ಸುದ್ದಿಲೈವ್/ಶಿವಮೊಗ್ಗ
ರಾಷ್ಟ್ರೀಯ ಹಬ್ಬಗಳಾದ ಸ್ವಾತಂತ್ರ್ಯೋತ್ಸವ ಮತ್ತು ಗಣರಾಜ್ಯದ ಸಂಭ್ರಮಾಚರಣೆಯನ್ನ ಇನ್ನು ಮುಂದೆ ನೆಹರೂ ಕ್ರೀಡಾಂಗಣ ಅಥವಾ ಫ್ರೀಡಂ ಪಾರ್ಕ್ ನಲ್ಲಿ ನಡೆಯುವ ಆಶಾಭಾವನೆಯನ್ನ ಶಾಸಕ ಚೆನ್ನಬಸಪ್ಪ ವ್ಯಕ್ತಪಡಿಸಿದ್ದಾರೆ.
ಸುಮಾರು 12 ವರ್ಷಗಳ ಹಿಂದೆ ನೆಹರೂ ಕ್ರೀಡಾಂಗಣದಲ್ಲಿ ನಡೆಯತ್ತಿದ್ದ ರಾಷ್ಟ್ರೀಯ ಹಬ್ಬವನ್ನ ಡಿಎಆರ್ ಮೈದಾನಕ್ಕೆ ಶಿಫ್ಟ್ ಆಗಿತ್ತು. ಆಗ ಸಿಂಥೆಟಿಕ್ ಟ್ರ್ಯಾಕ್ ಇರುವ ಕಾರಣ ಸಂಭ್ರಮಾಚರಣೆಯ ಜಾಗವನ್ನೇ ಬದಲಿಸಲಾಗಿತ್ತು. ಆದರೆ ಈಗ ಸಿಂಥೆಟಿಕ್ ಟ್ರ್ಯಾಕ್ ಇರುವ ಕಡೆ ರಾಷ್ಟ್ರೀಯ ಹಬ್ಬಗಳನ್ನ ನಡೆಸುವ ಬಗ್ಗೆ ಪಾಸಿಟಿವ್ ಮಾತುಗಳು ಕೇಳಿ ಬರುತ್ತಿವೆ.
ಮೊನ್ನೆ ಪಾಲಿಕೆ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ನಡೆದ ಪ್ರಗತಿ ಪರಿಶೀಲನೆ ಸಭೆಯಲ್ಲಿ ರಾಷ್ಟ್ರೀಯ ಹಬ್ಬಗಳನ್ನ ನೆಹರೂ ಕ್ರೀಡಾಂಗಣ ಅಥವಾ ಫ್ರೀಡಂ ಪಾರ್ಕ್ ನಲ್ಲಿ ಆಚರಿಸಲು ಅವಕಾಶ ಕಲ್ಪಿಸಬೇಕು ಎಂಬ ಮಾತು ಜನಪ್ರತಿನಿಧಿಗಳಿಂದಲೇ ಕೇಳಿ ಬಂದಿದೆ.
ಸಚಿವರು ಸಹ ಜನರ ಜೊತೆ ರಾಷ್ಟ್ರೀಯ ಹಬ್ಬ ಆಚರಿಸಬೇಕೆಂಬ ಆಸೆಯನ್ನ ಹೊರಹಾಕಿದ್ದಾರೆ. ಈ ಮೊದಲು ನೆಹರೂ ಕ್ರೀಡಾಂಗಣದಲ್ಲಿ ಸುತ್ತಲೂ ವಿದ್ಯಾರ್ಥಿಗಳು ಕುಳಿತು ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದ ಗತಕಾಲ ಮರುಕಳಿಸುವ ಆಶಾಭಾವನೆ ಹೊರಬಿದ್ದಿದೆ. ಆದರೆ ಡಿಎಆರ್ ಮೈದಾನದಲ್ಲಿ ಈ ಸೊಬಗು ಕಣ್ಮರೆಯಾಗಿದೆ.
ಸಚಿವರ ಮತ್ತು ಶಾಸಕರ ಮಾತುಗಳಿಂದ ಕಳೆದು ಹೋದ ರಾಷ್ಟ್ರೀಯ ಹಬ್ಬಗಳ ವೈಭವ ಮತ್ತೆ ಮರುಕಳಿಸುವ ಸಾಧ್ಯತೆ ಹೆಚ್ಚಾಗಿದೆ. ಈ ಕುರಿತು ಇಂದು ಶಾಸಕರ ಸುದ್ದಿಗೋಷ್ಠಿಯಲ್ಲೂ ಶಾಸಕರು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಪಾಲಿಕೆ ಪ್ರಗತಿ ಪರಿಶೀಲನೆ ಸಭೆಯಲ್ಲಿ ಪಾಸಿಟಿವ್ ಮಾತನಾಡಿದ್ದಾರೆ. ಕಾದು ನೋಡೋಣ ಎಂದಿದ್ದಾರೆ.