ಶುಕ್ರವಾರ, ಆಗಸ್ಟ್ 16, 2024

ಮುಸ್ಲೀಂ ಹಾಸ್ಟೆಲ್ ನಲ್ಲಿ ಮುಂದುವರೆದ ಕಾಂಗ್ರೆಸ್ ಮೈನಾರಿಟಿ ಘಟಕದ ನಾಯಕರ ಸಭೆ

 


.
ಸುದ್ದಿಲೈವ್/ಶಿವಮೊಗ್ಗ


ಸಚಿವ ಮಧು ಬಂಗಾರಪ್ಪನವರ ಜೊತೆ ಕಾಂಗ್ರೆಸ್ ಪಕ್ಷದ ಮೈನಾರಿಟಿ ಘಟಕದ ನಾಯಕರ ಮಾತುಕತೆ ಮುರಿದು ಬಿದ್ದ ಬೆನ್ನಲ್ಲೇ ಮೈನಾರಿಟಿ ನಾಯಕರೆಲ್ಲಾ ಸೇರಿ ಮುಸ್ಲೀಂ ಹಾಸ್ಟೆಲ್ ನಲ್ಲಿ ಸಭೆ ನಡೆಸಿದ್ದಾರೆ.


ತಡರಾತ್ರಿಯ ವರೆಗೆ ಸಭೆ ನಡೆಸಿರುವ ನಾಯಕರು ಸಮಿತಿ ರಚಿಸಿಕೊಂಡು ರಾಜ್ಯ ಕಾಂಗ್ರೆಸ್ ನಾಯಕರು ತಪ್ಪಿದ್ದಲ್ಲಿ ರಾಷ್ಟ್ರ ನಾಯಕರ ಬಳಿ ತೆರಳಲು ತೀರ್ಮಾನಿಸಿದ್ದಾರೆ. ಇದರಿಂದ ಮೈನಾರಿಟಿ ನಾಯಕರ ಹೋರಾಟ ತೀವ್ರಗೊಳಿಸುವ ನಿರ್ಧಾರಕ್ಕೆ ಬಂದಿದ್ದಾರೆ.



ಸಾಧ್ಯವಾದರೆ ಸಚಿವ ಮಧು ಬಂಗಾರಪ್ಪನವರ ಸ್ಥಾನವನ್ನೇ ಬದಲಾಯಿಸಲು ಸಭೆ ತೀರ್ಮಾನಿಸಿದೆ. ಈ ಮೊದಲು ಅಲ್ಪ ಸಂಖ್ಯಾತರ ನಾಯಕರು ಜಿಲ್ಲಾ ಕಾಂಗ್ರೆಸ್ ನ್ನ ಎಚ್ಚರಿಸುವ ಪ್ರಯತ್ನಕ್ಕೆ ಮುಂದಾಗಿ ಸುದ್ದಿಗೋಷ್ಠಿ ನಡೆಸಿ ಸೂಡ ಅಧ್ಯಕ್ಷ ಸ್ಥಾನ ಸೇರಿದಂತೆ ಹಲವು ಬೇಡಿಕೆ ಈಡೇರಿಸುವಂತೆ  ಒತ್ತಾಯಿಸಿದ್ದರು‌.


ಇದಾದ ಮೇಲೆ ಹಲವು ಬಾರಿ ರಾಜ್ಯ ನಾಯಕರಿಗೆ ಸಚಿವರಿಗೆ ಮನವರಿಕೆ ಮಾಡಲು ನಾಯಕರು ಪ್ರಯತ್ನಿಸಿದ್ದರು. ಆದರೂ ಯಾವುದೇ ಪ್ರಯೋಜನವಾಗದ ಬೆನ್ನಲ್ಲೇ ಇಂದು ಐಬಿಯಲ್ಲಿ ಸಭೆ ಸೇರಿಸಿ ಸಚಿವರ ಮಧು ಬಂಗಾರಪ್ಪನವರ ಮುಂದೆ ತಮ್ಮ‌ಬೇಡಿಕೆ ಇಟ್ಟಿದ್ದರು.


ಸಚಿವರು ಮತ್ತು ಮೈನಾರಿಟಿ ನಾಯಕರ ನಡುವೆ ಮಾತುಕತೆ ಮುರಿದುಬಿದ್ದ ಬೆನ್ನಲ್ಲೇ ನಾಯಕರೆಲ್ಲಾ ಹಾಸ್ಟೆಲ್ ನಲ್ಲಿ ಸಭೆ ಸೇರಿ ತಡರಾತ್ರಿಯ ವರೆಗೂ ಸಭೆ ನಡೆಸಿದ್ದಾರೆ. ಸಚಿವರನ್ನ ಬಿಟ್ಟು ಮುಂದುವರೆಯಲು ನಾಯಕರು ತೀರ್ಮಾನಿಸಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ