Suddi Live/ಶಿವಮೊಗ್ಗ
ಶ್ರಾವಣ ಹಬ್ಬಕ್ಕೆ ಗಂಡ ಮಕ್ಕಳ ಜೊತೆ ಸಹೋದರನ ಮನೆಗೆ ಬಂದಿದ್ದ 22 ವರ್ಷದ ವಿವಾಹಿತ ಮಹಿಳೆ ನಾಪತ್ತೆಯಾಗಿದ್ದಾರೆ.
ಕಲ್ಲಗಂಗೂರಿನಲ್ಲಿ ಶ್ರಾವಣ ಹಬ್ಬಕ್ಕೆ ಸಹೋದರನ ಮನೆಗೆ ಗಂಡ ಮತ್ತು ಮಕ್ಕಳ ಜೊತೆ ಬಂದಿದ್ದ ವಿವಾಹಿತ ಮಹಿಳೆಗೆ ಒಂದು ಮೊಬೈಲ್ ಕರೆಯಿಂದ ನಿರಂತರವಾಗಿ ಕರೆ ಬರಲು ಆರಂಭಿಸಿದೆ. ಇದನ್ನ ಗಮನಿಸಿದ ಸಹೋದರ ಕರೆ ಮಾಡಿ ವಿಚಾರಿಸಿದ್ದಾರೆ.
ಹೊನ್ನಾಳಿ ಸಂಘದವರೆಂದು ಹೇಳಿದ ಕಾರಣ ಸುಮ್ಮನಿದ್ದರು. ಆದರೂ ಅನುಮಾನಗೊಂಡು ಕರೆ ಮಾಡಿದಾಗ ಯಾವುದೋ ಗಂಡಸಿನ ವಾಯ್ಸ್ ಕೇಳಿ ಬಂದಿದೆ. ಪತಿ ಹಾಗೂ ಸಹೋದರ ಇಬ್ಬರೂ ಮಹಿಳೆಗೆ ಕೂರಿಸಿ ಬುದ್ದಿ ಹೇಳಿದ್ದಾರೆ. ಅನುಮಾನ ಪಡುತ್ತಿದ್ದೀರಿ ಎಂದು ಮಹಿಳೆ ಕೋಪಗೊಂಡು ಮಕ್ಕಳ ಜೊತೆ ಮನೆ ಬಿಟ್ಟು ಹೋಗಲು ಯತ್ನಿಸಿದ್ದಾಳೆ.
ಮಕ್ಕಳನ್ನ ವಾಪಾಸ್ ಕರೆಯಿಸಿದ ಸಹೋದರ ಮತ್ತು ಪತಿ ಇದರಲ್ಲಿ ಯಶಸ್ವಿಯಾಗಿದ್ದಾರೆ ಆದರೆ ಬಸ್ ಹತ್ತಿಕೊಂಡು ಹೋದ ವಿವಾಹಿತ ನಾಪತ್ತೆಯಾಗಿದ್ದಾರೆ. ಈ ಘಟನೆ ಆ.11 ರಂದು ನಡೆದಿದೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.