ಸುದ್ದಿಲೈವ್/ಶಿವಮೊಗ್ಗ
ಮಹಿಳೆಯರ ಮೇಲೆ ಇತ್ತೀಚೆಗೆ ನಡೆಯುತ್ತಿರುವ ದೌರ್ಜನ್ಯವನ್ನ ಖಂಡಿಸಿ ಬಿಜೆಪಿಯ ನಗರ ಮಹಿಳ ಮೋರ್ಚಾ ನ್ಯಾಯಕ್ಕಾಗಿ ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ.
ಮಹಿಳೆಯರ ಮೇಲೆ ದೌರ್ಜನ್ಯ ರಾಜ್ಯದಲ್ಲಿ ನಿರಂತರವಾಗಿ ನಡೆಯುತ್ತಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಕಾಂಗ್ರೆಸ್ ಸರ್ಕಾರ ಹೆಣ್ಣುಮಕ್ಕಳ ರಕ್ಷಣೆ ಇಲ್ಲದಂತಾಗಿದೆ. ಹುಬ್ಬಳ್ಳಿಯ ನೇಹಾ ಹತ್ಯೆ, ಮಡಿಕೇರಿಯಲ್ಲಿ ಮೀನಾಳ ರುಂಡಕತ್ತರಿಸಿ ಕೊಲೆ, ಅಂಜಲಿ ಕೊಲೆ ಇಡೀ ನಾಗರೀಕ ಸಮಾಜವೇ ತಲೆ ತಗ್ಗಿಸುವಂತೆ ಮಾಡಿದೆ.
ಇದೀಗ ಉಡುಪಿಯ ಕಾರ್ಕಳದ ಕೌಡೂರು ಗ್ರಾಮದ ರಂಗನ ಪಾಲ್ಕೆ ಗ್ರಾಮದಲ್ಲಿ ಮಾಧಕ ದ್ರವ್ಯಗಳನ್ನ ಸೇವನೆ ಮಾಡಿಸಿ ಸಾಮೂಹಿಕ ಅತ್ಯಾಚಾರ ನಡೆಸಿರುವುದು ಮತ್ತು ಹುಬ್ಬಳ್ಳಿಯ ಐದು ವರ್ಷದ ಮಗುವಿನ ಮೇಲೆ ಅತ್ಯಾಚಾರ ನಡೆದಿರುವುದು ಹೀನಾಯ ಕೃತ್ಯವಾಗಿದೆ.
ಕಾಂಗ್ರೆಸ್ ಸರ್ಕಾರದಲ್ಲಿ ಕ್ರಿಮಿನಲ್ ಗಳು, ಕೊಲೆಗಡುಕರಿಗೆ ರಕ್ಷಣೆ ಇದೆವಿನಃ ಮಹಿಳೆಯರಿಗಿಲ್ಲವಾಗಿದೆ. ಇಂತಹ ಕೃತ್ಯ ನಡೆದಾಗಲೂ ಅನುಮಾನವೆನಿಸಿದೆ. ನ್ಯಾಯಾಲಯಕ್ಕೆ ತ್ವರಿತ ಗತಿಯಲ್ಲಿ ವಿಚಾರಣೆ ಮಾಡಬೇಕು. ಮುಂದಿನಗಳಲ್ಲಿ ತುರ್ತು ಕಾನೂನು ಕ್ರಮ ಜರುಗಿಸದಿದ್ದರೆ ಸಂಘಟನೆ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಂಘಟನೆಯ, ಗೌರಿ ಶ್ರೀನಾಥ್, ಯಶೋಧ, ನಿರ್ಮಲಾ, ಚೈತ್ರಾ, ಸುರೇಖಾ ಮುರುಳೀಧರ್ ಮೊದಲಾದವರು ಉಪಸ್ಥಿತರಿದ್ದರು.