ಸುದ್ದಿಲೈವ್/ಭದ್ರಾವತಿ
ಮೂಡ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ಮುಖ್ಯಮಂತ್ರಿ ಸಿದ್ಧರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದನ್ನು ವಿರೋಧಿಸಿ ಭದ್ರಾವತಿಯಲ್ಲಿ ಹಲವು ಸಂಘಟನಗಳು ಬೀದಿಗಿಳಿದು ಪ್ರತಿಭಟಿಇವೆ.
ತಾಲೂಕು ಕುರುಬರ ಸಂಘ, ಕನಕ ಯುವಪಡೆ, ಸಂಗೋಳ್ಳಿ ರಾಯಣ್ಣ ಯುವ ವೇದಿಕೆ, ಅಹಿಂದ ವೇದಿಕೆ ಮತ್ತು ದಲಿತ ಸಂಘರ್ಷ ಸಮಿತಿ ಸೇರಿದಂತೆ ಮುಂತಾದ ಸಂಘಟನೆಗಳು ನಗರದಲ್ಲಿ ಇಂದು ರಾಜ್ಯಪಾಲರ ಹಾಗೂ ಭಾಜಪ ಪಕ್ಷದ ವಿರುದ್ಧ ಘೋಷಣೆಗಳನ್ನು ಕೂಗಿ , ಟೈರ್ ಗಳನ್ನು ಸುಡುವುದರ ಮೂಲಕ ಅಕ್ರೋಶ ವ್ಯಕ್ತಪಡಿಸಿದರು.