ಕಾರು ಚಾಲನೆ ಮೂಲಕವೇ ನಿವೃತ್ತ ಅಧಿಕಾರಿಗೆ ಬೀಳ್ಕೊಡುಗೆ




ಸುದ್ದಿಲೈವ್/ಶಿವಮೊಗ್ಗ


ಜಿಲ್ಲೆಯ ಹೊಸನಗರ ತಾಲೂಕಿನ ಗ್ರಾಮಾ ಆಡಳಿತಾಧಿಕಾರಿಯೊಬ್ಬರು ನಿವೃತ್ತಿಯಾದ ಹಿನ್ನೆಲೆಯಲ್ಲಿ ಹೊಸನಗರ ತಹಶೀಲ್ದಾರ್ ರಶ್ಮಿ ಹಾಲೇಶ್ ವಿಶೇಷ ಗೌರವದೊಂದಿಗೆ ಅವರಿಗೆ ಬೀಳ್ಕೊಡಿಗೆ ಕೊಟ್ಟಿದ್ದಾರೆ. 


ಹೌದು... ತಹಶೀಲ್ದಾರ್ ರಶ್ಮಿ ಹಾಲೇಶ್ ರವರು ಸೇವೆಯಿಂದ ನಿವೃತ್ತಿಯಾದ ಗ್ರಾಮಾಡಳಿತ ಅಧಿಕಾರಿ ಸದಾಶಿವ ಅವರನ್ನ ವಾಹನದಲ್ಲಿ ಕೂರಿಸಿಕೊಂಡು ವಾಹನ ಚಲಾಯಿಸಿಕೊಂಡು ಹೋಗಿ ಮನೆಗೆ ಡ್ರಾಪ್‌ ಮಾಡುವ ಮೂಲಕ ಹೃದಯಸ್ಪರ್ಶಿ  ಬೀಳ್ಕೊಡಿಗೆ ನೀಡಿದ್ದಾರೆ.


ಹೊಸನಗರ ತಾಲೂಕ್ ಕಂದಾಯ ಇಲಾಖೆಯಲ್ಲಿ ಸುಮಾರು ವರ್ಷಗಳಿಂದ ಕರ್ತವ್ಯ ನಿರ್ವಹಿಸಿದ ಸದಾಶಿವ ಅವರು ಶನಿವಾರದಂದು (ಆ.31) ವಯೋನಿವೃತ್ತಿ ಹೊಂದಿದ ಪ್ರಯುಕ್ತ ಹೊಸನಗರ ಕಂದಾಯ ಇಲಾಖೆಯ ವತಿಯಿಂದ ಬೀಳ್ಕೊಡಲಾಯಿತು.


ಸದಾಶಿವ ರವರ ವಯೋನಿವೃತ್ತಿ ಪ್ರಯುಕ್ತ ತಾಲೂಕ್ ಕಛೇರಿಯಲ್ಲಿ ಬೀಳ್ಕೊಡುಗೆ ಕಾರ್ಯಕ್ರಮ ನಡೆಸಿ ನಂತರದಲ್ಲಿ ತಹಶೀಲ್ದಾರ್ ರಶ್ಮಿ ಹಾಲೇಶ್ ರವರು ಸ್ವತಃ ತಾವೇ ಸರ್ಕಾರಿ ವಾಹನದಲ್ಲಿ ಸದಾಶಿವ ಅವರನ್ನು ಮನೆಗೆ ತಲುಪಿಸಿ ಅವರಿಗೆ ವಿಶೇಷವಾಗಿ ಬೀಳ್ಕೊಟ್ಟರು.


ಉನ್ನತ ಅಧಿಕಾರಿ ಎನ್ನುವ ಅಹಂ ಇಲ್ಲದೇ ತಹಶೀಲ್ದಾರ್ ರಶ್ಮಿ ಹಾಲೇಶ್ ತಮ್ಮ ಸಿಬ್ಬಂದಿಯನ್ನು ಬೀಳ್ಕೊಟ್ಟ ಕಾರ್ಯ ಸಾರ್ವಜನಿಕರ ಪ್ರಶಂಸೆಗೆ ಕಾರಣವಾಯ್ತು.....

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close