ಸುದ್ದಿಲೈವ್/ಶಿವಮೊಗ್ಗ
ಮಲವಗೊಪ್ಪದ ರೈಲ್ವೆ ಹಳಿಯಲ್ಲಿ ಓರ್ವನ ಶವ ಪತ್ತೆಯಾಗಿದ್ದು ಇದು ಹೋಮ್ ಗಾರ್ಡ್ ಡ್ಯೂಟಿ ಮಾಡುವ ಮಂಜುನಾಥ್ ಎಂದು ಗುರುತಿಸಲಾಗಿದೆ.
ರೈಲಿಗೆ ಸಿಲುಕಿ ವ್ಯಕ್ತಿ ಸಾವುಕಂಡಿದ್ದು ಆತನ ಎಡಗೈವೊಂದು ತುಂಡಾಗಿದೆ. ಇದೊಂದು ಆತ್ಮಹತ್ಯೆ ಇರಬಹುದು ಎಂದು ಶಂಕಿಸಲಾಗಿದೆ. ಮೃತನ ಶವವನ್ನ ಮೆಗ್ಗಾನ್ ಮರಣೋತ್ತರ ಪರೀಕ್ಷೆಗೆ ಸಾಗಿಸಲಾಗಿದೆ. ಶಿವಮೊಗ್ಗ ರೈಲ್ವೆ ಇಲಾಖೆಯಲ್ಲಿ ಪ್ರಕರಣ ದಾಖಲಾಗಿದೆ.