ಸಿಐಡಿಯಿಂದ ಚಾರ್ಜ್ ಶೀಟ್ ಸಲ್ಲಿಕೆ




ಸುದ್ದಿಲೈವ್/ಶಿವಮೊಗ್ಗ


ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧೀಕ್ಷಕ ಚಂದ್ರಶೇಖರನ್ ಆತ್ಮಹತ್ಯೆ ಪ್ರಕರಣ ಹಿನ್ನೆಲೆ, ಸಿಐಡಿ ತಂಡದಿಂದ ಚಾರ್ಜ್ ಶೀಟ್ ಸಲ್ಲಿಸಿದೆ. ಸಿಐಡಿ ಡಿವೈಎಸ್ಪಿ ರಫೀಕ್ ರಿಂದ ಪ್ರಿಲಿಮ್ನರ ಜಾರ್ಜ್ ಶೀಟ್ ಸಲ್ಲಿಸಿದೆ.


ಶಿವಮೊಗ್ಗ ಎರಡನೇ ಅಡಿಷನಲ್  ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದೆ. 232 ಪುಟದ ಚಾರ್ಜ್ ಶೀಟ್ ಸಲ್ಲಿಸಿದೆ.ಚಂದ್ರಶೇಖರ ಬರೆದಿದ್ದ ಡೆತ್ ನೋಟ್ ಆಧರಿಸಿ ತನಿಖೆ ನಡೆಸಿದ್ದ ಸಿಐಡಿ ಮೂರು ಪ್ರತಿಯಲ್ಲಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದೆ.



ಚಂದ್ರಶೇಖರನ್ ಆತ್ಮಹತ್ಯೆಗೆ ನಿಗಮದ ವ್ಯವಸ್ಥಾಪಕ ಪದ್ಮನಾಭ, ಮುಖ್ಯ ಲೆಕ್ಕಾಧಿಕಾರಿ ದುರ್ಗಣ್ಣನವರ ಪ್ರೇರಣೆ ಕಾರಣ ಎಂಬುದು ಮೇಲ್ನೋಟಕ್ಕೆ ಸಾಬೀತಾಗಿದೆ. ಶಿವಮೊಗ್ಗದ ವಿನೋಬ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.


ಶಿವಮೊಗ್ಗದ ವೀರಣ್ಣ ಬಡಾವಣೆಯ ನಿವಾಸದಲ್ಲಿ ಮೇ 26ರಂದು ಚಂದ್ರಶೇಖರನ್ ಆತ್ಮಹತ್ಯೆ ಮಾಡಿಕೊಂಡಿದ್ದರು. ರಾಜ್ಯದಾದ್ಯಂತ  ಚಂದ್ರಶೇಖರನ ಆತ್ಮಹತ್ಯೆ ಪ್ರಕರಣ ಸಂಚನಮೂಡಿಸಿತ್ತು. ಘಟನೆ ಹಿನ್ನೆಲೆಯಲ್ಲಿ  ರಾಜ್ಯ ಸರ್ಕಾರ ಸಿಐಡಿ ತಂಡ ರಚಿಸಿತ್ತು. ಇದಾದ ನಂತರ ವಿನೋಬನಗರ ಠಾಣೆಯಿಂದ ಸಿಐಡಿಗೆ  ಕೇಸ್ ವರ್ಗವಾಗಿತ್ತು.


ಚಂದ್ರಶೇಖರ ಅವರ ನಿವಾಸಕ್ಕೆ ಆಗಮಿಸಿ ಮಾಹಿತಿಯನ್ನ ಸಿಐಡಿ ತಂಡ ಸಂಗ್ರಹಿಸಿತ್ತು.  ಸಿಐಡಿ ಡಿವೈಎಸ್ಪಿ ರಫೀಕ್ ನೇತೃತ್ವದ ತಂಡ ಸಂಪೂರ್ಣ ಮಾಹಿತಿ ಪಡೆದಿತ್ತು.ಘಟನೆ ಕುರಿತು ವಿಸ್ತೃತ ತನಿಖೆಗೆ  ಮೃತ ಚಂದ್ರಶೇಖರನ್ ಕುಟುಂಬಸ್ಥರು ಆಗ್ರಹಿಸಿದ್ದರು.ಆತ್ಮಹತ್ಯೆ ಕಾರಣವಾದ ಅಂಶದ ಕುರಿತು ಡೆತ್ ನೋಟ್ ನಲ್ಲಿ ಚಂದ್ರಶೇಖರ್ ವಿವರಿಸಿದ್ದರು.


ನಿಗಮದ ಅಧಿಕಾರಿಗಳಾದ ಪದ್ಮನಾಭನ್, ದುರ್ಗಣ್ಣನವರ್ ಸೇರಿದಂತೆ ಇತರ ಮಾಹಿತಿಗಳನ್ನು ಉಲ್ಲೇಖಿಸಲಾಗಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು