ಸುದ್ದಿಲೈವ್/ಶಿವಮೊಗ್ಗ
ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ಉಂಬ್ಳೆ ಬೈಲು ರಸ್ತೆಯಲ್ಲಿರುವ ದರ್ಗಾದ ಹತ್ತಿರ ಆಲ್ಟೋ ಕಾರಿನಲ್ಲಿ ಶ್ರೀಗಂಧದ ತುಂಡುಗಳನ್ನು ಅಕ್ರಮವಾಗಿ ಮಾರಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ ತುಂಗ ನಗರ ಪೊಲೀಸರ ದಾಳಿ ನಡೆದಿದೆ. ದಾಳಿಯಲ್ಲಿ ಮೂವರನ್ನ ಬಂಧಿಸಲಾಗಿದ್ದು ಕೃತ್ಯಕ್ಕೆ ಬಳಸಿದ್ದ ವಾಹನ ಮತ್ತು 14.5 ಕೆ.ಜಿ ಗಂಧವನ್ನ ವಶಕ್ಕೆ ಪಡೆಯಲಾಗಿದೆ.
ತುಂಗ ನಗರ ಠಾಣೆಯ ಪಿಐ ಮಂಜುನಾಥ್ ರವರ ಮೇಲ್ವಿಚಾರಣೆಯಲ್ಲಿ ನಡೆದ ದಾಳಿಯಲ್ಲಿ ಠಾಣೆಯ ಪಿಎಸ್ಐ ಶಿವಪ್ರಸಾದ್, ಸಿದ್ದಪ್ಪ ಹಾಗೂ ಸಿಬ್ಬಂಧಿಗಳಾದ ಹೆಚ್.ಸಿ ಕಿರಣ್ ಮೋರೆ, ಅರುಣ್ ಕುಮಾರ್, ಪಿಸಿ ಹರೀಶ್ ನಾಯ್ಕ್, ನಾಗಪ್ಪ, ಲಂಕೇಶ್, ಹರೀಶ್, ಜಯ್ಯಪ್ಪ ಮತ್ತು ರಮೇಶ್ ರವರುಗಳನ್ನು ಒಳಗೊಂಡ ತಂಡವನ್ನು ಈ ಕಾರ್ಯಾಚರಣೆ ನಡೆಸಿದೆ.
ಶ್ರೀಗಂಧದ ತುಂಡುಗಳನ್ನು ಮಾರಾಟ ಮಾಡುತ್ತಿದ್ದ ಆರೋಪಿತರಾದ 1)ಇಮ್ದಾದ್ ಖಾನ್, 42 ವರ್ಷ, ಜೆಪಿ ನಗರ ಶಿವಮೊಗ್ಗ, 2) ಸಿದ್ದಿಕ್ ಭಾಷಾ @ ಸಿದ್ದು, 30 ವರ್ಷ, ಆರ್ ಎಂ ಎಲ್ ನಗರ ಶಿವಮೊಗ್ಗ ಮತ್ತು 3) ಫೈರೋಜ್ ಖಾನ್ @ ಗಿಡ್ಡು, 34 ವರ್ಷ, ಇಂದಿರಾನಗರ ಶಿವಮೊಗ್ಗ ಇವರನ್ನು ದಸ್ತಗಿರಿ ಮಾಡಲಾಗಿದೆ. ಆರೋಪಿತರಿಂದ ಅಂದಾಜು ಮೌಲ್ಯ 58,000/- ರೂಗಳ 14.5 ಕೆ.ಜಿ ತೂಕದ ಶ್ರೀ ಗಂಧದ ತುಂಡುಗಳು ಮತ್ತು ಕೃತ್ಯಕ್ಕೆ ಬಳಸಿದ ಆಲ್ಟೋ ಕಾರನ್ನು ವಶ ಪಡಿಸಿಕೊಳ್ಳಲಾಗಿದೆ.
ಸದರಿ ತಂಡದ ಉತ್ತಮವಾದ ಕಾರ್ಯವನ್ನು ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರು ಪ್ರಶಂಸಿಸಿ ಅಭಿನಂದಿಸಿರುತ್ತಾರೆ.