ಬೋನಿಗೆ ಬಿದ್ದ ಕರಡಿ

 



ಸುದ್ದಿಲೈವ್/ಹೊಳೆಹೊನ್ನೂರು



ಕಳೆದ ಕೆಲವು ದಿನದಿಂದ ಆತಂಕ ಸೃಷ್ಟಿಸಿದ್ದ ಕರಡಿ  ಅರಣ್ಯ ಇಲಾಖೆ ಬೋನಿಗೆ ಬಿದ್ದಿದೆ. ತಟ್ಟೆಹಳ್ಳಿಯ ಚೌಡೇಶ್ವರಿ ದೇವಸ್ಥಾನದ ಆವರಣದಲ್ಲಿ ಇರಿಸಿದ್ದ ಬೋನಿಗೆ ಕಳೆದ ರಾತ್ರಿ ಕರಡಿ ಸೆರೆ ಸಿಕ್ಕಿದೆ. ಇದರಿಂದ ಸುತ್ತಮುತ್ತಲ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.



ಕರಡಿ ಪ್ರತ್ಯಕ್ಷವಾಗಿದ್ದರಿಂದ ಸುತ್ತಮುತ್ತಲ ಗ್ರಾಮಗಳಲ್ಲಿ ಆತಂಕ ಉಂಟಾಗಿತ್ತು. ಅಗಸನಹಳ್ಳಿ, ಎಮ್ಮೆಹಟ್ಟಿ, ಕೆರೆಬೀರನಹಳ್ಳಿ, ದಾಸರಕಲ್ಲಹಳ್ಳಿ, ತಿಮ್ಲಾಪುರ, ತಿಮ್ಲಾಪುರ ಕ್ಯಾಂಪ್, ಜಂಬರಘಟ್ಟೆ, ವಿಠಲಾಪುರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕರಡಿ ಕಾಣಿಸುತ್ತಿತ್ತು. ಜಮೀನು ಕೆಲಸಕ್ಕೆ ತೆರಳಲು ರೈತರು, ಕಾರ್ಮಿಕರು ಹಿಂದೇಟು ಹಾಕುತ್ತಿದ್ದರು. ರಾತ್ರಿ ವೇಳೆ ಒಬ್ಬಂಟಿಯಾಗಿ ಓಡಾಡಲು ಹೆದರುತ್ತಿದ್ದರು.




ಎಮ್ಮೆಹಟ್ಟಿ ಗ್ರಾಮದ ಆನಂದಪ್ಪ ಎಂಬುವರ ಮೇಲೆ ಕೆಲ ದಿನಗಳ ಹಿಂದೆ ಕರಡಿ ದಾಳಿ ನಡೆಸಿತ್ತು. ಬೆಳಗ್ಗೆ ಬಹಿರ್ದೆಸೆಗೆ ತೆರಳಿದ್ದ ಸಂದರ್ಭ ಏಕಾಏಕಿ ದಾಳಿಗೆ ಆನಂದಪ್ಪ ಗಾಯಗೊಂಡಿದ್ದರು. ಅವರು ಮೆಗ್ಗಾನ್‌ ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆ ಪಡೆದಿದ್ದರು. ದಾಳಿಯಿಂದಾಗಿ ಗ್ರಾಮಸ್ಥರಲ್ಲಿ ಆತಂಕ ಮತ್ತಷ್ಟು ಹೆಚ್ಚಾಗಿತ್ತು.



ಗ್ರಾಮಸ್ಥರ ಆತಂಕದ ನಡುವೆ ಮಾವಿನಕಟ್ಟೆ ವಲಯ ಅರಣ್ಯ ಅಧಿಕಾರಿಗಳು ಕರಡಿಯ ಚಲನವಲನ ಗಮನಿಸಿ ಬೋನ್‌ ಇರಿಸಿದ್ದರು. ಆರ್‌ಎಫ್‌ಒ ಜಗದೀಶ ಮಾರ್ಗದರ್ಶನದಲ್ಲಿ ಬೋನ್‌ ಇರಿಸಿದ್ದು, ಇವತ್ತು ಕರಡಿ ಸೆರೆಯಾಗಿದೆ. ಕರಡಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಕೊಂಡೊಯ್ದಿದ್ದಾರೆ.


ಈ ಬಗ್ಗೆ ಸುದ್ದಿಲೈವ್ ಗೆ ಮಾಹಿತಿ ನೀಡಿದ ಭದ್ರಾವತಿ ವಿಭಾಗದ ಡಿಸಿಎಫ್ ಆಶಿಶ್ ರೆಡ್ಡಿ ಒಂದು ವಾರದ ಹಿಂದೆ ಐದು ಬೋನ್ ಇಡಲಾಗಿತ್ತು. ಕರಡಿ ಚಲನೆ ಒಂದೇ ಕಡೆ ಇರಲಿಲ್ಲ. ಕಳೆದ ನಾಲ್ಕೈದು ವರ್ಷದಿಂದ ಮಳೆಗಾಲದಲ್ಲಿ ಕರಡಿ ಕಾಣಿಸಿಕೊಳ್ತಿರಲಿಲ್ಲ. ಇದು ನಾರ್ಮಲ್ ಬಿಹೇವಿಹರ್ ಅಲ್ಲ. ದೇವಸ್ಥಾನದ ಇರುವ ಕಡೆ ವೇಸ್ಟ್ ಆಹಾರ ಹುಡುಕಿಕೊಂಡು ಬಂದ ಕರಡಿ ಗ್ರಾಮಗಳಲ್ಲಿ ಕಾಣಿಸಿಕೊಂಡಿತ್ತು. 


ಈ ಭಾಗದಲ್ಲಿ 4 ದೇವಸ್ಥಾನಗಳಿವೆ. ಇಲ್ಲಿನ ಆಹಾರಗಳನ್ನ ಹುಡುಕಿಕೊಂಡು ಬಂದ ಕರಡಿ ಗ್ರಾಮಸ್ತರ ಕಣ್ಣಿಗೆ ಕಾಣಸಿಕೊಂಡಿತ್ತು. ಶಾಂತಿಸಾಗರ್ ಮತ್ತು ಭದ್ರಾವತಿ ರೇಂಜ್ ಎರಡೂ ಸೇರಿ 15 ಜನ ಆಪರೇಷನ್ ಮಾಡಿರುವುದಾಗಿದೆ ತಿಳಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close