ಸಂಸದರಿಗೆ ಅಭಿಮಾನಿಗಳ ಸಂಘದಿಂದ ಶುಭಾಶಯಗಳು



ಸುದ್ದಿಲೈವ್/ಶಿವಮೊಗ್ಗ


ಯುವ ನೇತಾರರು, ಅಭಿವೃದ್ಧಿಯ ಹರಿಕಾರರು, ಶಿವಮೊಗ್ಗ ಲೋಕಸಭಾ ಕ್ಷೇತ್ರದ ಜನಪ್ರಿಯ ಸಂಸದರಾದ ಬಿ.ವೈ.ರಾಘಣ್ಣ ಅವರಿಗೆ ಅವರ ನಿವಾಸದಲ್ಲಿ ಇಂದು ಬಿ ವೈ.ರಾಘವೇಂದ್ರ ಅಭಿಮಾನಿಗಳ ಸಂಘದ ವತಿಯಿಂದ ಜನ್ಮ ದಿನದ ಶುಭಾಶಯಗಳನ್ನು ಕೋರಲಾಯಿತು. 


ಈ ವೇಳೆ ಮಾನ್ಯ ವಿಧಾನ ಪರಿಷತ್ ಮಾಜಿ ಸದಸ್ಯರು ಹಾಗೂ ಖ್ಯಾತ ಕೈಗಾರಿಕೋದ್ಯಮಿಗಳಾದ ಎಸ್.ರುದ್ರೇಗೌಡ್ರು, ಗ್ರಾಮಾಂತರ ಕ್ಷೇತ್ರದ ಮಾಜಿ ಶಾಸಕರಾದ ಕೆ.ಬಿ.ಅಶೋಕ್ ನಾಯ್ಕ್, ಬಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಮಾಲತೇಶ್, ಬಿಜೆಪಿ ಎಸ್ ಸಿ ಮೋರ್ಚಾ ಅಧ್ಯಕ್ಷ ಹರೀಶ್, ಯುವ ಮುಖಂಡರಾದ ರಾಜೇಶ್ ಕಾಮತ್, ವೀರಭದ್ರಪ್ಪ ಪೂಜಾರಿ, ಮೋಹನ್ ರೆಡ್ಡಿ, ಎಪಿಎಂಸಿ ಮಾಜಿ ನಿರ್ದೇಶಕರಾದ ಅರುಣ್ ಬಾಬು ಸೇರಿದಂತೆ ನೂರಾರು ಅಭಿಮಾನಿಗಳು, ಕಾರ್ಯಕರ್ತರು ಹಾಜರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close