ಸುದ್ದಿಲೈವ್/ಆಗುಂಬೆ
ಆಗುಂಬೆ ಹೋಬಳಿಯ ಬಾಳೆಹಳ್ಳಿ ಗ್ರಾಮದ ತಲ್ಲೂರಂಗಡಿಯ ಅಷ್ಟ ಗ್ರಾಮದ ಅಧಿದೇವತೆ ಶ್ರೀ ಗುತ್ತ್ಯಮ್ಮ ದೇವಿಯ ದೇವಸ್ಥಾನ ದ ಜೀರ್ಣೋದ್ದಾರ ನಡೆಯುತ್ತಿದೆ. ಈ ಜೀರ್ಣೋದ್ಧಾರಕ್ಕೆ ಗ್ರಾಮಸ್ಥರು ಟೊಂಕಕಟ್ಟಿ ನಿಂತಿದ್ದಾರೆ.
ಕೈಯಲ್ಲಿರುವ ಹಣವನ್ನ ಕೊಟ್ಟು ದೇವಸ್ಥಾನದ ದೇಣಿಗೆ ನೀಡುವುದು ಸರ್ವೇಸಾಮಾನ್ಯ. ಆದರೆ ದೇವಸ್ಥಾನದ ಜೀರ್ಣೋಧ್ಧಾರಕ್ಕೆ ಹಸುವನ್ನೇ ಮಾರಿ ಆ ಹಣವನ್ನ ಜೀರ್ಣೋದ್ಧಾರಕ್ಕೆ ನೀಡಿರುವುದು ಯಾವ ಕಲಿಯುಗದ ಕರ್ಣನಿಗೂ ಕಮ್ಮಿಯಿಲ್ಲ.
ದೇವಸ್ಥಾನ ದ ಜೀರ್ಣೋದ್ದಾರಕ್ಕೆ ತಮ್ಮ ಮನೆಯಲಿದ್ದ ಉತ್ತಮ ತಳಿಯ 'HF' ಸಿಂಧಿ ಹಸುವನ್ನು ಮಾರಾಟ ಮಾಡಿ ಅದರಿಂದ ಬಂದ 78000 ಸಾವಿರ ಹಣವನ್ನು ಶ್ರೀ ಗುತ್ತ್ಯಮ್ಮ ದೇವಸ್ಥಾನದ ಜೀರ್ಣೋದ್ದಾರಕ್ಕೆ ಚೆಕ್ ಮುಖಾಂತರ ದೇಣಿಗೆ ನೀಡಿದ್ದಾರೆ. ಈ ಕೊಡುಗೆಯನ್ನ ಎರಡನೇ ಬಾರಿ ನೀಡುತ್ತಿರುವುದು ಗಮನೀಯ. ಈ ಹಿಂದೆ 50,000 ರೂ. ದೇಣಿಗೆ ನೀಡುವುದ್ದ ಮಾಲೀಕರು ಹಸುಮಾರಿದ ಹಣ ಬೇರೆಯಾವುದೇ ಸ್ವಂತ ಖರ್ಚಿಗೆ ಉಪಯೋಗವಾಗದಂತೆ ಮೂಲಕ "ಮನಸ್ಸಿದ್ದರೆ ಮಾರ್ಗ" ಎಂಬ ಗಾದೆಯನ್ನು 'ನೃಪತುಂಗ ಹೋಂ ಸ್ಟೇ' ಮಾಲೀಕರಾದ ಉದಯ ಕುಮಾರ್ ನೆನಪಿಸಿದ್ದಾರೆ.
ದೇವಸ್ಥಾನದ ಜೀರ್ಣೋದ್ದಾರ ಕಾರ್ಯವು ಕಳೆದ ಎಂಟು ತಿಂಗಳಿಂದ ಭರದಿಂದ ಸಾಗುತಿದ್ದು, ಗರ್ಭ ಗುಡಿಯ ಕೆಲಸವನ್ನು ಪೂರ್ಣಗೊಳಿಸಿ ಕಳೆದ ಏಪ್ರಿಲ್ ನಲ್ಲಿಯೇ ಮರು ಪ್ರತಿಷ್ಠಾಪನೆ ಮಾಡಬೇಕೆಂಬ ಉದ್ದೇಶ ಆಡಳಿತ ಮಂಡಳಿಯ ಆಶಯವಾಗಿತ್ತು. ಬಾಕಿ ಇರುವ ದೇವಸ್ಥಾನದ ಸುತ್ತು ಪೌಳಿ ಇನ್ನಿತರೇ ಕಾಮಗಾರಿಗಳು ಆಸಕ್ತಿ ಕಡಿಮೆತಾಗಬಹುದು ಎಂಬ ಆತಂಕ ಹಾಗೂ ದೇವಸ್ಥಾನಕ್ಕೆ ಹರಿದು ಬರುವ ಹಣವೂ ಕಡಿಮೆಯಾಗಿ ಆರ್ಥಿಕ ಸ್ಥಿತಿಗೆ ಧಕ್ಕೆಯಾಗ ಬಹುದೆಂಬ ದೂರ ದೃಷ್ಟಿಯಿಂದ ಊರಿನ ಗ್ರಾಮಸ್ಥರು ಹಾಗೂ ಆಡಳಿತ ಮಂಡಳಿ, ಪೂರ್ಣ ಕೆಲಸ ಮುಗಿಸಿಯೇ ಮರು ಪ್ರತಿಷ್ಠಾಪನೆ ಮಾಡಲು ತೀರ್ಮಾನಿದೆ.
ಜುಲೈ ತಿಂಗಳಿನಲ್ಲಿ ವಿಪರೀತ ಮಳೆಯಾಗಿದ್ದು, ದೇವಸ್ಥಾನದ ಕೆಲಸ ಸ್ವಲ್ಪ ಸ್ಥಗಿತಗೊಂಡಿತ್ತು. ಮಳೆ ಸ್ವಲ್ಪ ಬಿಡು ನೀಡಿದ್ದರಿಂದ ಇದೀಗ ಮತ್ತೆ ಕಾಮಗಾರಿ ಚುರುಕುಗೊಂಡಿದೆ. ಸುಮಾರು 1.5 ಕೋಟಿಗೂ ಹೆಚ್ಚು ತಗಲುವ ಈ ಕಾಮಗಾರಿಗೆ ಈಗಾಗಲೇ ಸಾಕಷ್ಟು ಭಕ್ತರು ಹಣ ಕೊಟ್ಟಿರುವುದಕ್ಕೆ ಆಡಳಿತ ಮಂಡಳಿ ಎಲ್ಲರಿಗೂ ಅಭಿನಂದನೆ ಸಲ್ಲಿಸಿದೆ.
ಇದೀಗ ಮುಂದುವರಿಯುವ ಕಾಮಗಾರಿಗಳಿಗೆ ಆ ದೇವಿಯ ಅನುಗ್ರವಿದೆ ಎಂಬುದನ್ನು ಅಗಸರಕೋಣೆ ಹೋಂ ಸ್ಟೇ ಮಾಲೀಕಾರದ ಉದಯ ಕುಮಾರ್ ರವರಂತವರಿಗೆ ಈ ರೂಪದಲ್ಲಿಯು ಹಣ ಕೊಡ ಬಹುದೆಂಬುವುದನ್ನು ತೋರಿಸಿ, ಔದಾರ್ಯವನ್ನು ಮೆರೆದಿದ್ದಾರೆ. ಅವರಿಗೆ ಹಾಗೂ ಅವರ ಕುಟುಂಬಕ್ಕೆ ಆ ದೇವಿಯು ಆಯೂರಾರೋಗ್ಯ-ಐಶ್ವರ್ಯ ಕಲ್ಪಿಸಲೆಂದು ಆಡಳಿತ ಮಂಡಳಿ ಅಧ್ಯಕ್ಷರು ಮತ್ತು ಸದಸ್ಯರು ಹಾರೈಸಿ ಅಭಿನಂದಿಸಿದ್ದಾರೆ.