ಜಲಾಶಯದ ಇಂದಿನ ನೀರಿನ ಮಟ್ಟ



ಸುದ್ದಿಲೈವ್/ಶಿವಮೊಗ್ಗ


ಮಲೆನಾಡಿನಲ್ಲಿ ಮಳೆಯ ಅಬ್ಬರ ತಗ್ಗಿದೆ. ಆದರೂ ಏಕಾಏಕಿ ನದಿಗಳ ಒಳಹರಿವು ತಗ್ಗಿಲ್ಲ.  ತುಂಗ, ಭದ್ರ ಮತ್ತು ಲಿಂಗನಮಕ್ಕಿ ಜಲಾಶಯಕ್ಕೆ ನಿನ್ನೆ ಹಾಗೂ ಮೊನ್ನೆ ಹರಿದು ಬಂದಷ್ಟು ನೀರು ಹರಿದಿ ಬರುತ್ತಿಲ್ಲ. ಆದರೆ, ಅಪಾಯಮಟ್ಟದಲ್ಲೇ ನದಿಗಳು ಇವೆ.


186 ಅಡಿ ಸಾಮರ್ಥ್ಯದ ಭದ್ರಜಲಾಶಯಕ್ಕೆ 56152 ಕ್ಯೂಸೆಕ್ ನೀರು ಹರಿದು ಬರುತ್ತಿದೆ. 183.10 ಅಡಿ ನೀರು ಸಂಗ್ರಹವಾಗಿದೆ. ಆದರೆ 65,724 ಕ್ಯೂಸೆಕ್ ನೀರನ್ನ ಜಲಾಶಯದಿಂದ ನದಿಗೆ ಹರಿಸಲಾಗುತ್ತಿದೆ. 



ತುಂಗ ಜಲಾಶಯಕ್ಕೆ 77 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ. 20 ಗೇಟನ್ನ ಒಂದು ವರೆ ಮೀಟರ್ ಎತ್ತರ ಗೇಟನ್ನ ಎತ್ತರಿಸಿ ನದಿಗೆ ನೀರು ಹರಿಸಲಾಗುತ್ತಿದೆ. ಒಂದು ಗೇಟನ್ನ ಅರ್ಧ ಮೀಟರ್ ಎತ್ತರಿಸಿ ನೀರು ಹರಿಸಲಾಗುತ್ತಿದೆ. 21 ಗೇಟನ ಮೂಲಕ 77856 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ.


ಲಿಂಗನಮಕ್ಕಿಗೆ 53 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದ್ದು 1819 ಸಾಮರ್ಥ್ಯದ ಜಲಾಶಯಕ್ಕೆ ನಿನ್ನೆ 1812.65 ಅಡಿ ನೀರು ಸಂಗ್ರಹವಾಗಿತ್ತು. ಇಂದು 1814 ಅಡಿ ನೀರು ಸಂಗ್ರಹವಾಗಿದೆ. ಇವತ್ತು ಜಲಾಶಯದಿಂದ ನದಿಗೆ ನೀರು ಹರಿಸಲಾಗುತ್ತಿದೆ. 


ಇದನ್ನೂ ಓದಿ-https://www.suddilive.in/2024/08/blog-post_1.html

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು