ನಿಗದಿತ ಸಮಯದಲ್ಲೇ ಪಾಲಿಕೆ ಚುನಾವಣೆ ನಡೆಬೇಕು-ಈಶ್ವರಪ್ಪ



ಸುದ್ದಿಲೈವ್/ಶಿವಮೊಗ್ಗ


ಶಿವಮೊಗ್ಗ ಸೇರಿ ಮೂರು ಪಾಲಿಕೆಗೆ ಚುನಾವಣೆ ನಡೆಸುವಂತೆ ಸುಪ್ರೀಂ ಆದೇಶವಾಗಿದ್ದು ಇದರಲ್ಲಿ ಶಿವಮೊಗ್ಗವೂ ಸೇರಿದ್ದು, ಚುನಾವಣೆ ಆಯೋಗ 8 ದಿನಗಳಲ್ಲಿ ನೋಟಿಫಿಕೇಷನ್ ಮಾಡುವುದಾಗಿ ಹೇಳಿದ್ದು ಇನ್ನೂ ತಯಾರಿಸಿಲ್ಲ ಯಾಕೆ ಎಂದು ಇನ್ನೂ  ತಿಳಿದು ಬಂದಿಲ್ಲ. ಆದರೆ ನ್ಯಾಯಾಲಕ್ಕೆ ಆಯೋಗ ತಿಳಿಸಿದಂತೆ ನಡೆದುಕೊಳ್ಳಬೇಕೆಂದು ಮಾಜಿ ಡಿಸಿಎಂ ಈಶ್ವರಪ್ಪ ಆಗ್ರಹಿಸಿದರು. 


ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೆಲವರು ವಾರ್ಡ್ ಪರಿಷ್ಕರಣೆಯ ನಂತರ ಮಾಡಿ ಎಂದು ಮನವಿ ಮಾಡಿರುವುದಾಗಿ ತಿಳಿದು ಬಂದಿದೆ. ಆದರೆ ಪಾಲಿಕೆಯಲ್ಲಿ ಚುನಾಯಿತ ಪ್ರತಿನಿಧಿಗಳ ಆಯ್ಕೆಯಾಗಬೇಕು. ರಾಷ್ಡ್ರಭಕ್ತ ಬಳಗದಿಂದ 35 ವಾರ್ಡ್ ಗಳಲ್ಲಿ ಸ್ಪರ್ಧಿಸುತ್ತೇವೆ. ಈಗಿರುವ  ವಾರ್ಡ್ ಗಳಲ್ಲಿ ಚುನಾವಣೆ ನಡೆಯಲಿದೆ ಎಂದು ಗೃಹ ಸಚಿವರು ತಿಳಿಸಿದ್ದಾರೆ. ಅದರಂತೆ ಚುನಾವಣೆ ನಡೆಯಬೇಕು ಎಂದರು. 


ರಾಷ್ಟ್ರಭಕ್ತರ ಬಳಗ ರಾಜಕೀಯ ಸಂಘಟನೆ ಎಂದು ಇನ್ನೂ ರಿಜಿಸ್ಟ್ರೇಷನ್ ಆಗಿಲ್ಲ. ಹಾಗಾಗಿ ಚುನಾವಣೆ ನಡೆದರೆ ಸ್ಪರ್ಧಿಸುವರು ಬೇರೆ ಬೇರೆ ಚಿಹ್ನೆಯಲ್ಲಿ ಸ್ಪರ್ಧಿಸಲಿದ್ದಾರೆ. ಆದರೆ ಮೊದಲು ಚುನಾವಣೆ ಘೋಷಣೆಯಾಗಬೇಕು ಎಂದು ಆಗ್ರಹಿಸಿದರು. ನಗರ ಒಂದೇ ದಿನಗಳಲ್ಲಿ ಬೆಳೆಯಿತಾ? ನವೆಂಬರ್ 2023 ರಲ್ಲಿ ಪಾಲಿಕೆ ಅವಧಿ ಮುಕ್ತಾಯವಾಗಿದೆ. 


ಇನ್ನೂ ಎಷ್ಟು ದಿನ ಬೇಕು ವಾರ್ಡ್ ವಿಂಗಡಣೆಗೆ ಸಮಯಬೇಕು?  ಚುನಾವಣೆ ಮಾಡಿ ಜೊತೆಗೆ ವಾರ್ಡ್ ಹೆಚ್ಚಿಸಬೇಕು ಎಂದು ಸಲಹೆ ನೀಡಿರುವ ಮಾಜಿ ಡಿಸಿಎಂ ಯಾರು ಜನರ ಜೊತೆ ಬೆರೆಯುತ್ತಾರೆ. ರಾಷ್ಟ್ರೀಯ ವಾದ ಇಟ್ಟುಕೊಂಡು ಬರುವವರಿಗೆ ಅವರ ಜೊತೆ ಒಟ್ಟಿಗೆ ಕೂತು ಚರ್ಚಿಸಲಾಗುವುದು. ಮುಸ್ಲೀಂ ಅಭ್ಯರ್ಥಿಗೆ ಒಬ್ವರಿಗೂ ಕೊಡಲ್ಲ ಎಂದು ಸ್ಪಷ್ಟಪಡಿಸಿದರು. 


ಮುಸ್ಲೀಂಗೆ  ಯಾಕೆ ಕೊಡಲ್ಲ ಎಂದು ಹೇಳ್ತಿದ್ದೀನಿ ಎಂದರೆ ಅವರು ರಾಷ್ಟ್ರಭಕ್ತರ ಪರ ಇಲ್ಲ. ಬಾಂಗ್ಲಾದಲ್ಲಿ ನಡೆದ ನರಮೇಧದ ಬಗ್ಗೆ ಬೇಸರ ಎನಿಸಿದೆ.  ಅಂತಹ ಸೇವಾ ಮನೋಭಾವ ಮತ್ತು ನಮ್ಮ ಸಿದ್ದಾಂತ ಒಪ್ಪಿಕೊಂಡು ಬಂದಂತಹ ಮುಸ್ಲೀಂರಿಗೆ ಟಿಕೇಟ್ ಕೊಡುವುದಾಗಿ ಹೇಳಿದರು. 


ಆಶ್ರಯ ಮನೆಗಳು ಬೇಕು ಎಂದು ಹೊರಟಾಗ ಸುಮಾರು ಜನ ಹೋರಾಟಕ್ಕೆ ಬರ್ತಾ ಇದ್ದಾರೆ. ನಿಮ್ಮ‌ ಸ್ಪರ್ಧೆ ಬಿಜೆಪಿಗೆ ಹೊಡೆತ ಬೀಳತ್ತಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಗರಂ ಆದ ಈಶ್ವರಪ್ಪ ಜಿಲ್ಲೆಯಲ್ಲಿ ಬಿಜೆಪಿ ಎಲ್ಲಿದೆ? ಶಿಕಾರಿಪುರದಲ್ಲಿ ಪುರಸಭೆಯಲ್ಲಿ ಬಿಜೆಪಿ ಇಲ್ಲ. ಡಿಸಿಸಿ ಬ್ಯಾಂಕ್ ಮತ್ತು ಶಿಮೂಲ್ ನಲ್ಲಿ ಬಿಜೆಪಿ ಇಲ್ಲವಾಗಿದೆ. 


ಈ ಹಿಂದೆ ಬಿಜೆಪಿ ಚುನಾವಣೆ ಅಭ್ಯರ್ಥಿ ಬಗ್ಗೆ  ವಿಚಾರ ಮಾಡುತ್ತಿದ್ವಿ.‌ ಇದು ಇಲ್ಲವಾಗಿದೆ. ಇದನ್ನ ಅವರು ಚಿಂತಿಸಲಿ. ನಮ್ಮ ಬಳಿ ಜನರ ಮಧ್ಯೆ ಅಂತಹ ಅಭ್ಯರ್ಥಿಗಳಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಮೋದಿ ವಿಚಾರದಲ್ಲಿ ರಾಘವೇಂದ್ರ ಸಂಸದರಾದರೂ ಅವರ ನೇತೃತ್ವದಲ್ಲಿ ನಡೆದ ಡಿಸಿಸಿ ಬ್ಯಾಂಕು ಮತ್ತು ಶಿಮೂಲ್ ಚುನಾವಣೆಯಲ್ಲಿ ಗೆದ್ದಿಲ್ಲ ಯಾಕೆ ಎಂದು ಪ್ರಶ್ನಿಸಿದರು. 


ಶಿಗ್ಗಾವಿಯಲ್ಲಿ ನಡೆಯುವ ಬೈಎಲೆಕ್ಷನ್ ನಲ್ಲಿ ಕಾಂತೇಶ ಸ್ಪರ್ಧಿಸೊಲ್ಲ. ಇಡಿ ಹಾವೇರಿಯಲ್ಲಿ ಮೋಸ ಮಾಡಿದವರು ಅನುಭವಿಸುತ್ತಾರೆ ಎಂದು ಆರೋಪಿಸಿದರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close