ಸುದ್ದಿಲೈವ್/ಶಿಕಾರಿಪುರ
ಶೇಂಗ ಸಿಪ್ಪೆ ಬಿಸಾಕಿದ ವಿಚಾರದಲ್ಲಿ ಇಬ್ವರ ನಡುವೆ ಗಲಾಟೆಯಾಗಿದ್ದು ಓರ್ವನ ಮೇಲೆ ಪ್ಲಾಸ್ಟಿಕ್ ಕುರ್ಚಿ ಬಿಸಾಕಿ ಹಲ್ಲೆ ಮಾಡಲಾಗಿದ್ದು ತಲೆಗೆ ಪೆಟ್ಟು ಬಿದ್ದಿರುವ ಘಟನೆ ಶಿರಾಳಕೊಪ್ಪದಲ್ಲಿ ನಡೆದಿದೆ.
ಶಿರಾಳಕೊಪ್ಪದ ಜಯದೇವ ಟ್ರೇಡರ್ಸ್ ಪಕ್ಕದ ಹೋಟೆಲ್ ಮುಂದೆ ಶೇಂಗ ತಿನ್ನುತ್ತಿದ್ದ ವ್ಯಕ್ತಿಯು ಸಿಪ್ಪೆಯನ್ನ ಹೋಟೆಲ್ ನ ಬಾಗಿಲಿಗೆ ಹಾಕುತ್ತಿದ್ದನ್ನ ಕಂಡ ಕೆ. ಸಂಜಯ್ ಬಿನ್ ಕೆ ಬಾಬು(38) ವರ್ಷ ಸಿಪ್ಪೆ ಹಾಕಬೇಡ ಎಂದು ಹೇಳಿದ್ದಾರೆ.
ಇದರಿಂದ ಕೋಪಗೊಂಡ ವ್ಯಕ್ತಿ ಸಂಜಯ್ ವಿರುದ್ಧ ಕೋಪಗೊಂಡು ಪ್ಲಾಸ್ಟಿಕ್ ಚೇರ್ ನಿಂದ ಹಲ್ಲೆ ನಡೆಸಿದ್ದಾನೆ. ಇದರಿಂದ ಗಾಯಗೊಂಡ ಸಂಜೀಯ್ ತಲೆಗೆ ತೀವ್ರ ಗಾಯಗಳಾಗಿವೆ.
ಆತನನ್ನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಶಿರಾಳಕೊಪ್ಪದಲ್ಲಿ 307 ಪ್ರಕರಣ ದಾಖಲಾಗಿದೆ.