Girl in a jacket

ಜಿಲ್ಲೆಯ ಪ್ರಮುಖ ಜಲಾಶಯಗಳ ಒಳಹರಿವು



ಸುದ್ದಿಲೈವ್/ಶಿವಮೊಗ್ಗ


ಮಳೆಯ ಒಳಹರಿವು ತಗ್ಗಿದ ಪರಿಣಾಮ ಜಿಲ್ಲೆಯ ಪ್ರಮುಖ ಜಲಾಶಯಗಳಗಳ ಒಳ ಮತ್ತು ಹೊರಹರಿವು ಕಡಿಮೆಯಾಗಿದೆ. ಇದರಿಂದ ಜಿಲ್ಲೆಯ ಜಲಾಶಯಗಳು ಶಾಂತರೀತಿಯಲ್ಲಿ ಹರಿಯುತ್ತಿವೆ. 


ಜಲಾಶಯದ ಒಳ ಹರಿವು ತುಸು ಇಳಿಕೆಯಾಗಿದೆ. ಇವತ್ತು 36,601 ಕ್ಯೂಸೆಕ್‌ ಇದೆ. 27,780 ಕ್ಯೂಸೆಕ್‌ ನೀರನ್ನು ಹೊರ ಬಿಡಲಾಗುತ್ತಿದೆ. ಜಲಾಶಯದ ಗರಿಷ್ಠ ನೀರು ಸಂಗ್ರಹ ಮಟ್ಟ 1819 ಅಡಿ. ಇವತ್ತು 1815.60 ಅಡಿಯಷ್ಟು ನೀರಿನ ಸಂಗ್ರಹವಿದೆ. 140.27 ಟಿಎಂಸಿ ನೀರು ಇದೆ.


ತುಂಗಾ ಜಲಾಶಯದ ಒಳ ಹರಿವು ಕೂಡ ಇಳಿಕೆಯಾಗಿದೆ. ಇವತ್ತು 35,957 ಕ್ಯೂಸೆಕ್‌ ಒಳ ಹರಿವು ಇದೆ. ಅಷ್ಟೆ ಪ್ರಮಾಣದ ನೀರನ್ನು ಹೊರ ಬಿಡಲಾಗುತ್ತಿದೆ. ತುಂಗಾ ನದಿ ಮೈದುಂಬಿ ಹರಿಯುತ್ತಿದೆ. ನೀರಿನ ಮಟ್ಟ ಇಳಿಕೆ ಆಗಿರುವುದರಿಂದ ಕೋರ್ಪಲಯ್ಯ ಛತ್ರ ಮಂಟಪ ಮುಕ್ಕಾಲು ಭಾಗ ಮಾತ್ರ ಮುಳುಗಿದೆ.


ಭದ್ರಾ ಜಲಾಶಯದ ಒಳ ಹರಿವು ಇಳಿಕೆಯಾಗಿದೆ. ಇವತ್ತು 19,512 ಕ್ಯೂಸೆಕ್‌ ಒಳ ಹರಿವು ಇದೆ. 29,894 ಕ್ಯೂಸೆಕ್‌ ನೀರನ್ನು ಹೊರ ಬಿಡಲಾಗುತ್ತಿದೆ. ಜಲಾಶಯದ ಗರಿಷ್ಠ ನೀರಿನ ಸಂಗ್ರಹ ಮಟ್ಟ 186 ಅಡಿ. ಇಂದಿನ ನೀರಿನ ಮಟ್ಟ 180 ಅಡಿ ಇದೆ. ಪ್ರಸ್ತುತ 64.17 ಟಿಎಂಸಿ ನೀರು ಸಂಗ್ರಹವಾಗಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close