸಲಾಯಿತು. ಸಚಿವರಿಗೆ ಏಸಿ ಯತೀಶ್ ಯವರು ಮೈಸೂರು ಪೇಟೆ ತೊಡಿಸಿ ಸನ್ಮಾನಿಸಲಾಯಿತು.
ಈ ವೇಳೆ ಅಂಗಡಿ ಮಾಲೀಕರು ಸಚಿವರಿಗೆ ಮನವಿನೀಡಿದ್ದಾರೆ. ದೇವಿಯ ದರ್ಶನ ಮುಗಿಸಿಕೊಂಡು ಹೊರ ಬರುವ ವೇಳೆ ಅಂಗಡಿ ಮಾಲೀಕರು ಚಂದ್ರಗುತ್ತಿ ದೇವಸ್ಥಾನದ ಸುತ್ತಮುತ್ತ ವ್ಯಾಪಾರಕ್ಕೆ ಅನುಕೂಲ ಮಾಡಿಕೊಡಲು ಮನವಿ ಸಲ್ಲಿಸಿದರು.