ಸುದ್ದಿಲೈವ್/ಭದ್ರಾವತಿ
ಅನುಮಾನ ಸ್ಪದದ ರೀತಿಯಲ್ಲಿ ಯುವಕನೋರ್ವ ಸಾವನ್ನಪ್ಪಿದ್ದು ಆತನ ಮೃತದೇಹವನ್ನ ಮೆಗ್ಗಾನ್ ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ.
ಹುಡ್ಕೋ ಕಾಲೋನಿಯಲ್ಲಿದ್ದ ಮನೆಯಲ್ಲಿ ಊಟ ಮುಗಿಯುವ ತನಕ ಮನೆಯಲ್ಲೇ ಇದ್ದ ವಿಲ್ಸನ್ ಎಂಬ ಯುವಕ ಊಟವಾದ ಮೇಲೆ ಹೊರಗಡೆ ಹೋಗಿದ್ದಾನೆ. ಮನೆಯಿಂದ ಹೊರಗಡೆ ಹೋಗುವಾಗ ಇಷ್ಟು ಹೊತ್ತಿಗೆ ಬೇಡ ಎಂದು ಹೇಳಿದ್ದ ಮಾತಿಗೆ ಹೀಗೆ ಹೋಗಿ ಹಾಗೆ ಬರ್ತೇನೆ ಎಂದು ಹೇಳಿ ಹೊರಗೆ ಹೋಗಿದ್ದ.
ಸಮಯ ಕಳೆದರು ಮಗ ಮನೆಗೆ ಬಂದಿಲ್ಲವೆಂಬ ಆತಂಕದಿಂದ ಹುಡುಕಿಕೊಂಡು ಹೊರಟ ತಂದೆ ಮಗ ಎಲ್ಲೂ ಸಿಗಲಿಲ್ಲ ಎಂಬ ಕಾರಣಕ್ಕೆ ಮನೆಗೆ ವಾಪಾಸ್ ಆಗ್ತಾನೆ. ಮನೆಗೆ ವಾಪಾಸ್ ಆದಾಗ ಮಗ ಅಂಗಾತ ಮಲಗಿದ್ದನು. ಆಸ್ಪತ್ರೆಗೆ ಕರೆದುಕೊಂಡು ಹೋದ ಅಪ್ಪನಿಗೆ ಆತನ ಸಾವು ಖಚಿತಗೊಂಡಿದೆ. ಹೀಗೆ ವಿಲ್ಸನ್ ಸಾವು ಅನುಮಾನ ಸ್ಪದವಾಗಿ ನಡೆದು ಹೋಗಿದೆ.
ಪೇಪರ್ ಟೌನ್ ಠಾಣಾ ವ್ಯಾಪ್ತಿಯ ಹುಡ್ಕೋ ಕಾಲೋನಿಯಲ್ಲಿ ಯುವಕನ ಶವ ಪತ್ತೆಯಾಗಿದೆ. ಮೃತನಾದವನನ್ನ ವಿಲ್ಸನ್ ಸುಮಾರು 28-30 ವರ್ಷದೊಳಗಿನ ಯುವಕನಿರಬಹುದು ಎಂದು ಹೇಳಲಾಗುತ್ತಿದೆ.
ಆದರೆ ಆತನ ಸಾವು ಕೇರಂ ಆಟದಲ್ಲಿ ನಡೆದ ಗಲಾಟೆಯಿಂದಾಗಿ ಕೊಲೆಯಾಗಿದೆ ಎಂಬ ಮಾಹಿತಿಯೂ ತಿಳಿದು ಬಂದಿದೆ. ಭದ್ರಾವತಿಯಲ್ಲಿ ಜೂಜಾಟದ ಕೂಗು ಕೇಳಿ ಬರುತ್ತಿರುವ ಬೆನ್ನಲ್ಲೇ ಈ ಸಾವು ಮತ್ತಷ್ಟು ಅನುಮಾನವನ್ನ ಹೆಚ್ಚಿಸಿದೆ.