ಸುದ್ದಿಲೈವ್/ಶಿವಮೊಗ್ಗ
ಮಾನವ ಬಂಧುತ್ವ ವೇದಿಕೆ ಸೊರಬ ಹಾಗೂ ಕಾನೂನು ವಿದ್ಯಾರ್ಥಿಗಳಿಂದ ಇಂದು ಶಿವಮೊಗ್ಗ ನಗರದ ಜಯನಗರ ಪೊಲೀಸ್ ಠಾಣೆಯಲ್ಲಿ ರಕ್ಷಾ ಬಂಧನ ಹಬ್ಬವನ್ನು ಆಚರಿಸಲಾಯಿತು,
ಠಾಣೆಗೆ ತೆರಳಿದ ಸಂಘಟನಾಕಾರರು ಮತ್ತು ವಿದ್ಯಾರ್ಥಿಗಳು ಪೊಲೀಸರಿಗೆ ಪೂಜೆ ಮಾಡಿ ರಾಖಿ ಕಟ್ಟಿದ್ದಾರೆ.ಈ ಕಾರ್ಯಕ್ರಮನ ಉದ್ದೇಶಿಸಿ ಕಾನೂನು ವಿದ್ಯಾರ್ಥಿ ಹಾಗೂ ಸಮಾಜ ಸೇವಕರಾದ ಶಶಿಕುಮಾರ್ ಕೆ ಅವರು ರಕ್ಷಾ ಬಂಧನ ಎಂದರೆ ಒಡಹುಟ್ಟಿದ ಸಹೋದರರಿಗೆ ಮಾತ್ರ ಸೀಮಿತವಾಗಿಲ್ಲ ರಕ್ಷಾ ಬಂಧನ ವು ನಮಗೆ ರಕ್ಷಣೆ ಕೊಡುವಂತಹ ಪ್ರತಿಯೊಬ್ಬರಿಗೂ ಸಂಬಂಧಿಸಿದ್ದು ಎಂದು ಹೇಳಿದರು,
ಮಾನವ ಬಂಧುತ್ವ ವೇದಿಕೆ ಸೊರಬ ಅಧ್ಯಕ್ಷರಾದ ರಾಜೇಶ್ ಸಿ ಕಾನಡೆ ಅವರು ಮಾತನಾಡಿ ಪೋಲಿಸ್ ಇಲಾಖೆಯವರು ನಮಗೆ ಯಾವುದೇ ಜನಾಂಗ ಧರ್ಮ ಲಿಂಗ ಜಾತಿ ಎಂಬ ತಾರತಮ್ಯವಿಲ್ಲದೆ ನಮಗೆ ರಕ್ಷಣೆ ನೀಡುವ ಹೊರೆಯನ್ನು ಹೊತ್ತಿದ್ದಾರೆ ಆದ್ದರಿಂದ ಅವರಿಗೆ ರಾಕಿ ಕಟ್ಟುವ ಮೂಲಕ ರಕ್ಷಾಬಂಧನ ಹಬ್ಬವನ್ನು ಆಚರಿಸರಿಸಿದ್ದೇವೆ ಈ ರೀತಿಯಾಗಿ ನಾವು ಪೋಲಿಸ್ ಇಲಾಖೆಗೆ ಧನ್ಯವಾದಗಳನ್ನು ತಿಳಿಸಿದ್ದೇವೆ.
ಈ ಕಾರ್ಯಕ್ರಮದಲ್ಲಿ ಕಾನೂನು ವಿದ್ಯಾರ್ಥಿಗಳಾದ 1 ಸ್ಪಂದನ, 2 ಅಕ್ಷತಾ, 3 ಸಂಗೀತ, 4 ಐಶ್ವರ್ಯ, 5 ವಿದ್ಯಾ, 6 ಸ್ನೇಹ, 7 ಭಾರತಿ ಹಾಗೂ ಸಹೋದರಿ ಯಾದಂತಹ ಶಿಲ್ಪ ಅಜಯ್, ಕಾವ್ಯ, 3 ರೇವತಿ ಭಾಗವಹಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಪೋಲಿಸ್ ಇಲಾಖೆಯ PSI ಕೋಮಲ ಮೇಡಂ ಸಿಬ್ಬಂದಿಗಳಾದ ಸಚಿನ್ ಸರ್ ರಾಮಕೃಷ್ಣ ಸರ್ ಗಾಯತ್ರಿ ಮೇಡಂ ಸರೋಜಿನಿ ಮೇಡಂ ರಾಘವೇಂದ್ರ ಸರ್ ಹಾಗೂ ಹಲವಾರು ಸಿಬ್ಬಂದಿ ವರ್ಗದವರಿದ್ದರು.