ಸೋಮವಾರ, ಆಗಸ್ಟ್ 12, 2024

ಗಾಜನೂರು ಜಲಾಶಯಕ್ಕೆ ಕೆಎನ್ ಎನ್ ಅಧಿಕಾರಿಗೂ ಭೇಟಿ ಪರಿಶೀಲನೆ



ಸುದ್ದಿಲೈವ್/ಶಿವಮೊಗ್ಗ


ಶಿವಮೊಗ್ಗದ ಗಾಜನೂರಿನಲ್ಲಿರುವ ಜಲಾಶಯದ ಗೇಟ್ ಹಾಳಾಗಿರುವ ಬಗ್ಗೆ ಈಗಾಗಲೇ ಮಾಧ್ಯಮಗಳಲ್ಲಿ ಪ್ರಚಾರವಾಗಿದ್ದು ಇದರ ಬೆನ್ನಲ್ಲೇ ಕರ್ನಾಟಕದ ನೀರಾವರಿ ನಿಗಮದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. 


ಜಲಾಶಯದ 8 ನೇ ರೇಡಿಯಲ್ ಕ್ರಸ್ಟ್ ಗೇಟ್ ನ ರೋಪ್ ಹಾಳಾಗಿದ್ದು ಇದರಿಂದ ಈ ಬಾರಿ ಈ ಗೇಟನ್ನ ಮೇಲಕ್ಕೆ ಎತ್ತಿ ನೀರು ಹರಿಸಿಲ್ಲ. ಇದು ಮಾಧ್ಯಮಗಳಲ್ಲಿ ಪ್ರಚಾರ ಪಡೆದುಕೊಂಡಿತ್ತು. 


ಅಲ್ಲದೆ ತುಂಗಭದ್ರ ಜಲಾಶಯದಲ್ಲಿ ಕ್ರಸ್ಟ್ ಗೇಟು ಹಾನಿಗೊಳಗಾದ ಬೆನ್ನಲ್ಲೇ ನಿಗಮದ ಅಧಿಕಾರಿಗಳು ಭೇಟಿ ಮಹತ್ವ ಪಡೆದುಕೊಂಡಿದೆ. 2009 ರಲ್ಲಿ ಆರಂಭವಾಗಿರುವ‌ ಜಲಾಶಯಕ್ಕೆ ಇನ್ನೂ 15 ವರ್ಷ ಪ್ರಾಯ. ಆದರೆ ಜಲಾಶಯದ ಸಣ್ಣಪುಟ್ಟ ಸಮಸ್ಯೆಗಳು ಮಾಮೂಲಿಯಾಗಿದೆ. 


ಈ ಬಾರಿ ಜಲಾಶಯಕ್ಕೆ ಭರ್ಜರಿ ನೀರು ಹರಿದು ಬಂದಿತ್ತು. 85 ಸಾವಿರ ಕ್ಯೂಸೆಕ್ ನೀರು ಹರಿದು ಬಂದಿತ್ತು. ರೋಪ್ ವೇ ಮೂಲಕ ಗೇಟ್ ತೆಗೆದರೆ ಕಟ್ ಆಗುವ ಸಾಧ್ಯತೆಯಿದ್ದಿದ್ದರಿಂದ ಗೇಟ್ ಒಪನ್ ಮಾಡಿರಲಿಲ್ಲ. 


ಈ ಕಾರಣದಿಂದ ಒಟ್ಟು 22 ಗೇಟ್ ಗಳಲ್ಲಿ ಈ ಬಾರಿ 21 ಗೇಟ್ ಮಾತ್ರ ಒಪನ್ ಆಗಿತ್ತು. ಈಗಲೂ ಜಲಾಶಯಕ್ಕೆ 10 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ. 2,6,9,10 ನಾಲ್ಕು ಗೇಟನ್ನ ಮೇಲಕ್ಕೆತ್ತಿ ಜಲಾಶಯದಿಂದ ನದಿಗೆ ನೀರು ಹರಿಸಲಾಗುತ್ತಿದೆ. ಒಳಹರಿವು ಕಡಿಮೆಯಾದ ನಂತರ ನಿಗದಿತ ಗೇಟನ್ನ ಸರಿಪಡಿಸಲಾಗುತ್ತದೆ. 


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ