Girl in a jacket

ಶವಸಂಸ್ಕಾರದ ವೇಳೆ ಕಿರಿಕ್-ದೂರಿನ ಆಧಾರದ ಮೇರೆಗೆ ಕ್ರಮ-ಎಸ್ಪಿ ಸ್ಪಷ್ಟನೆ



ಸುದ್ದಿಲೈವ್/ಶಿವಮೊಗ್ಗ


ಶವ ಸಂಸ್ಕಾರಕ್ಕೆ ವಿಧಿ ವಿಧಾನ ಮಾಡಲು ಗಂಗೆ ಪೂಜೆಗೆ ನೀರು ತರುತ್ತಿದ್ದ ಮಹಿಳೆಯರ ಮೇಲೆ ಹಲ್ಲೆ ನಡೆದಿರುವುದಾಗಿ ವಿಡಿಯೋವೊಂದು ವೈರಲ್ ಆಗಿದೆ. 


ತುಂಗಾ ನದಿಯಿಂದ ‌ನೀರು ತರುತ್ತಿದ್ದ ‌ಮಹಿಳೆಯರು ತಮಟೆ ಬಾರಿಸುತ್ತಾ ತುಂಗಾ ನೀರು ತರುತ್ತಿದ್ದ ವೇಳೆ ತಮಟೆ ಶಬ್ದ ಕೇಳಿ ಇಲ್ಲಿ ತಮಟೆ ಬಾರಿಸಬೇಡಿ ಎಂದು ಕೆಲ ಮುಸ್ಲಿಂ ಯುವಕರು ಆಕ್ಷೇಪಿಸಿ ಹಲ್ಲೆ ನಡೆಸಿರುವುದಾಗಿ ಆರೋಪಿಸಲಾಗಿದೆ.


ನೀರು ತರುತ್ತಿದ್ದ ಮಹಿಳೆಯರನ್ನ‌ ಎಳೆದಾಡಿದ ಆರೋಪವನ್ನ ಮಾಡಲಾಗಿದೆ. ಶಿವಮೊಗ್ಗದ ಟಿಪ್ಪು ನಗರದಲ್ಲಿ ನಗರದಲ್ಲಿ ನಿನ್ನೆ ರಾತ್ರಿ  ಘಟನೆ ನಡೆದಿದೆ. ಹಿಂದುಗಳಿಗೆ ರಕ್ಷಣೆ ಇಲ್ಲ ಕಠಿಣ ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಲಾಗಿದೆ. ತುಂಗಾನಗರ ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆ ನಡೆದಿದೆ. 


ಈ ಕುರಿತು ಪ್ರತಿಕ್ರಿಯೆ ನೀಡಿರುವ ಎಸ್ಪಿ ಮಿಥುನ್ ಕುಮಾರ್, ಘಟನೆ ನಡೆದ ಕೂಡಲೇ ತುಂಗನಗರ ಪಿಐ ಮತ್ತು ಪಿಎಸ್ಐ ಅವರು ಸ್ಥಳಕ್ಕೆ ಧಾವಿಸಿದ್ದಾರೆ. ದೂರುದಾರರು ಈಗ ಠಾಣೆಗೆ ಬಂದು ದೂರು ನೀಡಿತ್ತಿದ್ದಾರೆ. ದೂರುದಾರರು ನೀಡಿದ ದೂರಿನ ಆಧಾರದ ಮೇರೆಗೆ ಕಾನೂನು ಕ್ರಮ ಜರುಗಿಸಲಾಗುವುದಾಗಿ ತಿಳಿಸಿದ್ದಾರೆ.


ಸರೋಜಮ್ಮ ಎಂಬ 65 ವರ್ಷದ ವೃದ್ದೆ ನಿನ್ನೆ ಅಸುನೀಗಿದ್ದು ಶವಸಂಸ್ಕಾರಕ್ಕೆ ಟಿಪ್ಪುನಗರದ ತುಂಗ ಚಾನೆಲ್ ನಿಂದ ನೀರು ತಂದು ಅಂತ್ಯ ಸಂಸ್ಕಾರದ ವಿಧಿ ವಿಧಾನ ನಡೆಸುವ ವೇಳೆ ಈ ಘಟನೆ ನಡೆದಿದೆ ಎನ್ನಲಾಗಿದೆ.

ಇದನ್ನೂ ಓದಿ-https://www.suddilive.in/2024/08/blog-post_22.html

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close