ಹೊಸನಗರ ಕೋರ್ಟ್ ಎಫ್ ಡಿ ಎ ನಾಪತ್ತೆ



ಸುದ್ದಿಲೈವ್/ಶಿವಮೊಗ್ಗ


ಹೊಸನಗರದ ಕೋರ್ಟ್ ನಲ್ಲಿ ಎಫ್ ಡಿಎ ಆಗಿದ್ದ ಶಶಿಧರ್ ಎಂಬುವರು ನಾಪತ್ತೆಯಾಗಿರುವ ಬಗ್ಗೆ ಪತ್ನಿಯೇ ಎಫ್ಐಆರ್ ದಾಖಲಿಸಿದ್ದಾರೆ. 


ಹೊಸನಗರ ನ್ಯಾಯಾಲಯದಲ್ಲಿ ಎಫ್ ಡಿ ಎ ಆಗಿದ್ದ ಶಶಿಧರ್ ಆ.19 ರಂದು ಕೆಲಸಕ್ಕೆ ಹೋಗುವುದಾಗಿ ಹೇಳಿ ಕಾಣೆಯಾಗಿದ್ದಾರೆ. ಅನೇಕ ಬಾರಿ ಕರೆ ಮಾಡಿದರೂ ಕರೆ ಸ್ವೀಕರಿಸಿಲಿಲ್ಲ. ಸ್ವಲ್ಪ ಹೊತ್ತಾದ ನಂತರ ಬೇರೆ ನಂಬರ್ ನಿಂದ ಕರೆ ಮಾಡಿ ಆಧಾರ್ ಕಾರ್ಡ್ ಮತ್ತು ಫೊಟೊ ಹಾಕುವಂತೆ ಪತ್ನಿಗೆ ತಿಳಿಸಿದ್ದಾರೆ. 


ಫೊಟೊ ಮತ್ತು ಆದಾರ್ ಕಾರ್ಡ್ ಕಳುಹಿಸುತ್ತಿದ್ದಂತೆ ಮತ್ತೆ ಎರಡೂ ನಂಬರ್ ಗಳು ಸ್ವಿಚ್ ಆಫ್ ಆಗಿದೆ. ಪತ್ನಿ ಸರ್ಕಾರಿ ಶಾಲೆ ಶಿಕ್ಷಿಕಿಯಾಗಿದ್ದರೆ ಶಶಿಧರ್ ಶಿವಮೊಗ್ಗದ ವೀರಣ್ಣ ಲೇಔಟ್ ನಲ್ಲಿ ವಾಸವಾಗಿದ್ದರು. 


ಅವರ ಈ ರೀತಿಯ ನಾಪತ್ತೆ ಕುಟುಂಬಸ್ಥರಲ್ಲಿ ಆತಂಕ ಮೂಡಿಸಿದೆ. ಪತ್ನಿ ವಿನೋಬ ನಗರ ಪೊಲೀಸ್ ಠಾಣೆಯಲ್ಲಿ ಮನುಷ್ಯ ಕಾಣೆ ದೂರು ನೀಡಿದ್ದಾರೆ.‌

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close