ಸೋಮವಾರ, ಆಗಸ್ಟ್ 12, 2024

ಬಿಜೆಪಿಯ ಎರಡನೇ ಪಾದಯಾತ್ರೆ-ಪಕ್ಷದ ಬಗ್ಗೆ ಆತಂಕ ವ್ಯಕ್ತಪಡಿಸಿದ ಈಶ್ವರಪ್ಪ



ಸುದ್ದಿಲೈವ್/ಶಿವಮೊಗ್ಗ


ರಾಜ್ಯದ ಬಿಜೆಪಿಯ 12 ಜನ ಪ್ರಮುಖ ನಾಯಕರು ಬೆಳಗಾವಿಯಲ್ಲಿ ಸಭೆ ನಡೆಸಿದ್ದಾರೆ. ಇದು ನನಗೆ ಆಘಾತ ಉಂಟು ಮಾಡಿದೆ ಎಂದು ಮಾಜಿ ಡಿಸಿಎಂ ಈಶ್ವರಪ್ಪ ಆತಂಕ ವ್ಯಕ್ತಪಡಿಸಿದ್ದಾರೆ. 


ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಭೆ ನಡೆಸಿದವರು ಅನುಭವಿಗಳು, ಪಕ್ಷವನ್ನು ಕಟ್ಟಿದವರು. ಅವರು ಆಗಸ್ಟ್ 17 ರಿಂದ ಕೂಡಲಸಂಗಮದಿಂದ ಬಳ್ಳಾರಿಗೆ ಪಾದಯಾತ್ರೆ ಮಾಡುವುದಾಗಿ ಹೇಳಿದ್ದಾರೆ. ಆದರೆ ಅವರು 12 ಜನರಿದ್ದಾರೋ, ಇನ್ನೂ ಹೆಚ್ಚಿದ್ದಾರೋ ಗೊತ್ತಿಲ್ಲ. ರಾಜ್ಯ ಬಿಜೆಪಿ ಅಧ್ಯಕ್ಷರನ್ನು ಬಿಟ್ಟು ನಡೆದಿರುವ ಸಭೆ ಕುರಿತ


ಈ ಪಾದಯಾತ್ರೆ ನಡೆದರೆ ರಾಜ್ಯದ ಎಲ್ಲಾ ತಾಲೂಕಿನಲ್ಲೂ ಎರಡೆರಡು ಪಾರ್ಟಿಯಾಗುತ್ತದೆ. ವಿಜಯೇಂದ್ರರನ್ನು ಅಧ್ಯಕ್ಷರಾಗಿ ಮಾಡಿದ ನಂತರ ಈ ಬೆಳವಣಿಗೆ ಆಗಿದೆ.ವಿಜಯೇಂದ್ರ ಅಧ್ಯಕ್ಷರಾದ ನಂತರ ರಾಜ್ಯದಲ್ಲಿ ಲೋಕಸಭಾ  25 ಸ್ಥಾನದಿಂದ 17ಕ್ಕೆ ಕುಸಿಯಿತು. ಅದೇ ವಿಧಾನಸಭೆಯಲ್ಲಿ 66ಕ್ಕೆ ಕುಸಿಯಿತು. ಮೋದಿ ಹೆಸರು ಮತ್ತು ಬೆಂಬಲವಿದ್ದರೂ ಈ ಪರಿಸ್ಥಿತಿ ಬಿಜೆಪಿಗೆ ಎದುರಾಯಿತು ಎಂದು ಕಳವಳ ವ್ಯಕ್ತಪಡಿಸಿದರು.


ಜೆಡಿಎಸ್ ಜೊತೆ ಸಖ್ಯ ಮಾಡಿದ ನಂತರ ಇಷ್ಟಾದರೂ ಸ್ಥಾನ ಸಿಕ್ಕಿದೆ. ಇಲ್ಲದಿದ್ದರೆ ಇಷ್ಟೂ ಸಿಟ್ ಬರ್ತಿರಲಿಲ್ಲ. ಒಂದೇ ಕುಟುಂಬದ ಕೈಗೆ ಅಧಿಕಾರ ಕೊಟ್ಡಿದ್ದೇ ಇದಕ್ಕೆ ಕಾರಣವಾಗಿದೆ. ಪಕ್ಷದಲ್ಲಿ ಮೊದಲು ಸಾಮೂಹಿಕ ನಾಯಕತ್ವ ಇತ್ತು.ಅದರೆ ಈಗ ಆ ರೀತಿಯಲ್ಲಿ ಇಲ್ಲ. ಬರೀ ಕುಟುಂಬದ ರಾಜಕಾರಣ ಕಂಡು ಬರುತ್ತಿದೆ. ತಮಗೆ ಬೇಕಾದವರಿಗೆ ಪಕ್ಷದಲ್ಲಿ ಸ್ಥಾನಮಾನ ನೀಡಲಾಗಿದೆಬಿಜೆಪಿ ಹೈ ಕಮಾಂಡ್ ತಕ್ಷಣವೇ ಅಸಮಧಾನಿತರನ್ನು ಕರೆದು ಮಾತಾಡಬೇಕು ಎಂದು ಸಲಹೆ ನೀಡಿದರು. 


ಇಲ್ಲದಿದ್ದರೆ ಪಕ್ಷವನ್ನು ಕಟ್ಟಿದವರಿಗೆ ನೋವಾಗುತ್ತದೆ. ರಾಜ್ಯ ಬಿಜೆಪಿಯಲ್ಲಿ ಏನಾಗುತ್ತಿದೆ ಎಂದು ಪಕ್ಷದ ನಾಯಕತ್ವಕ್ಕೆ ಗೊತ್ತಿದೆ. ಆದರೆ ಏಕೆ ಗಮನ ಹರಿಸುತ್ತಿಲ್ಲವೋ ಗೊತ್ತಿಲ್ಲ. ಹಾಗಾಗಿ ಆದಷ್ಟು ಬೇಗ ರಾಜ್ಯದ ಬಿಜೆಪಿಯ ಪರಿಸ್ಥಿತಿಯನ್ನು ಸರಿಪಡಿಸಲಿ ಎಂದು ಸಲಹೆ ನೀಡಿದರು. 


ಬಾಂಗ್ಲಾ ಹಿಂದೂಗಳ ರಕ್ಷಣೆ ಆಗಲಿ


ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ಸಾಕಷ್ಟು ದಾಳಿ, ದಬ್ಬಾಳಿಕೆ ನಡೆದಿದೆ. ಇಸ್ಕಾನ್ ಸೇರಿದಂತೆ ಅನೇಕ ದೇವಾಲಯಗಳನ್ನು ನಾಶಪಡಿಸಲಾಗಿದೆ. ಹಿಂದುಗಳು ಏನು ಅನ್ಯಾಯ ಮಾಡಿದ್ದರು ಈ ರೀತಿ ನಡೆದುಕೊಳ್ಳಲು. ತಕ್ಷಣವೇ ವಿಶ್ವಸಂಸ್ಥೆ ತಕ್ಷಣವೇ ಮಧ್ಯ ಪ್ರವೇಶಿಸಬೇಕು. ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ತಡೆಯಬೇಕು ಎಂದು ಆಗ್ರಹಿಸಿದರು. 


ಭಾರತದಲ್ಲೂ ಈ ರೀತಿಯ ಘಟನೆ ಆಗಬಹುದು ಎಂದು ಕಾಂಗ್ರೆಸ್ ನ‌ ಸಲ್ಮಾನ್ ಖುರ್ಷಿದ್ ಹೇಳಿದ್ದಾರೆ. ಹೀಗಾದರೆ ಹಿಂದುಗಳು ಸುಮ್ಮನಿರುತ್ತಾರಾ, ಮುಸ್ಲಿಮರ ಪರಿಸ್ಥಿತಿ ಕಷ್ಟಕರವಾಗುತ್ತದೆ ಎಂದು ತಿರುಗೇಟು ನೀಡಿದರು. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ