ನಾಳೆ ಒಪಿಡಿ ಹೊರತು ಪಡಿಸಿ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳು ಬಂದ್



ಸುದ್ದಿಲೈವ್/ಶಿವಮೊಗ್ಗ


ಕೋಲ್ಕತಾದಲ್ಲಿ (Kolkata) ಟ್ರೈನಿ ವೈದ್ಯೆಯ  (Doctor) ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವೈದ್ಯಕೀಯ ಸಂಘ ನಾಳೆ ಮುಷ್ಕರ ನಡೆಸಲು ತೀರ್ಮಾನಿಸಿದೆ. ಹೀಗಾಗಿ ನಾಳೆ ದೇಶಾದ್ಯಂತ ಖಾಸಗಿ ಆಸ್ಪತ್ರೆಗಳಲ್ಲಿ (Private Hospital) ತುರ್ತು ವೈದ್ಯಕೀಯ ಸೇವೆ ಹೊರತುಪಡಿಸಿ ಉಳಿದ ಯಾವುದೇ ಸೇವೆಗಳು ಲಭ್ಯವಿರುವುದಿಲ್ಲ. 


ಅದರಂತೆ ಶಿವಮೊಗ್ಗದಲ್ಲೂ ನಾಳೆ ಖಾಸಗಿ ಮತ್ತು  ಸರ್ಕಾರಿ ಆಸ್ಪತ್ರೆಗಳು ಬಂದ್ ಆಗಲಿವೆ‌. ಬೆಳಿಗ್ಗೆ 6 ಗಂಟೆಯಿಂದ ಮರುದಿನ ಬೆಳಿಗ್ಗೆ 6ರವರೆಗೂ ಓಪಿಡಿ ಬಂದ್ ಆಗಿರಲಿದೆ.


ಖಾಸಗಿ ಆಸ್ಪತ್ರೆಯವರು 70 ವರ್ಷಕ್ಕಿಂತ ಮೇಲ್ಪಟ್ಟವರು, ತುರ್ತು ವಿಭಾಗ ಹಾಗೂ ಸಣ್ಣ ಮಕ್ಕಳಿಗೆ ತೊಂದರೆಯಾಗದಂತೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಇಟ್ಟುಕೊಂಡಿರುವುದಾಗಿ ತಿಳಿದು ಬಂದಿದ್ದು ಅದನ್ನ ಹೊರತು ಪಡಿಸಿ ಬಹುತೇಕ ಸೇವೆಗಳು ಬಂದ್ ಆಗಲಿವೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close