ನಾಯಿಗಳ ದಾಳಿಗೆ ಸಿಲುಕಿದ್ದ ಜಿಂಕೆ ರಕ್ಷಣೆ



ಸುದ್ದಿಲೈವ್/ಶಿವಮೊಗ್ಗ


ನಾಯಿಗಳ ದಾಳಿಗೆ ಸಿಲುಕಿ ಗಾಯಗೊಂಡಿದ್ದ ಜಿಂಕೆ ಒಂದನ್ನು ಗ್ರಾಮಸ್ಥರೇ ರಕ್ಷಿಸಿ, ಅರಣ್ಯ ಇಲಾಖೆ ಸಹಾಯದೊಂದಿಗೆ ವಾಪಸ್ ಕಾಡಿಗೆ ಬಿಟ್ಟಿರುವ ಘಟನೆ ನಡೆದಿದೆ.


ತಾಲೂಕಿನ ಚೋರಡಿ ಸಮೀಪದ ಕೊರಗಿ ಗ್ರಾಮದಲ್ಲಿ ಜಿಂಕೆ ಕಾಡಿಂದ ತಪ್ಪಿಸಿಕೊಂಡು ಗ್ರಾಮದ ಬಳಿ ಬಂದಿತ್ತು, ಈ ವೇಳೆ ನಾಯಿಗಳು ಜಿಂಕೆಯನ್ನು ಬೆನ್ನಟ್ಟಿದ್ದವು.


ಕೂಡಲೇ ಇದನ್ನು ಗಮನಿಸಿದ ಕೊರಗಿ ಗ್ರಾಮದ ಸುರೇಶ್ ಮತ್ತಿತರರು ಜಿಂಕೆಯನ್ನು ನಾಯಿಗಳ ಹಿಂಡಿನಿಂದ ಬಿಡಿಸಿದ್ದಾರೆ. ಅಷ್ಟರಲ್ಲಾಗಲೇ ಜಿಂಕೆ ಅಲ್ಪ ಪ್ರಮಾಣದಲ್ಲಿ ಗಾಯಗೊಂಡಿದ್ದು ತಕ್ಷಣ ಗ್ರಾಮಸ್ಥರು ಚೋರಡಿ ಆನಂದಪುರಂ ವಲಯ ಅರಣ್ಯ ಅಧಿಕಾರಿಗಳ ಗಮನಕ್ಕೆ ತಂದರು.


ತಕ್ಷಣ ಕಾರ್ಯಕ್ರಮದ ಅರಣ್ಯ ಇಲಾಖೆ ಸಿಬ್ಬಂದಿ ಕೊರಗಿ ಗ್ರಾಮಕ್ಕೆ ಪಶು ವೈದ್ಯಾಧಿಕಾರಿಗಳನ್ನು ಕರೆಸಿ ಗಾಯಗೊಂಡಿದ್ದ ಜಿಂಕೆಗೆ ಚಿಕಿತ್ಸೆ ಕೊಡಿಸಿದರು. ಬಳಿಕ ಜಿಂಕೆಯನ್ನು ಕೊರಗಿ ಗ್ರಾಮದ ಅರಣ್ಯ ವ್ಯಾಪ್ತಿಯೊಳಗೆ ಸುರಕ್ಷಿತವಾಗಿ ಬಿಡಲಾಯಿತು. ಆನಂದಪುರಂ ವಲಯ ಅರಣ್ಯ ಅಧಿಕಾರಿ ರವಿಕುಮಾರ್ ಹಾಗೂ ಸಿಬ್ಬಂದಿ ಈ ವೇಳೆ ಹಾಜರಿದರು.


ಇದನ್ನೂ ಓದಿ-https://www.suddilive.in/2024/08/blog-post_56.html

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close