ಶನಿವಾರ, ಆಗಸ್ಟ್ 17, 2024

ಸತ್ಯನಾರಾಯಣ ರಾಜು ಯಾನೆ ಮೊಟ್ಟೆ ಸತೀಶ್ ಸುದ್ದಿಗೋಷ್ಠಿ



ಸುದ್ದಿಲೈವ್/ಶಿವಮೊಗ್ಗ


ಜಮೀನು ವಿಚಾರದಲ್ಲಿ ಕಾರು ಜಖಂಗೊಳಿಸಿ ಸತ್ಯನಾರಾಯಣ ರಾಜು ಅಲಿಯಾಸ್ ಮೊಟ್ಟೆ ಸತೀಶ್ ಮೇಲೆ ಹಲ್ಲೆ ನಡೆದಿದೆ. ಹಲ್ಲೆಯ ಹಿನ್ನಲೆಯಲ್ಲಿ ನಿನ್ನೆ ಆಸ್ಪತ್ರೆಗೆ ದಾಖಲಾಗಿದ್ದರು. ಇಂದು ಸುದ್ದಿಗೋಷ್ಠಿ ನಡೆಸಿ ಹಲ್ಲೆಯಬಗ್ಗೆ ವಿವರಣೆ  ನೀಡಿದರು. 


 ಆ.15 ರಂದು ರಾತ್ರಿ 12-30 ರಿಂದ 1-00 ಘಂಟೆ ಸಮಯದಲ್ಲಿ ಮನೆಗೆ ತಲುಪುವ ಸಂದರ್ಭದಲ್ಲಿ ರಾಮ್‌ ಬಾಬು, ನಾಗರಾಜ್ ನಾಯ್ಕ ಮತ್ತು ಕೆಲವರು ಸೇರಿಕೊಂಡು ದೊಣ್ಣೆಗಳಿಂದ ಕಾರ್ ನ ಮೇಲೆ ಹಾಗೂ ನನ್ನ ಮೇಲೆ  ದಾಳಿ ನಡೆಸಿದ್ದು, ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ. ಜಮೀನು ವಿಷಯಕ್ಕೆ ಬಂದರೆ, ನಮ್ಮ ಮೇಲೆ ಪೋಲಿಸ್ ಠಾಣೆ ಗಳಲ್ಲಿ ದೂರು ನೀಡಿದರೆ, ನಿನ್ನ ಹಾಗೂ ನಿನ್ನ ಕುಟುಂಬವನ್ನು ಜೀವಂತವಾಗಿ ಬಿಡುವುದಿಲ್ಲ ! ಎಂದು ಬೆದರಿಸಿರುವುದಾಗಿ ಆರೋಪಿಸಿದರು. 


ತಕ್ಷಣ ಸತೀಶ್‌ ಅವರು ತಮ್ಮ ಕಾರನ್ನು ಬಳಸಿಕೊಂಡು ಅಲ್ಲಿಂದ ಪರಾರಿಯಾಗಿ, ಮೆಗ್ಗಾನ್ ಆಸ್ಪತ್ರೆಗೆ ಬಂದು ಪ್ರಥಮ ಚಿಕಿತ್ಸೆ ಪಡೆದು. ತುಂಗಾ ನಗರ ಪೋಲಿಸ್ ಠಾಣೆ ಗೆ ಮಾಹಿತಿ ನೀಡಿದ್ದಾರೆ. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಿ, ನನ್ನ ಹಾಗೂ ನನ್ನ ಕುಟುಂಬಕ್ಕೆ ರಕ್ಷಣೆ ನೀಡಿ ಎಂದು ಮನವಿ ಮಾಡಿಕೊಂಡಿದ್ದಾರೆ.


ಆರ ಎಸ್ ಸತ್ಯನಾರಾಯಣ್ ರಾಜ್ ಮಾಜಿ ರೌಡಿ ಶೀಟರ್, ಒಂದು ಪತ್ರಿಕೆಯ ಸಂಪಾದಕ, ಗ್ರಾಮ ಪಂಚಾಯತಿ ಸೇರಿ, ಪಾಲಿಕೆಯ ಚುನಾವಣೆಗಳಲ್ಲಿ ಸ್ಪರ್ಧಿಸಿ, ಪಾಲಿಕೆಯ ಸದಸ್ಯನಾಗಿರುತ್ತಾರೆ. ಹಲ್ಲೆಗೆ ಮುಖ್ಯ ಕಾರಣ ಇವರ ಅಜ್ಜ 1962ರಲ್ಲಿ ಶುಗರ್ ಫ್ಯಾಕ್ಟರಿ ಜಮೀನು ಖರೀದಿಸಿರುತ್ತಾರೆ. 


ನ್ಯಾಯಾಲಯದ ಆದೇಶ ಮತ್ತು ಪಣಿಯಲ್ಲಿ ಇವರ ಹೆಸರು ಈಗಲೂ ಚಾಲ್ತಿಯಲ್ಲಿದೆ. ವಾಮ ಮಾರ್ಗದಿಂದ ಇವರ ದೂರದ ಸಂಬಂಧಿ ಆ ಜಮೀನನ್ನು ಯಾವುದೇ ದಾಖಲೆ ಇಲ್ಲದೆ ಬೇರೆಯರಿಗೆ ಉಳಿಮೆ ಮಾಡಲು ನೀಡಿರುತ್ತಾರೆ. 


ಇದರ ವಿರುದ್ಧ ಧ್ವನಿ ಎತ್ತಿ ನ್ಯಾಯಕ್ಕಾಗಿ ಕಾನೂನು ರೀತಿಯ ಹೋರಾಟ ಮಾಡಲು ಮುಂದಾದಾಗ ಈ ಸಮಸ್ಯೆಗಳು ಕಿರುಕುಳ ನೀಡುವುದು. ಸುಳ್ಳು ದೂರು ನೀಡಿ ಮಾನಹಾನಿ ಮಾಡುವುದು ಮಾಡುತ್ತಿದ್ದು ಪ್ರಸ್ತುತ ನ್ಯಾಯಾಲಯದಲ್ಲಿ ನಮ್ಮ ಪರವಾಗಿ ಇಂಜೆಕ್ಷನ್ ಆರ್ಡರ್ ಸಿಕ್ಕಿರುತ್ತದೆ ಎಂದು ವಿವರಿಸಿದರು.


ದಿನಾಂಕ 08-08-2024 ರಂದು ಮಾನ್ಯ ಜಿಲ್ಲಾಧಿಕಾರಿಗಳಿಗೆ  ದೂರು ನೀಡಿ ಸೂಕ್ತ ರಕ್ಷಣೆ ಕೋರಿರುತ್ತಾರೆ. ಮಾಜಿ ರೌಡಿ ಎಂಬ ಕಾರಣಕ್ಕೆ ನನ್ನ ಮೇಲೆ ಸುಳ್ಳು ಆರೋಪಗಳನ್ನು ನಿರಂತವಾಗಿ ಮಾಡುತ್ತಿದ್ದರೆಂದು ತಮ್ಮ ಮಾನಸಿಕ ಹಿಂಸೆಗಳ ಬಗ್ಗೆ ಹೇಳಿಕೊಂಡಿರುತ್ತಾರೆ. ಸ್ವತಂತ್ರ ದಿನಾಚರಣೆಯ ದಿನ ರಾಮ್ ಬಾಬು ಮತ್ತು 30ಕ್ಕೂ ಹೆಚ್ಚು ಜನ ಜಮೀನಿಗೆ ಬಂದು ಕೆಲಸಕ್ಕೆ ಅಡ್ಡಿಪಡಿಸಿರುತ್ತಾರೆ. 


ಇದರ ವಿಷಯವಾಗಿ ತುಂಗನಗರ ಠಾಣೆಯಲ್ಲಿ ದೂರು ಸಹ ದಾಖಲಾಗಿರುತ್ತದೆ. ಅದೇ ದಿನ ರಾತ್ರಿ 12:30 ರಿಂದ ಒಂದು ಗಂಟೆ ಸುಮಾರಿಗೆ ಕೊಲೆ ಯತ್ನ ನಡೆದಿರುತ್ತದೆ. ತಕ್ಷಣ ನನ್ನ ಕುಟುಂಬಕ್ಕೆ ಇಲಾಖೆಯವರು ಸೂಕ್ತ ರಕ್ಷಣೆ ನೀಡಬೇಕಾಗಿ ಮನವಿ ನೀಡಿದರು. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ