ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದ ಆಟೋ ಚಾಲಕರ ನಡುವಿನ ಕಿರಿಕ್


 

ಸುದ್ದಿಲೈವ್/ಶಿವಮೊಗ್ಗ


ಶಿವಮೊಗ್ಗದ ಕೇಸ್ ಆರ್ ಟಿಸಿ ಬಸ್ ನಿಲ್ದಾಣದ ಮುಂಭಾಗದ ಆಟೋ ನಿಲ್ದಾಣ ಕೆಲವರ ಆಸ್ತಿಯಂತೆ ವರ್ತಿಸಲು ಆರಂಭಿಸಿದ್ದಾರೆ. ಹಬ್ಬದ ದಿನಗಳಲ್ಲಿ ಹೆಚ್ಚಿನ ವಸೂಲಿ ನಡೆಯುವ ಈ ಆಟೋ ನಿಲ್ದಾಣದಲ್ಲಿ ಹೊಸಬರಿಗೆ ಅವಕಾಶವಿಲ್ಲದಂತೆ ವರ್ತಿಸಲು ಅಲ್ಲಿನ ಚಾಲಕರು ಆರಂಭಿಸಿದ್ದಾರೆ.


ಪ್ರೀಪೇಯ್ಡ್ ಆಟೋ ನಿಲ್ದಾಣ ಆರಂಭವಾಗಬೇಕಿದ್ದ ಈ ನಿಲ್ದಾಣದಲ್ಲಿ ಹೊಸಬರ ಆಟೋಗಳನ್ನ ಅಡ್ಡಕಟ್ಟಿ ದಬ್ಬಾಳಿಕೆನಡೆಸಿರುವ ಘಟನೆಯೊಂದು ದೊಡ್ಡಪೇಟೆ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ.


ಎಲ್ ಬಿಎಸ್ ನಗರದ ಆಟೋ ಚಾಲಕನೋರ್ವ ಶಿವಮೊಗ್ಗದ ಬಸ್ ನಿಲ್ದಾಣದ ಆಟೋ ನಿಲ್ದಾಣದ ಬಳಿ  ತಮ್ಮ ಪರಿಚಯಸ್ಥರನ್ನ ಕೂರಿಸಿಕೊಂಡು ಹೋಗಲು ಬಂದ ವೇಳೆ ಅಲ್ಲಿನ ಕೆಲ ಚಾಲಕರು ಅಡ್ಡಹಾಕಿ ಆಟೋ ಸೈಡ್ ಗೆ ಹಾಕು ಎಂದು ಗದರಿಸಿದ್ದಾರೆ.


ಈ ಸ್ಟ್ಯಾಂಡ್ ನಲ್ಲಿ ನಾವು ದುಡಿಯ ಬೇಕು ಎಂದಿದ್ದಾರೆ. ನಾನು ಬಾಡಿಗೆ ಹೊಡೆಯಲು ಬಂದಿಲ್ಲ. ಪರಿಚಯಸ್ಥರನ್ನ ಕೂರಿಸಿಕೊಂಡು ಹೋಗಲು ಬಂದಿರುವೆ ಎಂದು ಹೇಳಿದರೂ   ಕೆಎ 14 ಸಿ 8058, ಕೆಎ 14 ಸಿ 2381  ಆಟೋ ಚಾಲಕರು ಹಲ್ಲೆ ನಡೆಸಿದ್ದಾರೆ.


ಆಟೋದಲ್ಲಿದ್ದ ಪರಿಚಯಸ್ಥರು ಗಲಾಟೆ ಬಿಡಿಸಿದ್ದು ಮತ್ತೊಮ್ಮೆ ಸ್ಟ್ಯಾಂಡ್ ಕಡೆ ಕಾಣಿಸಿಕೊಂಡರೆ ಜೀವ ಸಹಿತ ಬಿಡಲ್ಲ ಎಂದು ಬೆದರಿಸಿದ್ದಾರೆ. ಜೀವ ಬೆದರಿಕೆ ಹಾಕಿದವರನ್ನ ತೌಫಿಕ್, ಮುಬಾರಕ್ ಮತ್ತು ನಯಾಜ್ ಎಂದು ಗುರುತಿಸಲಾಗಿದೆ. ಪ್ರಕರಣ ದೊಡ್ಡಪೇಟೆ ಠಾಣೆಯಲ್ಲಿ ದೂರು ದಾಖಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು