ಸುದ್ದಿಲೈವ್/ರಿಪ್ಪನ್‌ಪೇಟೆ
ಇಲ್ಲಿನ ಹೊಸನಗರ ರಸ್ತೆಯ ಖಾಸಗಿ ಲಾಡ್ಜ್ ವೊಂದರಲ್ಲಿ ಯುವಕನೊಬ್ಬ ವಿಷ ಸೇವಿಸಿರುವ ಘಟನೆ ನಡೆದಿದೆ.ಬಿದನೂರು ನಗರ ಸಮೀಪದ ಹೆಂಡೆಗದ್ದೆ ನಿವಾಸಿ ರಾಕೇಶ್ ( 22) ವಿಷ ಸೇವಿಸಿರುವ ಯುವಕನಾಗಿದ್ದಾನೆ.
ನಡೆದಿದ್ದೇನು..!??
ಇಂದು ಬೆಳಿಗ್ಗೆ ನಗರ ಮೂಲದ ಯುವಕ ರಾಕೇಶ್ ಖಾಸಗಿ ಲಾಡ್ಜ್ ನಲ್ಲಿ ರೂಮ್ ಮಾಡಿಕೊಂಡಿದ್ದು ಮಧ್ಯಾಹ್ನದ ಸಮಯದಲ್ಲಿ ವಿಷ ಸೇವಿಸಿದ್ದಾನೆ ಸ್ವಲ್ಪ ಸಮಯದಲ್ಲಿ ಯುವಕನು ನರಳಾಡುತಿದ್ದದ್ದು ಲಾಡ್ಜ್ ನ ವ್ಯವಸ್ಥಾಪಕರ ಗಮನಕ್ಕೆ ಬಂದು ಬಾಗಿಲು ತೆರೆದು ನೋಡಿದಾಗ ವಿಷ ಸೇವಿಸಿರುವುದು ಧೃಡಪಟ್ಟಿದೆ.ಕೂಡಲೇ ರಿಪ್ಪನ್‌ಪೇಟೆ ಪಿಎಸ್‌ಐ ಪ್ರವೀಣ್ ಎಸ್ ಪಿ ರವರಿಗೆ ಮಾಹಿತಿ ತಿಳಿಸಿದ್ದಾರೆ.
ತಕ್ಷಣ ಸ್ಥಳಕ್ಕೆ ತೆರಳಿದ ಪಿಎಸ್‌ಐ ಹಾಗೂ ಸಿಬ್ಬಂದಿಗಳು ಯುವಕನನ್ನು ರಿಪ್ಪನ್‌ಪೇಟೆ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತಂದು ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ.
ಯುವಕನ ಸ್ಥಿತಿ ಗಂಭೀರವಾಗಿದ್ದು ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಮೆಗ್ಗಾನ್ ಗೆ ರವಾನಿಸಲಾಗಿದೆ. ರಿಪ್ಪನ್‌ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಇದನ್ನೂ ಓದಿ-https://www.suddilive.in/2024/08/blog-post_40.html