ಪ್ರಾಮಾಣಿಕತೆ ಮೆರೆದ ಇಬ್ವರು ನಾಗರೀಕರಿಗೆ ಸನ್ಮಾನ



ಸುದ್ದಿಲೈವ್/ಶಿವಮೊಗ್ಗ


ಪ್ರಾಮಾಣಿಕತನ ಮೆರೆದ ಇಬ್ಬರು ನಾಗರೀಕರಿಗೆ ಕುಂಸಿ ಪೊಲೀಸ್ ಠಾಣೆಯ ಪಿಐ ಹರೀಶ್ ಪಟೇಲ್ ಅವರು ಸನ್ಮಾನಿಸಿದ್ದಾರೆ. ಇದರ ಮೂಲಕ ಉತ್ತಮ ನಾಗರೀಕರ ಬೆನ್ನಿಗೆ ಪೊಲೀಸ್ ಇಲಾಖೆ ನಿಂತಿದೆ ಎಂಬ ಸಂದೇಶ ರವಾನಿಸಿದ್ದಾರೆ.


ಪ್ರಾಮಾಣಿಕತೆ ಮೆರೆದ ಸೋಮಶೇಖರ್ ಮತ್ತು ಸುಹಾಸ್ ಪ್ರಸಾದ್ ಸಿ ಚೋರಡಿ ಗ್ರಾಮ ರವರಿಗೆ ಶಾಲು ಹೊದಿಸಿ ಸನ್ಮಾನಿಸಲಾಯಿತು. ಆ.1 ರಂದು  ಚೋರಡಿ ಗ್ರಾಮದ ಸೋಮಶೇಖರ್ ಅವರಿಗೆ ಗ್ರಾಮದ ರಂಗಮಂದಿರ ರಸ್ತೆಯಲ್ಲಿ ಒಂದು ವ್ಯಾನಿಟಿ ಬ್ಯಾಗ್ ಸಿಕ್ಕಿದ್ದು ಅದರಲ್ಲಿ ಐಡಿ ಕಾರ್ಡ್. 1 ಲಕ್ಷ ಹಣ. ಬ್ಯಾಂಕ್ ಪಾಸ್ ಪುಸ್ತಕ. ಎಟಿಎಂ ಕಾರ್ಡ್ ಹಾಗೂ ಶಾಲೆ ದಾಖಲಾತಿಗಳು ದೊರೆತಿದ್ದವು.  


ಇವುಗಳನ್ನು ಸಂಬಂಧಪಟ್ಟ ಅದೇ ಗ್ರಾಮದ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕಿಯಾದ ಎಲ್ ರೇಣುಕಾ ರವರಿಗೆ ವಾಪಸ್ಸು ನೀಡಿ ಪ್ರಾಮಾಣಿಕತೆ ಮೆರೆದಿದ್ದರು.  ಅದೇ ರೀತಿ ಸುಹಾಸ್ ಪ್ರಸಾದ್ ಸಿ ಚೋರಡಿ ಗ್ರಾಮ ರವರು ಜ.26 ರಂದು ಚೋರಡಿ ಗ್ರಾಮದ ಎನ್ ಹೆಚ್ 69 ರಸ್ತೆಯಲ್ಲಿ ಸಿಕ್ಕ ಪರ್ಸನಲ್ಲಿ ಸುಮಾರು 7 ಲಕ್ಷ ಮೌಲ್ಯದ ಚಿನ್ನಾಭರಣಗಳು ಪತ್ತೆಯಾಗಿದ್ದವು.  


ಇದರ ಮಾಲೀಕರಾದ ನಿವೃತ್ತ ಐಜಿಪಿ ಸುರೇಶ್ ಬಾಬುರವರ ಮಗಳಾದ ಶಶಿ ಶಾಲಿನಿರವರಿಗೆ ವಾಪಸು ನೀಡಿ ಪ್ರಾಮಾಣಿಕತೆಯನ್ನು ಮೆರೆದಿರುತ್ತಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close