ಸೋಮವಾರ, ಆಗಸ್ಟ್ 26, 2024

ಭದ್ರಾವತಿ-ನಗರ ಸಭೆ ಉಪಾಧ್ಯಕ್ಷರಾಗಿ ಮಣಿ ಆಯ್ಕೆ



ಸುದ್ದಿಲೈವ್/ಭದ್ರಾವತಿ


ಭದ್ರಾವತಿಯ ನಗರ ಸಭೆ ಉಪಾಧ್ಯಕ್ಷರ ಆಯ್ಕೆ ನಡೆದಿದೆ. ಅಧ್ಯಕ್ಷರ ಆಯ್ಕೆಗೆ ಮೀಸಲಾತಿ ಪ್ರಕಟವಾಗುವವರೆಗೂ ಮುಂದೂಡಲ್ಪಟ್ಟಿದ್ದು, ಇದರ ನಡುವೆ ಉಪಾಧ್ಯಕ್ಷರ ಸ್ಥಾನಕ್ಕೆ ಚುನಾವಣೆ ನಡೆದಿದೆ. 


ಇಂದು ಭದ್ರಾವತಿಯ ನಗರ ಸಭೆಯ ಉಪಾಧ್ಯಕ್ಷರ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನ ಸದಸ್ಯರಿಬ್ಬರೂ ನಾಮಪತ್ರ ಸಲ್ಲಿಸಿದ್ದರು. ಕಾಂಗ್ರೆಸ್ ನಿಂದ ಮಣಿ ಸ್ಪರ್ಧಿಸಿದ್ದರೆ, ಜೆಡಿಎಸ್ ನಿಂದ ಕವಿತಾ ಉಮೇಶ್ ಕಣದಲ್ಲಿದ್ದರು‌.


ಶಾಸಕರ ಬೆಂಬಲದೊಂದಿಗೆ 11 ನೇ ವಾರ್ಡ್ ನ ಕಾಂಗ್ರಸ್ ನ ಸದಸ್ಯ  ಮಣಿ ನೂತನ ಉಪಾಧ್ಯಕ್ಷರಾಗಿ ಆಯ್ಕೆಯಾದರು. 19 ಮತಗಳನ್ನ ಪಡೆದ ಮಣಿ ಉಪಾಧ್ಯಕ್ಷ ಸ್ಥಾನಕ್ಕೆ ಏರಿದ್ದಾರೆ. 


ಇವರ ಪ್ರತಿಸ್ಪರ್ಧಿಯಾಗಿ ಜೆಡಿಎಸ್ ನಿಂದ ಸ್ಪರ್ಧಿಸಿದ್ದ ಕವಿತಾ ಉಮೇಶ್ 14 ಮತ ಪಡೆದು ಪರಾಜಿತರಾದರು. ಮೂರು ಜನ ಬಿಜೆಪಿ ಸದಸ್ಯರು ಚುನಾವಣೆ ಪ್ರಕ್ರಿಯೆಯಲ್ಲಿ ಗೈರಾಗಿದ್ದರು. ಚುನಾವಣೆ ಅಧಿಕಾರಿಯಾಗಿ ಸತ್ಯನಾರಾಯಣ್ ಕರ್ತವ್ಯ ನಿರ್ವಹಿಸಿದ್ದರು. 


ಪೌರಾಯುಕ್ತ ಪ್ರಕಾಶ್ ಚೆನ್ನಣ್ಣನವರ್, ಅವರ ಸಮ್ಮುಖದಲ್ಲಿ ಚುನಾವಣೆ ನಡೆದಿದೆ.  ಒಟ್ಟು 35 ಸದಸ್ಯರಿದ್ದ ನಗರ ಸಭೆಯಲ್ಲಿ ಶಾಸಕರ ಮತಗಳು ಸೇರಿ 36 ಸದಸ್ಯರನ್ನ ಹೊಂದಿದೆ. 36 ಜನ ಸದಸ್ಯರಲ್ಲಿ 19 ಜನ ಕಾಂಗ್ರೆಸ್ ಪರ ಮತ ಚಲಾಯಿಸಿದರೆ, ಬಿಜೆಪಿಯ ಮೂವರು ಸದಸ್ಯರ ಗೈರು ಹಾಜರಿಯಾಗಿದ್ದರು. ಜೆಡಿಎಸ್ ನಿಂದ 14 ಜನ ಮತ ಚಲಾಯಿಸಿದ್ದರು. ಅದ್ಯಕ್ಷ ಕೆಟಗಾರಿ ಘೋಷಣೆ ಆಗದ  ಕಾರಣ ಅದರ ಆಯ್ಕೆಯನ್ನ ಮುಂದಕ್ಕೆ ಹಾಕಲಾಗಿದೆ. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ