ಮಚ್ಚು ಬೀಸಿದವನು ಶ್ರೀನಿವಾಸ ಯಾನೆ ಸೀನ-ಎಫ್ಐಆರ್ ದಾಖಲು

 


ಸುದ್ದಿಲೈವ್/ಶಿವಮೊಗ್ಗ


ವಾಣಿಜ್ಯ ಸಂಕೀರ್ಣದ ಸಿಬ್ಬಂದಿಯ ಮೇಲೆ ವ್ಯಕ್ತಿಯೋರ್ವ  ಮಚ್ಚು ಹಿಡಿದುಕೊಂಡು ಬಂದು ಬೀಸಿದ ವಿಡಿಯೋವೊಂದು ನಿನ್ನೆ ವೈರಲ್ ಆಗಿತ್ತು. ಆ ಪ್ರಕರಣ ವಿನೋಬ ನಗರ ಪೊಲೀಸ್ ಠಾಣೆಯಲ್ಲಿ ಸುಮೋಟೊ ಪ್ರಕರಣ ದಾಖಲಾಗಿದೆ.


ಮಚ್ಚು ಬೀಸಿದಾತನನ್ನ ರೌಡಿ ಶೀಟರ್ ಶ್ರೀನಿವಾಸ್ ಯಾನೆ ಸೀನ  ಎಂದು ಗುರುತಿಸಲಾಗಿದೆ. ನಗರದ ಸವಳಂಗ ರಸ್ತೆಯ ಎಲ್‌ಬಿಎಸ್ ನಗರದಲ್ಲಿರುವ ಪೋಲಾರ್ ಬೇರ್. ಮತ್ತು ಮೆಟ್ಲೆಸ್ ಬಳಿ ಆಗಸ್ಟ್ 16 ರ ರಾತ್ರಿ ಸುಮಾರು 12ರಿಂದ  ಒಂದು ಗಂಟೆಯ ವೇಳೆಗೆ  ತನಕ  ಗಲಾಟೆ ನಡೆದಿದೆ ಎನ್ನಲಾಗಿದೆ.


12:30 ಕ್ಕೆ   ದ್ವಿಚಕ್ರ ವಾಹನದಲ್ಲಿ ಮೂವರು ಜನ ಬಂದಿದ್ದು, ಇದರಲ್ಲಿ ಓರ್ವ  ಮಚ್ಚು ಹಿಡಿದುಕೊಂಡು ಬಂದು ಪೊಲಾರ್ ಬೇರ್ ಸಿಬ್ಬಂದಿ ಮೇಲೆ ಏಕಾಏಕಿ ಅಟ್ಯಾಕ್ ಗೆ ಮುಂದಾಗಿದ್ದಾನೆ.‌ ಬೈಕ್ ನಲ್ಲಿ ಬಂದ ಶ್ರೀನಿವಾಸ ಯಾನೆ ಸೀನ ಮತ್ತೋರ್ವ ಹಾಗೂ ಆತನ ಜೊತೆ ಬಂದವರು ತೃತೀಯ ಲಿಂಗಿ ಇರಬಹುದು ಎಂದು ಶಂಕಿಸಲಾಗಿದೆ.‌


ಆದರೆ ಶ್ರೀನಿವಾಸ ಮತ್ತು ಸೀನನ ವಿರುದ್ಧ ಮಾತ್ರ ದೂರು ದಾಖಲಾಗಿದೆ. ಕ್ಷಣಾರ್ಧದಲ್ಲಿ ಸಿಬ್ಬಂದಿ ಆತನಿಂದ ಎಸ್ಕೇಪ್ ಆಗುತ್ತಾನೆ.   ಕೈಯಲ್ಲಿ ಲಾಂಗು ಹಿಡಿದು  ಅಟ್ಯಾಕ್ ಮಾಡಲು ಯತ್ನಿಸಿದ ವಿಡಿಯೋ ಸಿಸಿಟಿವಿನಲ್ಲಿ ರೆಕಾರ್ಡ್ ಆಗಿದೆ.. ಅದೃಷ್ಟ ವಶಾತ್ ಸಿಬ್ಬಂದಿ ಶೆಟ್ಟರ್ ಎತ್ತು ಒಳಗಡೆ ಓಡಿ ಹೋಗುತ್ತಾನೆ. 


ನಂತರ ಮಚ್ಚು ಹಿಡಿದ ವ್ಯಕ್ತಿ  ಶೆಟ್ಟರ್ ಮತ್ತು ಡೋರ್ ಕೆಳಗೆ ಲಾಂಗು ನಿಂದ ಬೀಸುತ್ತಾನೆ. ಪ್ರಕರಣ ವಿನೋಬನಗರ ನಗರ ಠಾಣಯಲ್ಲಿ ಎಫ್ಐಆರ್ ದಾಖಲಾಗಿದೆ.  ಸಧ್ಯಕ್ಕೆ ಸೀನ ಮತ್ತು ಇಬ್ಬರು ತಲೆಮರೆಸಿಕೊಂಡಿರುವುದಾಗಿ ತಿಳಿದು ಬಂದಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close