ಸುದ್ದಿಲೈವ್/ಶಿವಮೊಗ್ಗ
ವಾಲ್ಮೀಕಿ ನಿಗಮದ ಅಧಿಕಾರಿ ಚಂದ್ರಶೇಖರ್ ಅವರ ಆತ್ಮಹತ್ಯೆ ಪ್ರಕರಣವವನ್ನ ಹೆಚ್ಚು ತನಿಖೆ ನಡೆಸಬೇಕು ಎಂದು ಅವರ ಪತ್ನಿ ಕವಿತ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ತನಿಖೆ ಸರಿಯಾಗಿ ನಡೆಸದಿದ್ದರೆ ಹೈಕೋರ್ಟ್ ಮೊರೆ ಹೋಗ್ತೀವಿ. ಸಿಬಿಐ ತನಿಖೆ ಆಗಬೇಕು ಅಂತಾ ಆಗ್ರಹಿಸುತ್ತೇನೆ. ಚಂದ್ರಶೇಖರ್ ಹಣ ತಿಂದಿಲ್ಲ. ಹಣ ತಿಂದಿದ್ದಾರೆ ಏಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರು. ನಾನು ಜೀವನ ನಡೆಸಲು ಪರದಾಡ್ತಿದ್ದೇವೆ.ನಮ್ಮ ತಾಯಿ ಮನೆಯಲ್ಲಿ ವಾಸ ಮಾಡ್ತಿದ್ದೇವೆ ಎಂದು ಹೇಳಿದರು.
ಸರಕಾರದಿಂದ ಪರಿಹಾರ ಕೊಡ್ತೀವಿ ಅಂದ್ರು ಇದುವರೆಗೆ ಯಾವುದೇ ಪರಿಹಾರ ಬಂದಿಲ್ಲ.ತನಿಖೆ ನಡೆಸಲಿ, ನಮ್ಮ ಮನೆಯವರು ಹಣ ತಿಂದಿದ್ದಾರೋ ಇಲ್ವಾ ಹೊರಗೆ ಬರಲಿ. ಸರಕಾರ ಸರಿಯಾಗಿ ತನಿಖೆ ನಡೆಸಿಲ್ಲ. ನ್ಯಾಯಯುತವಾಗಿ ತನಿಖೆ ನಡೆಸಲಿ. ಕೇಸ್ ಕೊಟ್ಟವರು ನಾವೇ ನಮ್ಮ ಮನೆಯವರ ಮೇಲೆ ಆರೋಪ ಹೊರಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರಕಾರ ಯಾವುದೇ ಪರಿಹಾರ ಕೊಟ್ಟಿಲ್ಲ. ಅವತ್ತು ಎಲ್ಲಾ ಮಾತನಾಡಿಸಿಕೊಂಡರು ಹೋದ್ರು, ಇದುವರೆಗೆ ಯಾರು ನಮ್ಮ ಮನೆ ಕಡೆ ಬಂದಿಲ್ಲ ಎಂದು ಸ್ಪಷ್ಟೀಕರಣ ನೀಡಿದರು.