ಸುದ್ದಿಲೈವ್/ಶಿವಮೊಗ್ಗ
ಶಿವಮೊಗ್ಗದ ಮಾಜಿ ಕಾರ್ಪರೇಟರ್ ಸತ್ಯನಾರಾಯಣ ರಾಜು ಯಾನೆ ಮೊಟ್ಟೆ ಸತೀಶ್ ರವರ ಕಾರು ಜಖಂಗೊಳಿಸಲಾಗಿದೆ. ಜೊತೆಗೆ ಖಾಸಗಿ ಆಸ್ಪತ್ರೆಗೆದಾಖಲಾಗಿದ್ದಾರೆ.
ಜಮೀನಿನ ವಿಚಾರದಲ್ಲಿ ಕಾರು ಜಖಂಗೊಳಿಸಿರುವುದಾಗಿ ಹಾಗೂ ಆತನ ಮೇಲೆ ಹಲ್ಲೆ ಮಾಡಿರುವುದಾಗಿ ಆರೋಪಿಸಲಾಗಿದೆ. ಕುಸ್ಕೂರಿನ ಬಳಿ ಜಮೀನು ಖರೀದಿಸಿರುವ ಮೊಟ್ಟೆಸತೀಶ್ ಖರೀದಿ ವಿಚಾರದಲ್ಲಿ ಹಾಗೂ ಅಕ್ಕ ಪಕ್ಕದ ಜಮೀನು ವಿಚಾರದಲ್ಲಿ ತಕರಾರು ನಡೆದಿತ್ತು.
ಈ ತಕರಾರು ವಿಚಾರದಲ್ಲಿ ನಿನ್ನೆ ರಾತ್ರಿ 10 ಗಂಟೆಯ ವರೆಗೆ ತುಂಗನಗರದಲ್ಲಿದ್ದು, ನಂತರ ನಡೆದ ಬೆಳವಣಿಗೆಯಲ್ಲಿ ಆಸ್ಪತ್ರೆಗೆ ದಾಖಲಾಗಿರುವುದಾಗಿ ತಿಳಿದುಬಂದಿದೆ.
ಶಿವಮೊಗ್ಗ ತಾಲೂಕು ಕುಸ್ಕೂರು ನಲ್ಲಿ ಇವರ ಜಮೀನಿದ್ದರೆ, ಇದಕ್ಕೆ ಹೊಂದಿಕೊಂಡ ಗ್ರಾಮ ಯರಗನಾಳ್ ನಲ್ಲಿ ಮನೆಯಿದೆ. ಮನೆಯಲ್ಲಿದ್ದಾಗ ಅವರ ಕಾರು ಜಖಂಗೊಂಡಿದೆ ಎಂದು ತಿಳಿದು ಬಂದಿದೆ. ಮೆಗ್ಗಾನ್ ಗೆ ದಾಖಲಾಗಿ ನಂತರ ಖಾಸಗಿ ಆಸ್ಪತ್ರೆಯಲ್ಲಿರುವುದಾಗಿ ಹೇಳಲಾಗುತ್ತಿದೆ.